ಸುದೀಪ್‌, ಜಗ್ಗೇಶ್ ಜೊತೆ ಕಿರಿಕ್‌.. ಸ್ಯಾಂಡಲ್​ವುಡ್ ನಿರ್ಮಾಪಕ M.N ಕುಮಾರ್ ಬಂಧನ; ಏನಿದು ಕೇಸ್‌?

author-image
admin
Updated On
ಸುದೀಪ್‌, ಜಗ್ಗೇಶ್ ಜೊತೆ ಕಿರಿಕ್‌.. ಸ್ಯಾಂಡಲ್​ವುಡ್ ನಿರ್ಮಾಪಕ M.N ಕುಮಾರ್ ಬಂಧನ; ಏನಿದು ಕೇಸ್‌?
Advertisment
  • ರನ್ನ, ಮಾಣಿಕ್ಯ, ಮುಕುಂದ ಮುರಾರಿ, ಅಂಜನಿಪುತ್ರ ನಿರ್ಮಾಪಕ
  • ರವಿಚಂದ್ರನ್, ಶಿವಣ್ಣ ಸಮ್ಮುಖದಲ್ಲಿ ಸಂಧಾನ ನಡೆದಿದ್ದು ವಿಫಲ
  • ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿರುವ ಪೊಲೀಸರು

ಬೆಂಗಳೂರು: ರನ್ನ, ಮಾಣಿಕ್ಯ, ಮುಕುಂದ ಮುರಾರಿ, ಅಂಜನಿಪುತ್ರ ಸೇರಿದಂತೆ ಹಲವು ಸಿನಿಮಾಗಳ ನಿರ್ಮಾಪಕ ಎಂ.ಎನ್ ಕುಮಾರ್ ಅವರನ್ನ ಬಂಧಿಸಲಾಗಿದೆ. ನಿನ್ನೆ ತಡರಾತ್ರಿ 2 ಗಂಟೆಗೆ ಹಾಸನದಲ್ಲಿ ಕುಮಾರ್‌ ಅವರನ್ನು ವಶಕ್ಕೆ ಪಡೆದ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ ನಿರ್ಮಾಪಕ ಎಂ.ಎನ್ ಕುಮಾರ್ ಅವರು ಇತ್ತೀಚಿಗೆ ಕಿಚ್ಚ ಸುದೀಪ್ ಹಾಗೂ ನಟ ಜಗ್ಗೇಶ್ ಅವರ ಜೊತೆ ಕಿರಿಕ್ ಮಾಡಿಕೊಂಡು ಹೆಚ್ಚು ಸುದ್ದಿಯಾಗಿದ್ದರು. ಸ್ಟಾರ್ ನಟರ ಜೊತೆ ಜಗಳ ಮಾಡಿಕೊಂಡ ಪ್ರಕರಣದಲ್ಲಿ ನಿರ್ಮಾಪಕ ಎಂ.ಎನ್ ಕುಮಾರ್‌ ಅವರಿಗೆ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾರೆ.

publive-image

ಜಗ್ಗೇಶ್ V/S ಎಂ.ಎನ್ ಕುಮಾರ್!
ನಿರ್ಮಾಪಕ ಎಂ.ಎನ್ ಕುಮಾರ್ ವಿರುದ್ಧ ಸಾಲ ಪಡೆದು ಹಿಂದಿರುಗಿಸದ ಆರೋಪ ಕೇಳಿ ಬಂದಿದೆ. ಕುಮಾರ್ ಅವರು ನಟ ಜಗ್ಗೇಶ್ ಬಳಿ 1.25 ಕೋಟಿ ರೂಪಾಯಿ ಹಣ ಪಡೆದುಕೊಂಡು ವಾಪಸ್ ಕೊಡದೇ ಯಾಮಾರಿಸಿದ್ದರಂತೆ. ಸಾಲ ಹಿಂದಿರುಗಿಸದ ಸಂಬಂಧ ನಟ ಜಗ್ಗೇಶ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಇದೇ ಪ್ರಕರಣದಲ್ಲಿ ಎಂ.ಎನ್​ ಕುಮಾರ್ ಅವ​ರನ್ನ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ; ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ನಾಲ್ವರ ಸಾವು 

4ನೇ ACMM ಕೋರ್ಟ್ ಚೆಕ್ ಬೌನ್ಸ್ ಕೇಸ್ ಸಂಬಂಧ ಕನ್ವಿಕ್ಷನ್ ವಾರೆಂಟ್ ಹೊರಡಿಸಿತ್ತು. ನಿರ್ಮಾಪಕ ಎಂ.ಎನ್ ಕುಮಾರ್ ಅವರ ಕಚೇರಿ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿದೆ. ಹೀಗಾಗಿ ಉಪ್ಪಾರಪೇಟೆ ಪೊಲೀಸರಿಗೆ ಅರೆಸ್ಟ್ ಮಾಡುವಂತೆ ಆದೇಶಿಸಲಾಗಿತ್ತು. ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸರು ನಿರ್ಮಾಪಕ ಎಂ.ಎನ್ ಕುಮಾರ್ ಅವರನ್ನು ಬಂಧಿಸಿದ್ದಾರೆ.

publive-image

ಕಿಚ್ಚನ ಜೊತೆಗೂ ಕಿರಿಕ್ ಯಾಕೆ?
ಎಂ.ಎನ್ ಕುಮಾರ್ ಅವರು ಈ ಹಿಂದೆ ಕಿಚ್ಚ ಸುದೀಪ್ ಅವರ ಜೊತೆಗೂ ಕಿರಿಕ್ ಮಾಡಿಕೊಂಡಿದ್ದರು. ರನ್ನ, ಮಾಣಿಕ್ಯ ಸಿನಿಮಾ ನಿರ್ಮಾಣದ ವೇಳೆ ಇಬ್ಬರ ಮಧ್ಯೆ ಅನ್ಯೋನ್ಯತೆ ಇದ್ದು, ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.

ಕಿಚ್ಚ ಸುದೀಪ್ ಅವರು ಕಾಲ್ ಶೀಟ್ ನೀಡಿ 8 ವರ್ಷಗಳಿಂದ ಸಿನಿಮಾ ಮಾಡಿಕೊಡುತ್ತಿಲ್ಲ. ಅಡ್ವಾನ್ಸ್ ಪಡೆದು ಸಿನಿಮಾ ಮಾಡಿಕೊಟ್ಟಿಲ್ಲ ಎಂದು ಎಂ.ಎನ್ ಕುಮಾರ್ ಅವರು ಆರೋಪ ಮಾಡಿದ್ದರು. ಫಿಲ್ಮ್‌ ಚೇಂಬರ್ ಮುಂದೆ ಪ್ರತಿಭಟನೆ, ಭಾರೀ ಹಂಗಾಮಕ್ಕೂ ಈ ಆರೋಪ ಕಾರಣವಾಗಿತ್ತು.

ನಿರ್ಮಾಪಕ ಕುಮಾರ್ ಹಾಗೂ ಕಿಚ್ಚ ಸುದೀಪ್ ಮಧ್ಯೆ ರವಿಚಂದ್ರನ್, ಶಿವಣ್ಣ ಸಮ್ಮುಖದಲ್ಲಿ ಸಂಧಾನ ನಡೆದಿದ್ದು ವಿಫಲ ಆಗಿತ್ತು. ಕೊನೆಗೆ ಎಂ.ಎನ್ ಕುಮಾರ್ ವಿರುದ್ಧ ಕಿಚ್ಚ ಸುದೀಪ್ ಅವರು ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ ಬಳಿಕ ಸೈಲೆಂಟ್ ಆಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment