newsfirstkannada.com

ಮತ್ತೆ ಒಂದಾದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಕ್ಯೂಟ್‌ ಜೋಡಿ; ಏನಿದು ಹೊಸ ಸುದ್ದಿ?

Share :

Published August 28, 2024 at 6:40pm

Update August 30, 2024 at 2:45pm

    ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್‌ ಪಡೆದುಕೊಂಡಿದ್ದ ಜೋಡಿ

    ಗಿಚ್ಚಿ ಗಿಲಿಗಿಲಿ ಶೋದಲ್ಲೂ ಸಖತ್ ಮನರಂಜನೆ ಕೊಟ್ಟಿದ್ದ ನಿವೇದಿತಾ

    ಬೇರೆ ಬೇರೆ ಆದರೂ ಈಗಲೂ ಒಬ್ಬರನ್ನೊಬ್ಬರು ಬಿಟ್ಟು ಕೊಡಲ್ಲ!

ಕನ್ನಡದ ಗಾಯಕ ಚಂದನ್ ಶೆಟ್ಟಿ ಹಾಗೂ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಗಿಚ್ಚಿ ಗಿಲಿಗಿಲಿ ಶೋ ಮೂಲಕ ನಿವೇದಿತಾ ಗೌಡ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದರು. ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರೋ ಬಿಗ್​​ಬಾಸ್​ ಬೆಡಗಿ ಡಿವೋರ್ಸ್‌ ಬೆನ್ನಲ್ಲೇ ಮತ್ತೆ ಹೊಸ ಅಪ್ಡೇಟ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಗುಡ್‌ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ, ನಿವೇದಿತಾ ಜೋಡಿ.. ವಿಚ್ಛೇದನದ ಬಳಿಕ ಹೊಸ ಜೀವನ ಆರಂಭ 

ಇದನ್ನೂ ಓದಿ: ಡಿವೋರ್ಸ್‌ ಬೆನ್ನಲ್ಲೇ ಚಂದನ್​ ಶೆಟ್ಟಿ ಮಾಜಿ ಪತ್ನಿ ಪ್ರತ್ಯಕ್ಷ; ನಿವೇದಿತಾ ಗೌಡ ವಿಡಿಯೋ ವೈರಲ್! 

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಬದುಕು ಅಂತ್ಯ ಕಂಡಿದೆ. ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಈ ಸ್ಟಾರ್ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಡಿವೋರ್ಸ್‌ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಖುದ್ದು ಚಂದನ್, ನಿವೇದಿತಾ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದೂರ ದೂರ ಆಗಿದ್ದಾರೆ.

ಇಬ್ಬರು ಬೇರೆ, ಬೇರೆ ಆದರೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಬ್ಬರನ್ನೊಬ್ಬರು ಬಿಟ್ಟು ಕೊಡಲ್ಲ. ಇದಕ್ಕೆ ಸಾಕ್ಷಿಯಾಗಿರೋದು ಹೊಸ ಸಿನಿಮಾ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಟ್ಟಿಗೆ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್‌ನಲ್ಲಿ ಈ ಚಿತ್ರ ಮೂಡಿ ಬರುತ್ತಾ ಇದ್ದು, ಪುನೀತ್ ಶ್ರೀನಿವಾಸ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಹಾಟ್​ ಲುಕ್​ನಲ್ಲಿ ಚಂದನ್​​ ಶೆಟ್ಟಿ ಮಾಜಿ ಪತ್ನಿ; ನಿವೇದಿತಾ ಗೌಡಗೆ ನೆಟ್ಟಿಗರು ಹೀಗಾ ಅನ್ನೋದು! 

ಚಂದನ್ ಶೆಟ್ಟಿ, ನಿವೇದಿತಾ ಗೌಡ ಅಭಿನಯದ ಸಿನಿಮಾದ ಶೀರ್ಷಿಕೆ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ಶುಕ್ರವಾರ ಅಂದ್ರೆ ಆಗಸ್ಟ್ 30ರಂದು ಚಂದನ್, ನಿವೇದಿತಾ ಸಿನಿಮಾದ ಟೈಟಲ್ ರಿವೀಲ್ ಆಗಲಿದೆ. ಈ ಮಾಹಿತಿಯನ್ನು ಹಂಚಿಕೊಂಡಿರುವ ಇಬ್ಬರು ನಮ್ಮ ಹೊಸ ಸಿನಿಮಾಗೆ ಅಭಿಮಾನಿಗಳ ಬೆಂಬಲ ಕೋರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಒಂದಾದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಕ್ಯೂಟ್‌ ಜೋಡಿ; ಏನಿದು ಹೊಸ ಸುದ್ದಿ?

https://newsfirstlive.com/wp-content/uploads/2024/08/Chandan-Shetty-Nivedita-Gowda.jpg

Load More