/newsfirstlive-kannada/media/post_attachments/wp-content/uploads/2024/06/Yuva-Rajkumar-Divorce-3.jpg)
ಸ್ಯಾಂಡಲ್​​ವುಡ್​ನಲ್ಲಿ ಡಿವೋರ್ಸ್ ಎಂಬ ಪೆಡಂಭೂತ ತಾಂಡವವಾಡುತ್ತಿದೆ. ಕ್ಯೂಟ್​ ಕಪಲ್​ ಎಂದೇ ಖ್ಯಾತಿ ಪಡೆದಿದ್ದ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾದ ಬಳಿಕ ಇದೀಗ ಮತ್ತೊಂದು ಆಘಾತ ಕೇಳಿಬಂದಿದೆ. ದೊಡ್ಮನೆಯಲ್ಲಿ ವಿಚ್ಛೇದನ ಎಂಬ ಶಬ್ಧ ಸ್ಫೋಟಿಸಿದೆ.
ಹೌದು. ಸ್ಯಾಂಡಲ್​ವುಡ್​ ನಟ ಯುವ ರಾಜ್​ಕುಮಾರ್​ ಮತ್ತು ಪ್ರೀತಿಸಿ ವಿವಾಹವಾದ ಮಡದಿಯ ನಡುವೆ ವಿಚ್ಛೇದನ ಎಂಬ ಶಬ್ಧ ಕೇಳಿಬಂದಿದೆ. ಈ ಸುದ್ದಿ ಇದೀಗ ಸ್ಯಾಂಡಲ್​ವುಡ್​ನಲ್ಲಿ ಕರ್ಕಶ ಮಾಡಿದೆ.
ಪ್ರೀತಿಸಿ ವಿವಾಹವಾದ ಜೋಡಿ
ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಭೈರಪ್ಪ ಪ್ರೀತಿಸಿ ವಿವಾಹವಾದ ಜೋಡಿ. ಆದರೀಗ ಈ ಜೋಡಿನ ನಡುವೆ ಡಿವೋರ್ಸ್​ ಎಂಬ ಪದ ಬಂದಿರುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸಂಗತಿ. ಆದರೆ ಇದೀಗ ಸ್ಯಾಂಡಲ್​ವುಡ್​ ಸುತ್ತ ಹರಿದಾಡುತ್ತಿರುವ ಸುದ್ದಿ ಸುಳ್ಳಾಗಲಿ ಎಂಬುದು ಅಭಿಮಾನಿಗಳ ಆಸೆ.
/newsfirstlive-kannada/media/post_attachments/wp-content/uploads/2024/06/Yuva-Rajkumar-Divorce.jpg)
ಶ್ರೀದೇವಿ ಭೈರಪ್ಪ ಯಾರು? ಯಾವ ಊರು?
ಮೂಲತಃ ಮೈಸೂರಿನ ಹುಡುಗಿ ಶ್ರೀದೇವಿ ಭೆರಪ್ಪ. ಅಲ್ಲೇ ಹುಟ್ಟಿ ಅಲ್ಲೇ ಬೆಳೆದು ಉನ್ನತ ಶಿಕ್ಷಣ ಮುಗಿಸಿದರು.
ಏಳು ವರ್ಷ ಪ್ರೀತಿ ಕೊನೆಯಾಯ್ತಾ?
ಯುವ ಮತ್ತು ಶ್ರೀದೇವಿ ಪ್ರಾರಂಭದಲ್ಲಿ ಫ್ರೆಂಡ್ಸ್​ ಆಗಿದ್ದರು. ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿದೆ. ಅಚ್ಚರಿಯ ಸಂಗತಿ ಎಂದರೆ 7 ವರ್ಷದಿಂದ ಈ ಜೋಡಿ ಪ್ರೀತಿಸಿ ಬಳಿಕ ವಿವಾಹವಾಗುತ್ತಾರೆ.
/newsfirstlive-kannada/media/post_attachments/wp-content/uploads/2024/06/Yuva-rajkumar.jpg)
2019ರಲ್ಲಿ ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ವಿವಾಹವಾಗುತ್ತಾರೆ. ಬಳಿಕ ರಾಜ್​ ಫ್ಯಾಮಿಲಿ ಸೇರುತ್ತಾರೆ. ಅಂದಹಾಗೆಯೇ ಶ್ರೀದೇವಿ ‘ಡಾ.ರಾಜ್​​ ಕುಮಾರ್​ ಸಿವಿಲ್​ ಸರ್ವೀಸ್​ ಅಕಾಡೆಮಿ’ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೀಗ ಈ ಜೋಡಿ ನಡುವೆ ಮನಸ್ಥಾಪವಿದೆ ಎಮದು ಹೇಳಲಾಗುತ್ತಿದೆ.
ಸದ್ಯ ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ದೂರವಾಗಲು ಬಯಸಿದ್ದಾರಂತೆ. ಹರಿದಾಡುತ್ತಿರುವ ಮಾಹಿತಿ ಪ್ರಕಾರ ಶ್ರೀದೇವಿ ವಿದೇಶದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us