newsfirstkannada.com

×

ಅಭಿಮಾನಿಯ ಆಹ್ವಾನಕ್ಕೆ ಮನೆಗೆ ಭೇಟಿ ನೀಡಿದ ಹಂಸಲೇಖ.. ನಾದಬ್ರಹ್ಮನ ಕಂಡು ಕುಟುಂಬಸ್ಥರು ಫುಲ್ ಖುಷ್

Share :

Published January 14, 2024 at 8:52am

Update January 14, 2024 at 8:53am

    ಅಭಿಮಾನಿಯ ಕರೆಗೆ ಓಗೊಟ್ಟು ಬಂದ ನಾದ ಬ್ರಹ್ಮ

    ಖ್ಯಾತ ಸಂಗೀತ ನಿರ್ದೇಶಕನನ್ನು ಕಂಡು ಮನೆಯವರು ಫುಲ್​ ಖುಷ್​

    ಕೃಷ್ಣಾ ನದಿ ಬಗ್ಗೆ ಹಾಡೊಂದನ್ನ ಕಂಪೋಸ್‌ ಮಾಡುವೆ ಎಂದ ಹಂಸಲೇಖ

ಅಭಿಮಾನಿಯೋರ್ವ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಪ್ರೀತಿ ಪೂರ್ವಕವಾಗಿ ಮನೆಗೆ ಆಹ್ವಾನಿಸಿದ್ದು, ನಾದ ಬ್ರಹ್ಮ ಪೂರ್ವನಿಯೋಜಿತವಲ್ಲದೆ ಈ ಆಹ್ವಾನವನ್ನು ಸ್ವೀಕರಿಸಿ ಭೇಟಿ ನೀಡಿದ್ದಾರೆ. ಹಂಸಲೇಖ ಅವರ  ಭೇಟಿಯಿಂದ ಅಭಿಮಾನಿ ಕುಟುಂಬಸ್ಥರಿಗೆ ಫುಲ್ ಖುಷ್ ಆಗಿದೆ.

ಹೌದು, ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ನಡೆದಿರುವ ಶರಣಮೇಳದಲ್ಲಿ ಪ್ರಶಸ್ತಿ ಸ್ವೀಕರಿಸಲು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ವಾಸ್ತವ್ಯ ಹೂಡಿದ್ದರು. ಹಂಸಲೇಖ ವಾಸ್ತವ್ಯದ ಮಾಹಿತಿ ತಿಳಿದು ಬಸವನ ಬಾಗೇವಾಡಿ ಪಟ್ಟಣದ ವೈದ್ಯ ಅಮರೇಶ ಮಿಣಜಗಿ ತಮ್ಮ ಮನೆಗೆ ಭೇಟಿ ನೀಡುವಂತೆ ಹಂಸಲೇಖ ಅವರಿಗೆ ಪ್ರೀತಿಯ ಆಹ್ವಾನ ನೀಡಿದ್ದಾರೆ.

ಅಭಿಮಾನಿಯ ಆಹ್ವಾನ ಸ್ವೀಕರಿಸಿ ಮನೆಗೆ ಆಕಸ್ಮಿಕವಾಗಿಭೇಟಿ ನೀಡಿ ಉಪಾಹಾರ ಸ್ವೀಕರಿಸಿದ್ರು. ಅಭಿಮಾನಿಯ ಮನೆಯವರು ಮತ್ತು ಬಸವನಾಡು ಬಸವನ ಬಾಗೇವಾಡಿಯ ಸ್ಥಳೀಯರು ಆತ್ಮೀಯವಾಗಿ ಸ್ವಾಗತ ಕೋರಿದ್ರು. ಅವರ ಅಭಿಮಾನಿಯ ಮನೆಯವರು ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ಸ್ವಾಗತಿಸಿ ಸನ್ಮಾನಿಸಿದ್ದಲ್ಲದೇ ಬಸವೇಶ್ವರರ ಭಾವಚಿತ್ರವನ್ನ ನೀಡುವ ಮೂಲಕ ಗೌರವಿಸಿದ್ರು.

ಈ ಸಂದರ್ಭದಲ್ಲಿ ಹಂಸಲೇಖ ಮಾತನಾಡಿ, ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಜಲಾಶಯ ಆಲಮಟ್ಟಿ ಜಲಾಶಯ ಈ ಭಾಗದ ಮಾತ್ರವಲ್ಲದೇ ಮೂರ್ನಾಲ್ಕು ರಾಜ್ಯಗಳ ಜನತೆಗೆ ನೀರು ಅನ್ನ ನೀಡುವ ಜೀವನಾಡಿ. ಇಂತಹ ಆಲಮಟ್ಟಿ ಜಲಾಶಯದ ಕುರಿತು ಹೆಚ್ಚಿನ ಮಹತ್ವ ದೊರಕಬೇಕಿದೆ. ಈ ಜಲಾಶಯದ ಪ್ರತಿಯೊಂದು ಗೇಟ್‌ಗಳಿಗೂ ಒಂದೊಂದು ಮಹನೀಯರ ಹೆಸರನ್ನಿಡಬಹುದು ಎನ್ನಿಸಿತು. ಅಲ್ಲದೇ ಈ ಜಲಾಶಯದ 26 ಗೇಟುಗಳಿಗೆ ಬಸವ ಬಾಗಿಲು ಅಂತ ಹೆಸರಿಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಇದರ ಜೊತೆಗೆ ಆಲಮಟ್ಟಿ ಪರಿಸರ ನನಗಿಷ್ಠವಾಯಿತು. ಶೀರ್ಘದಲ್ಲೇ ಕೃಷ್ಣಾ ನದಿ, ಆಲಮಟ್ಟಿ ಜಲಾಶಯ ಮತ್ತು ಪರಿಸರದ ಕುರಿತಾದ ಹಾಡೊಂದನ್ನ ರಚಿಸಿ ಕಂಪೋಸ್‌ಮಾಡಿ ಆದಷ್ಟು ಬೇಗ ಬಿಡುಗಡೆ ಮಾಡುತ್ತೇನೆ ಎಂದು ಆಶಯ ವ್ಯಕ್ತಪಡಿಸಿದ್ರು. ಅಲ್ಲದೇ ಬಸವ ನಾಡಿನ ಜನತೆ ಬಸವ ತತ್ವವನ್ನ ಇನ್ನಷ್ಟು ಜಗತ್ತಿಗೆ ಸಾರಿ ಹೇಳಲು ಕಂಕಣಬದ್ದರಾಗಬೇಕಿದೆ ಎಂದು ಕರೆಕೊಟ್ಟರು.

ಇನ್ನು ತಮಗೆ ದೊರಕಿದ ಪ್ರಶಸ್ತಿಗಳಿಗಿಂದ ಕರುನಾಡಿನ ಮಾತ್ರವಲ್ಲದೇ ದಕ್ಷಿಣ ಭಾರತದಾದ್ಯಂತ ಇರುವ ಜನರ ಪ್ರೀತಿ ವಿಶ್ವಾಸ ಮೆಚ್ಚುಗೆಯೇ ಅತಿದೊಡ್ಡ ಪ್ರಶಸ್ತಿ ಎಂದರು. ಬಳಿಕ ಕೂಡಲಸಂಗಮಕ್ಕೆ ತೆರಳಿದ ಹಂಸಲೇಖ ಶರಣಮೇಳದಲ್ಲಿ ಪ್ರಶಸ್ತಿ ಸ್ವೀಕರಿಸಿದ್ರು‌‌..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಭಿಮಾನಿಯ ಆಹ್ವಾನಕ್ಕೆ ಮನೆಗೆ ಭೇಟಿ ನೀಡಿದ ಹಂಸಲೇಖ.. ನಾದಬ್ರಹ್ಮನ ಕಂಡು ಕುಟುಂಬಸ್ಥರು ಫುಲ್ ಖುಷ್

https://newsfirstlive.com/wp-content/uploads/2024/01/Hamsalekha.jpg

Load More