/newsfirstlive-kannada/media/post_attachments/wp-content/uploads/2024/11/Guruprasad.jpg)
ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಅಪಾರ್ಟ್​ಮೆಂಟ್​ನಲ್ಲಿ​ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸದಾ ನಗುಮೊಗದಿಂದ ಮಾತನಾಡುತ್ತಿದ್ದ ಗುರು ಪ್ರಸಾದ್​​ ಇದೀಗ ಇನ್ನಿಲ್ಲ ಎಂಬ ಮಾತು ಮಾತ್ರ ಸ್ಯಾಂಡಲ್​ವುಡ್​ಗೆ ಬರಸಿಡಿಲು ಅಪ್ಪಳಿದಂತಾಗಿದೆ.
ಗುರು ಪ್ರಸಾಸ್​​ ಸಿನಿಮಾ, ನಿರ್ದೇಶನ, ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದರು. ಮಾತ್ರವಲ್ಲದೆ ಅನೇಕರಿಗೆ ಸಿನಿಮಾ ನಿರ್ದೇಶನ ಬಗ್ಗೆ ತರಗತಿ ಕೂಡ ನೀಡುತ್ತಿದ್ದರು. ಇಷ್ಟೆಲ್ಲಾ ಹಸನ್ಮುಖಿಯಾಗಿದ್ದ ನಿರ್ದೇಶಕನೀಗ ಹುಟ್ಟು ಹಬ್ಬಕ್ಕೂ ಮುನ್ನವೇ ಸಾವನ್ನಪ್ಪಿರುವುದು ಸ್ಯಾಂಡಲ್​ವುಡ್​ಗೆ ಬೇಸರದ ಸಂಗತಿಯಾಗಿದೆ.
/newsfirstlive-kannada/media/post_attachments/wp-content/uploads/2024/11/GURU_PRASAD.jpg)
ಗುರು ಪ್ರಸಾದ್​​ ಪರಿಚಯ
ಗುರುಪ್ರಸಾದ್​ ಪೂರ್ಣ ಹೆಸರು ಗುರುಪ್ರಸಾದ ರಾಮಚಂದ್ರ ಶರ್ಮಾ. ಮೂಲತಃ ಕನಕಪುರದವರು. ನವೆಂಬರ್​ 2, 1972ರಲ್ಲಿ ಜನಿಸಿದ್ದರು. ಸದ್ಯ ಅವರಿಗೆ 52 ವರ್ಷ ವಯಸ್ಸಾಗಿತ್ತು. ನಿನ್ನೆ ಅವರು 52ನೇ ಹುಟ್ಟುಹಬ್ಬವನ್ನು ಆಚರಿಸಬೇಕಾಗಿತ್ತು. ಆದರೀಗ ಗುರುಪ್ರಸಾದ್​ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 3 ದಿನಕ್ಕೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ನಿರ್ದೇಶಕ ಮಾತ್ರವಲ್ಲ ನಟನೂ ಹೌದು
2006ರಲ್ಲಿ ಗುರುಪ್ರಸಾದ್​ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 5 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಮಠ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿದ್ದ ಸ್ಯಾಂಡಲ್​​ವುಡ್​ಗೆ ಕಾಳಿಟ್ಟರು. ಬಳಿಕ ಎದ್ದೇಳು ಮಂಜುನಾಥ, ಡೈರೆಕ್ಟರ್ಸ್ ಸ್ಪೆಷಲ್, ಎರಡನೇ ಸಲ, ರಂಗನಾಯಕ ಸಿನಿಮಾ ನಿರ್ದೇಶನ ಮಾಡಿದ್ದರು. ಮಾತ್ರವಲ್ಲದೆ ಹಲವು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ.
ಆ್ಯಕ್ಷನ್​ ಕಟ್​ ಹೇಳುವ ನಿರ್ದೇಶಕನ ಆತ್ಮಹತ್ಯೆ ಕಹಾನಿ
ಗುರುಪ್ರಸಾದ್​ರ 6ನೇ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಅದೇಮಾ ಸಿನಿಮಾದ ಶೂಟಿಂಗ್ ಸದ್ಯ ನಡೀತಿತ್ತು. ಆದರೀಗ ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್​ ಮೃತದೇಹ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us