newsfirstkannada.com

Breaking News; ರಾಜಕೀಯಕ್ಕೆ ಡಾಲಿ ಧನಂಜಯ್​ ಎಂಟ್ರಿ? ಪ್ರತಾಪ್​ ಸಿಂಹಗೆ ಎದುರಾಳಿ?

Share :

Published February 17, 2024 at 1:09pm

Update February 17, 2024 at 1:28pm

    ಸಿನಿಮಾದಿಂದ ರಾಜಕೀಯದತ್ತ ಮುಖ ಮಾಡ್ತಾರಾ ಡಾಲಿ

    ಡಾಲಿ ಧನಂಜಯ್​ಗೆ ರಾಜಕೀಯದ ಒಲವಿದೆಯಾ?

    ಡಾಲಿ ರಾಜಕೀಯ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ

ಸ್ಯಾಂಡಲ್​ವುಡ್​ ನಟ ಡಾಲಿ ಧನಂಜಯ್ ರಾಜಕೀಯಕ್ಕೆ ಎಂಟ್ರಿ ನೀಡುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಲಿಡ್ಕರ್​ ಕಂಪನಿಯ ಬ್ರ್ಯಾಂಡ್​ ಅಂಬಾಸಿಡರ್​ ಆಗಿರುವ ಡಾಲಿ ಇದೀಗ ರಾಜಕೀಯದತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗಂತೂ ಅಚ್ಚರಿಗೆ ಕಾರಣವಾಗಿದೆ.

ಸದ್ಯದಲ್ಲೇ ಲೋಕಸಭೆ 2024 ಬರಲಿದೆ. ಹೀಗಾಗಿ ಡಾಲಿ ಹೆಸರು ಮುನ್ನಲೆಗೆ ಬಂದಿದೆ. ಸದ್ಯ ಕೆಲವು ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಧನಂಜಯ್​ ಅವರನ್ನು ಕಾಂಗ್ರೆಸ್ ಮುಖಂಡರು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಡಾಲಿ ರಾಜ್ಯ ಸರ್ಕಾರ, ಕಾಂಗ್ರೆಸ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಈಗಾಗಲೇ ಮುಖಂಡರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಡಾಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮೈಸೂರಿನಿಂದ ಲೋಕಸಭಾ ಕಣಕ್ಕೆ ನಿಲ್ಲಿಸುವ ಸಾಧ್ಯತೆ ಇದೆ.

ಡಾಲಿಗೆ ಯಾಕೆ ಅಷ್ಟೊಂದು ಬೇಡಿಕೆ?

ಧನಂಜಯ್​ ಸಿನಿಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗ ಸೃಷ್ಟಿಸಿದ್ದಾರೆ. ಅಪಾರ ಫ್ಯಾನ್‌ ಫಾಲೋಯಿಂಗ್‌ ಹೊಂದಿದ್ದಾರೆ. ಡಾಲಿ ಲಿಂಗಾಯತ ಸಮುದಾಯದ ನಾಯಕನಾಗಿದ್ದಾರೆ.  ಮೈಸೂರಲ್ಲಿ ಕಾಂಗ್ರೆಸ್​​ ಪಕ್ಷ ಎಸ್​ಸಿ, ಕುರುಬ, ಮುಸ್ಲಿಂ ಮತಗಳನ್ನು​ ಸೆಳೆಯುವ ಸಲುವಾಗಿ ಡಾಲಿಯನ್ನು ಪಕ್ಷಕ್ಕೆ ಕರೆಸಿಕೊಳ್ಳಲು ಚಿಂತಿಸಿದೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ, ಲಿಂಗಾಯತ ಶಕ್ತಿ ಸೇರಿಕೊಂಡರೆ ಗೆಲ್ಲಬಹುದೆಂಬ ಲೆಕ್ಕಾಚಾರವನ್ನು ಕಾಂಗ್ರೆಸ್​ ಪಕ್ಷ ಹಾಕಿಕೊಂಡಿದೆ.

ಡಾಲಿ ಸಾಮಾಜಿಕ ಬದ್ಧತೆ, ಸೈದ್ಧಾಂತಿಕ ಸ್ಪಷ್ಟತೆ ಇರುವ ವ್ಯಕ್ತಿಯಾಗಿದ್ದು, ಧನಂಜಯ್ ಚಿಂತನೆಗಳು ಕಾಂಗ್ರೆಸ್‌ಗೆ ಹೆಚ್ಚು ಹತ್ತಿರವಾಗಿವೆ. ಪ್ರತಾಪ್‌ ಸಿಂಹ ಜನಪ್ರಿಯತೆ ಎದುರಿಗೆ ಡಾಲಿ ಜನಪ್ರಿಯತೆ ಬಳಸಿಕೊಂಡು ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್​ ಮುಖಂಡರು ಡಾಲಿಯನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಡಾಲಿ ಧನಂಜಯ್​ ಕೈಯಲ್ಲಿ ಸಾಕಷ್ಟು ಸಿನಿಮಾಗಳಿಗೆ. ಜೆಬ್ರಾ, ಉತ್ತರಖಂಡ, ಪುಷ್ಟ-2, ಅಣ್ಣ ಫ್ರಂ ಮೆಕ್ಸಿಕೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News; ರಾಜಕೀಯಕ್ಕೆ ಡಾಲಿ ಧನಂಜಯ್​ ಎಂಟ್ರಿ? ಪ್ರತಾಪ್​ ಸಿಂಹಗೆ ಎದುರಾಳಿ?

https://newsfirstlive.com/wp-content/uploads/2024/02/DHANJAY-1.jpg

Load More