ಯಶ್ ತೋಳಿನಲ್ಲಿ ಮಗುವಾದ ಸಿಂಡ್ರೆಲಾ ರಾಧಿಕಾ ಪಂಡಿತ್..! Cute Photo

author-image
Ganesh
Updated On
ಯಶ್ ತೋಳಿನಲ್ಲಿ ಮಗುವಾದ ಸಿಂಡ್ರೆಲಾ ರಾಧಿಕಾ ಪಂಡಿತ್..! Cute Photo
Advertisment
  • ಸೋಶಿಯಲ್ ಮೀಡಿಯಾದಲ್ಲಿ ಸೆಂಡ್ರೆಲಾ ಬಿಗ್​ ಸರ್ಪ್ರೈಸ್
  • ಅಮೆರಿಕ ತೆರಳಿರುವ ತಾರಾ ದಂಪತಿ ಯಶ್-ರಾಧಿಕಾ
  • ಟಾಕ್ಸಿಕ್, ರಾಮಾಯಣ ಶೂಟಿಂಗ್ ಮುಗಿಸಿ ವಿದೇಶ ಪ್ರಯಾಣ

ಸ್ಯಾಂಡಲ್​ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ತಮ್ಮ ಪತಿ ರಾಕಿಂಗ್ ಸ್ಟಾರ್ ಯಶ್​ ಜೊತೆಗಿನ ಮುದ್ದಾದ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋವನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಎರಡು ಸಿನಿಮಾಗಳ ಶೂಟಿಂಗ್ ಮುಗಿಸಿ ದೀರ್ಘ ಪ್ರವಾಸಕ್ಕೆಂದು ಯಶ್ ದಂಪತಿ ಅಮೆರಿಕಾಗೆ ತೆರಳಿದೆ. ಅಲ್ಲಿಗೆ ತಲುಪಿದ್ದೇ ಪತ್ನಿ ರಾಧಿಕಾ ಅವರನ್ನು ಮಗುವಿನಂತೆ ಎತ್ತಿಕೊಂಡಿದ್ದಾರೆ.

ಇದನ್ನೂ ಓದಿ: ರೂಲ್ಸ್​​ ಬ್ರೇಕ್..​ ಬೇಕಾಬಿಟ್ಟಿ ಸಂಚಾರ.. ಆಟೋಗಳ ಕಳ್ಳಾಟ ಕಂಡು ಆರ್​ಟಿಓ ಅಧಿಕಾರಿಗಳೇ ಶಾಕ್..!

ಇಷ್ಟು ದಿನ ಯಶ್ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾದಲ್ಲಿ ಬ್ಯುಸಿ ಇದ್ದರು. ಈ ಕಾರಣದಿಂದ ಬ್ರೇಕ್ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಬ್ಬರೂ ಹೊರಗೆ ತೆರಳಿ ಸುತ್ತಾಡಲು ಸಾಧ್ಯವಾಗಿರಲಿಲ್ಲ. ಈಗ ಇವರು ಬಿಡುವು ಮಾಡಿಕೊಂಡು ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿ ಕ್ಲಿಕ್ಕಿಸಿದ ಫೋಟೋ ಇದಾಗಿದೆ.

ವರದಿಗಳ ಪ್ರಕಾರ ಯಶ್ ಹಾಗೂ ರಾಧಿಕಾ ಪಂಡಿತ್ ಅಮೆರಿಕಕ್ಕೆ ತೆರಳಿದ್ದಾರೆ. ಮೊನ್ನೆಯಷ್ಟೇ ಯಶ್​ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಏರ್​ಪೋರ್ಟ್​ಗೆ ಬರುತ್ತಿದ್ದಂತೆ ಪಾಪರಾಜಿಗಳು ಮುಗಿಬಿದ್ದು ವಿಡಿಯೋ ಹಾಗೂ ಫೋಟೋ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ವೀಕ್ಷಕರ ಅಚ್ಚುಮೆಚ್ಚಿನ ಸೀರಿಯಲ್​ ಮುಕ್ತಾಯ.. ನೀನಾದೆ ನಾ ಅಂತ್ಯಕ್ಕೆ ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment