/newsfirstlive-kannada/media/post_attachments/wp-content/uploads/2024/06/sanvi-1.jpg)
ಸ್ಯಾಂಡಲ್ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಲ್ಟಿ ಟ್ಯಾಲೆಂಟೆಡ್ ಮತ್ತು ಸಖತ್ ಬ್ಯೂಟಿಫುಲ್ ಹುಡುಗಿ ತಮ್ಮ ಹಾಡಿನ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ಸಾನ್ವಿ ಸುದೀಪ್.
ಇದನ್ನೂ ಓದಿ:ಅಪ್ಪನ ಹಾದಿಯನ್ನೇ ಹಿಡಿದ ನಟ ಸುದೀಪ್ ಮಗಳು; ಸಾನ್ವಿ ಲುಕ್ಗೆ ಫ್ಯಾನ್ಸ್ ಬಹುಪರಾಕ್
ಈ ಹಿಂದೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಾನ್ವಿ ಅವರು ಸ್ಲಿಮ್ ಆಗಿರೋ ವಿಡಿಯೋ ಶೇರ್ ಮಾಡಿ ‘ಸಣ್ಣ ಹೆಜ್ಜೆಗಳು ಆದರೆ ನಾವು ಅದರ ಕಡೆಗೆ ಕೆಲಸ ಮಾಡುತ್ತಿದ್ದೇವೆ’ ಅಂತ ಬರೆದುಕೊಂಡಿದ್ದರು. ಆದರೆ ಆ ವಿಡಿಯೋ ನೋಡಿದ ಅಭಿಮಾನಿಗಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾ ಇದ್ದೀರಾ?, ತುಂಬಾ ಬದಲಾವಣೆ ಕಾಣಿಸುತ್ತಿವೆ ಅಂತ ಕಮೆಂಟ್ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಌಕ್ವೀವ್ ಆಗಿರೋ ಸಾನ್ವಿ ಆಗಾಗ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೊಸ ಹೊಸ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
ಆದರೆ ಈಗ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸಾನ್ವಿ ಅವರು ಖಡಕ್ ವಿಲನ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ವ್ಯಕ್ತಿಯ ತಲೆಗೆ ಗುಂಡಿಕ್ಕಿ ವಾರ್ನಿಂಗ್ ಕೊಡುತ್ತಿದ್ದಾರೆ. ಈ ವಿಡಿಯೋದಲ್ಲಿ ಸಾನ್ವಿ ಅವರು ಥೇಟ್ ಲೇಡಿ ಬಾಂಡ್ ರೀತಿಯಲ್ಲೇ ಕಾಣಿಸಿಕೊಂಡಿದ್ದಾರೆ.
ಇದೇ ವಿಡಿಯೋ ನೋಡಿದ ನೆಟ್ಟಿಗರು ಆ ವಿಲನ್ ಲುಕ್, ಸಾನ್ವಿ ಅವರು ಕುಳಿತುಕೊಂಡಿರೋ ಸ್ಟೈಲ್ಗೆ ಫಿದಾ ಆಗಿಬಿಟ್ಟಿದ್ದಾರೆ. ಈ ವಿಡಿಯೋ ಶೇರ್ ಮಾಡಿ ವರ್ಕ್‌ಶಾಪ್ ಮಾಡುವಾಗ ನನ್ನ ಶೋ ರೀಲ್‌ನ ಸಣ್ಣ ತುಣುಕು ಅಂತ ಬರೆದುಕೊಂಡಿದ್ದಾರೆ.
View this post on Instagram
ಜೊತೆಗೆ ತಂದೆಗೆ ತಕ್ಕ ಮಗಳು, ಅದೇ ಗತ್ತು, ಅದೇ ಲುಕ್, ಕಲೆ ರಕ್ತದಲ್ಲೇ ಬಂದಿದೆ, ಅಬ್ಬಬ್ಬಾ ಅದೇನ್ ಌಕ್ಟಿಂಗ್ ಗುರು ಅಂತ ಭಿನ್ನ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಇಷ್ಟು ದಿನ ಅವರ ಸ್ಟೈಲ್ ಅನ್ನು ನೋಡಿಕೊಂಡು ಬಂದ ಅಭಿಮಾನಿಗಳು ಪಕ್ಕಾ ನೀವು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾ ಇದ್ದೀರಿ ಅದಕ್ಕೆ ಇಷ್ಟೇಲ್ಲಾ ತಯಾರಿ ನಡೆಸುತ್ತಾ ಇದ್ದೀರಾ? ಅಂತ ಹೇಳುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ