/newsfirstlive-kannada/media/post_attachments/wp-content/uploads/2024/04/Dwarakish_3.jpg)
ಸ್ಯಾಂಡಲ್​ವುಡ್​ ಹಿರಿಯ ನಟ ದ್ವಾರಕೀಶ್​ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಮ್ಮ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ದ್ವಾರಕೀಶ್​​ ಬೆಳಕಗಾಲಿದ್ದಾರೆ. ನಾಳೆಯೇ ಅವರ ಕಣ್ಣುಗಳನ್ನು ಬೇರೆಯವರಿಗೆ ಕಸಿ ಮಾಡಲಿದ್ದಾರೆ.
ದ್ವಾರಕೀಶ್​ ಅವರು ನೇತ್ರದಾನ ಮಾಡಿದ ಬಗ್ಗೆ ನಾರಾಯಣ ನೇತ್ರಾಲಯದ ಡಾ ಶೈಲಜಾ ಮಾತನಾಡಿದ್ದಾರೆ. ನಾಳೆಯೇ ಇಬ್ಬರಿಗೆ ದ್ವಾರಕೀಶ್ ಅವರ ಕಣ್ಣಿಂದ ಬೆಳಕು ಸಿಗಲಿದೆ. ನಾಳೆ ಬೆಳಗ್ಗೆ ದ್ವಾರಕೀಶ್ ಅವರ ಕಣ್ಣು ಬೇರೆಯವರಿಗೆ ಕಸಿ ಮಾಡುವ ಕೆಲಸ ಆಗುತ್ತೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಡಾ ಶೈಲಜಾ, ತಾವೇ ಫೋನ್ ಮಾಡಿ ಅಪ್ರೋಚ್ ಮಾಡಿದ್ವಿ. ಕುಟುಂಬದವರು ಒಪ್ಪಿಗೆ ಕೊಟ್ಟು ಸಾರ್ಥಕತೆ ಮೆರೆದಿದ್ದಾರೆ. ದ್ವಾರಕೀಶ್ ಅವರ ಕಣ್ಣಿನ ಕಾರ್ನಿಯಾದಿಂದ ಇಬ್ಬರಿಗೆ ಪೂರ್ತಿ ದೃಷ್ಟಿ ಸಿಗಲಿದೆ. ದ್ವಾರಕೀಶ್ ಅವರ ಪೂರ್ತಿ ಕಣ್ಣು ತೆಗೆದುಕೊಂಡಿದ್ದೇವೆ. ಇಬ್ಬರು ಪೂರ್ತಿ ಕಣ್ಣಿಲ್ಲದಿರುವವರಿಗೆ ಸಹಾಯ ಆಗುತ್ತೆ. ಏಳೆಂಟು ಜನರಿಗೆ ದ್ವಾರಕೀಶ್ ಅವರ ಕಣ್ಣಿಂದ ಸಹಾಕಾರಿಯಾಗಲಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us