/newsfirstlive-kannada/media/post_attachments/wp-content/uploads/2024/07/darshan-31.jpg)
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್​ ಅಂಡ್​ಗೆ ಮತ್ತಷ್ಟು ದಿನ ಜೈಲೇ ಗತಿಯಾಗಿದೆ. ನಟ ದರ್ಶನ್​ ಸೇರಿದಂತೆ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಜುಲೈ 18ರವರೆಗೆ ಕೋರ್ಟ್​ ವಿಸ್ತರಣೆ ಮಾಡಿದ್ದು, ಡಿ-ಗ್ಯಾಂಗ್​ ಪರಪ್ಪನ ಅಗ್ರಹಾರದಲ್ಲಿ ಮತ್ತಷ್ಟು ದಿನ ದೂಡಬೇಕಿದೆ.
ಜುಲೈ 4ಕ್ಕೆ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ಕೋರ್ಟ್​, ನಟ ದರ್ಶನ್​ ಸೇರಿದಂತೆ ಎಲ್ಲ 17 ಆರೋಪಿಗಳಿಗೂ ಮತ್ತೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಇನ್ನು 6ನೇ ಆರೋಪಿ ಮತ್ತು 8ನೇ ಆರೋಪಿಯ ವಾಹನಗಳನ್ನು ಬಿಡುಗಡೆಗೆ ಕೋರಿ ಅರ್ಜಿ ಸಲ್ಲಿಲಾಗಿದ್ದು, ಜುಲೈ 10ರಂದು ಇದರ ವಿಚಾರಣೆ ನಡಯಲಿದೆ ಎಂದು ಆರೋಪಿಗಳ ಪರ ವಕೀಲ ರಂಗನಾಥ್ ರೆಡ್ಡಿ ಮಾಹಿತಿ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/darshan-Lowyer.jpg)
ಇನ್ನು ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್​ ಪರ ಸ್ಯಾಂಡಲ್​ವುಡ್​ನಲ್ಲಿ ಪರ-ವಿರೋಧಿ ಚರ್ಚೆಗಳು ನಡೆಯುತ್ತಿವೆ. ಕೆಲವರು ದರ್ಶನ್​ ಮಾಡಿದ್ದು ತಪ್ಪು ಎನ್ನುತ್ತಿದ್ರೆ, ಇನ್ನೂ ಕೆಲವರು ದರ್ಶನ್​ ಪರ ವಕಾಲತ್ತು ವಹಿಸುತ್ತಿದ್ದಾರೆ. ಅದೇ ರೀತಿ ದರ್ಶನ್​ ಜೊತೆ ತಾರಕ್​ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಶಾನ್ವಿ ಶ್ರೀವಾಸ್ತವ್ ಕೂಡ ದರ್ಶನ್​ ಪರ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದರ್ಶನ್ ಜೊತೆಗೆ ನನಗ್ಯಾವುದೇ ಕೆಟ್ಟ ಅನುಭವ ಆಗಿಲ್ಲ. ನ್ಯಾಯಾಂಗದ ಮೇಲೆ ನಂಬಿಕೆ ನನಗಿದೆ. ತಪ್ಪಾಗಿದ್ರೆ ಶಿಕ್ಷೆ ಆಗೇ ಆಗುತ್ತೆ ಎಂದಿದ್ದಾರೆ.
/newsfirstlive-kannada/media/post_attachments/wp-content/uploads/2024/07/Shanvi.jpg)
ಇನ್ನು ತಾರಕ್​ ಸಿನಿಮಾದದಲ್ಲಿ ದರ್ಶನ್​ ಜೊತೆ ನಟಿಸಿದ್ದ ಮತ್ತೊಬ್ಬ ನಟಿ ಯಮುನಾ ಶ್ರೀನಿಧಿ ದರ್ಶನ್ ನಿರಪರಾಧಿ ಆಗಿ ಹೊರಗೆ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದರ್ಶನ್ ನನಗೆ ಮಗನ ಸಮಾನ. ಆತ ಕೊಲೆ ಮಾಡಿರೋಕೆ ಸಾಧ್ಯವಿಲ್ಲ ಎಂದು ದರ್ಶನ್​ ಪರ ಬ್ಯಾಟ್ ಬೀಸಿದ್ದಾರೆ.
/newsfirstlive-kannada/media/post_attachments/wp-content/uploads/2024/07/yamuna.jpg)
ಒಟ್ಟಾರೆ. ಯಾರೂ ಏನೇ ಹೇಳಿದ್ರೂ ದರ್ಶನ್​ ಕೊಲೆ ಮಾಡಿದ್ದಾರೋ ಇಲ್ವೋ ಅನ್ನೋದನ್ನು ನಿರ್ಧರಿಸೋದು ಕೋರ್ಟ್​. ಪೊಲೀಸರು ಸರಿಯಾದ ರೀತಿ ತನಿಖೆ ಮುಂದುವರಿಸಿ, ರೇಣುಕಾಸ್ವಾಮಿ ಮರ್ಡರ್​ ಹಿಂದಿನ ಅಸಲಿ ಸತ್ಯಗಳನ್ನು ಬಹಿರಂಗ ಪಡಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us