/newsfirstlive-kannada/media/post_attachments/wp-content/uploads/2025/02/DAALIdhananjaya.jpg)
ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಮನೆಯಲ್ಲಿ ಸಾಲು ಸಾಲು ಮದುವೆ ಸಂಭ್ರಮ ಮನೆ ಮಾಡಿದೆ. ಸಿನಿತಾರೆಯರ ಬ್ಯುಸಿ ಶೆಡ್ಯೂಲ್ಡ್ನಲ್ಲಿ ಯಾವ ಯಾವ ಮದುವೆಗಳಿಗೆ ವಿಸಿಟ್ ಕೊಡಬೇಕು ಅನ್ನೋ ಪ್ಲಾನಿಂಗ್ನಲ್ಲಿದ್ರೆ, ಮದುವೆ ಮನೆಯಲ್ಲಿ ಹಳದಿ ಶಾಸ್ತ್ರ ಸಖತ್ ಗ್ರ್ಯಾಂಡ್ ಆಗಿ ನೆರವೇರಿದೆ.
ಸ್ಯಾಂಡಲ್ವುಡ್ನಲ್ಲಿ ಈಗ ಮದುವೆ ಸಂಭ್ರಮ ಮನೆ ಮಾಡಿದೆ. ಒಂದು ಕಡೆ ಡಾಲಿ ಧನಂಜಯ್ ಈ ಫೆಬ್ರುವರಿ 16ರಂದು ಸಪ್ತಪದಿ ತುಳಿಯಲಿದ್ದಾರೆ. ಇನ್ನೊಂದು ಕಡೆ ರಕ್ಷಿತಾ ಪ್ರೇಮ್ ಸಹೋದರ ರಾಣಾ ಮದುವೆ ಕೂಡ ನಡೀತಿದೆ. ಮತ್ತೊಂದು ಕಡೆ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಮಾಲಾ ಅವರ ಮಗಳು ಸೌಂದರ್ಯ ಕೂಡ ಹೊಸ ಬದುಕಿಗೆ ಮುನ್ನುಡಿ ಬರೆಯಲು ರೆಡಿಯಾಗಿದ್ದಾರೆ.
ಜಯಮಾಲಾ ಮಗಳ ಮದುವೆ ಹಳದಿ ಶಾಸ್ತ್ರದ ಸಂಭ್ರಮ
ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಇರುವ ಜಯಮಾಲಾ ಮಗಳು ಸೌಂದರ್ಯ ಮದುವೆ ಎರಡು ದಿನಗಳ ಕಾಲ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೌಂದರ್ಯ ಮದುವೆ ನಡೆಯಲಿದ್ದು, ಲಲಿತ್ ಅಶೋಕ್ ಹೊಟೇಲ್‌ನಲ್ಲಿ ಸಂಭ್ರಮದ ಹಳದಿ ಶಾಸ್ತ್ರ ನಡೆದಿದೆ.
ಅದ್ಧೂರಿಯಾಗಿ ನಡೆದ ಹಳದಿಶಾಸ್ತ್ರದಲ್ಲಿ ಕನ್ನಡ ಚಿತ್ರರಂಗದ ಅನೇಕ ನಟಿಯರು ಭಾಗವಹಿಸಿದ್ದಾರೆ. ಸುಧಾರಾಣಿ, ಮಾಳವಿಕಾ ಅವಿನಾಶ್ ಮತ್ತು ಶ್ರುತಿ ಹಳದಿ ಬಣ್ಣದ ಉಡುಗೆಯಲ್ಲಿ ಮಿಂಚಿದರು. ಮನಸಾರೆ ಕುಣಿದು ಕುಪ್ಪಳಿಸಿದರು. ಪ್ರಿಯಾಂಕ ಉಪೇಂದ್ರ, ಹರ್ಷಿಕಾ ಪೂಣಚ್ಚ, ಅನು ಪ್ರಭಾಕರ್, ಭಾರತಿ ವಿಷ್ಣುವರ್ಧನ್ ಸೇರಿ ಅನೇಕರು ಸಂಭ್ರಮದಲ್ಲಿ ಮಿಂದೆದ್ದರು.
ಇದನ್ನೂ ಓದಿ:Muda Case; ಸಿಎಂ ಸಿದ್ದರಾಮಯ್ಯಗೆ ಇಂದು ಬಿಗ್ ಡೇ.. ಎಲ್ಲರ ಚಿತ್ತ ಹೈಕೋರ್ಟ್ ತೀರ್ಪಿನತ್ತ
ಅಂದ್ಹಾಗೇ ಸೌಂದರ್ಯ ಕೈ ಹಿಡಿಯುತ್ತಿರುವ ಹುಡುಗನ ಹೆಸರು ರುಷಬ್ ಕೆ. ಪೊಲೀಸ್ ಮಹಾ ನಿರ್ದೇಶಕ ಕೆ.ರಾಮಚಂದ್ರ ರಾವ್ ಮತ್ತು ರೋಹಿಣಿ ಪುತ್ರ. ವಿವಾಹ ಮಹೋತ್ಸವಕ್ಕೆ 5,000ಕ್ಕೂ ಹೆಚ್ಚಿನ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಸಹೋದರ ರಾಣಾಗೆ ಅರಿಶಿನ ಹಚ್ಚಿದ ಕ್ರೇಜಿ ಕ್ವೀನ್ ರಕ್ಷಿತಾ
ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ತವರು ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಟಿ ರಕ್ಷಿತಾ ಸೋದರ ರಾಣಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸೋದರನಿಗೆ ರಕ್ಷಿತಾ ಅರಿಶಿನ ಶಾಸ್ತ್ರ ಮಾಡಿದ್ರೆ, ನಿರ್ದೇಶಕ ಪ್ರೇಮ್ ಕೂಡ ಬಾಮೈದುನನಿಗೆ ಅರಿಶಿನ ಹಚ್ಚಿದರು.
ಇನ್ನು, ನಟ ರಾಣಾ ಮದುವೆ, ಅರಮನೆ ಮೈದಾನದಲ್ಲಿ ನಡೆಯಲಿದೆ. ನಟ ಶಿವಣ್ಣ, ಕಿಚ್ಚ ಸುದೀಪ್ ಸೇರಿ ಗಣ್ಯರ ಹಾಜರಿ ಪಕ್ಕಾ. ವಿಶೇಷ ಅಂದ್ರೆ ಕೇಸ್ವೊಂದರಲ್ಲಿ ಜೈಲಿನಿಂದ ಹೊರ ಬಂದಿರುವ ನಟ ದರ್ಶನ್ ಕೂಡ ಭಾಗಿಯಾಗ್ತಾರೆ ಎಂಬ ಸುಳಿವನ್ನ ರಕ್ಷಿತಾ ಬಿಟ್ಟುಕೊಟ್ಟಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿ ಇರೋ ಜೋಡಿಗಳನ್ನ ಹರಸಿ ಹಾರೈಸಲು ಚಿತ್ರರಂಗದ ನಟ, ನಟಿಯರ ಆಗಮನಕ್ಕೆ ಅರಮನೆ ಮೈದಾನ ಸಿಂಗಾರಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ