newsfirstkannada.com

ಸೌಂದರ್ಯ ಜಗದೀಶ್ ಮೇಲೆ ದರ್ಶನ್ ಒತ್ತಡ.. ಪವಿತ್ರಾ ಗೌಡ ಮನೆ ಖರೀದಿಗೆ ₹2 ಕೋಟಿ ಕೊಟ್ರಾ?

Share :

Published June 24, 2024 at 2:11pm

Update June 24, 2024 at 2:20pm

  ಜಗದೀಶ್ ಅವರಿಂದ 1 ಕೋಟಿ ರೂಪಾಯಿ ಹಣ ವರ್ಗಾವಣೆ

  ಹಣ ಕೊಟ್ಟ ಮಾರನೇ ದಿನವೇ ಪವಿತ್ರಾ ಗೌಡ ಅವರು ಮನೆ ಖರೀದಿ

  ಸೌಂದರ್ಯ ಜಗದೀಶ್ ಪತ್ನಿ ರೇಖಾ ದೂರು ನೀಡಿದ ಬಳಿಕ ಮಾಹಿತಿ

ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನ್ಯೂಸ್ ಫಸ್ಟ್‌ಗೆ ಸಿಕ್ಕಿರೋ ಎಕ್ಸ್‌ಕ್ಲೂಸಿವ್ ಮಾಹಿತಿಯಲ್ಲಿ ಸೌಂದರ್ಯ ಜಗದೀಶ್ ಅವರು ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರು ಮನೆ ಖರೀದಿಸಲು ದುಡ್ಡು ಕೊಟ್ಟಿದ್ದಾರೆ ಎನ್ನಲಾಗಿದೆ.

ಸೌಂದರ್ಯ ಜಗದೀಶ್ ಹಾಗೂ ಪವಿತ್ರಾ ಗೌಡ ಅವರ ನಡುವೆ ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರ ನಡೆದಿದೆ. ಅಷ್ಟೇ ಅಲ್ಲ, ಸೌಂದರ್ಯ ಜಗದೀಶ್ ಅವರು ಪವಿತ್ರಾ ಗೌಡ ಅವರ ಮನೆ ಖರೀದಿಗೆ 2 ಕೋಟಿ ರೂಪಾಯಿ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸೌಂದರ್ಯ ಜಗದೀಶ್ ಅವರು ಹಣ ಕೊಟ್ಟ ಮರು ದಿನವೇ ಪವಿತ್ರಾ ಗೌಡ ಅವರು ರಾಜರಾಜೇಶ್ವರಿ ನಗರದಲ್ಲಿ ಮನೆ ಖರೀದಿಸಿದ್ದಾರೆ.

ಇದನ್ನೂ ಓದಿ: ಸೌಂದರ್ಯ ಜಗದೀಶ್​, ದರ್ಶನ್​, ಪವಿತ್ರಾ ಮಧ್ಯೆ ಕೋಟಿ, ಕೋಟಿ ವ್ಯವಹಾರ? ಆತ್ಮಹತ್ಯೆ ಕೇಸ್‌ಗೆ ಬಿಗ್​ ಟ್ವಿಸ್ಟ್! 

ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪಾಲುದಾರ ಸುರೇಶ್ ಎಂಬುವವರು ಹಣದ ವ್ಯವಹಾರದ ದಾಖಲೆಯನ್ನು ಪೊಲೀಸರಿಗೆ ನೀಡಿದ್ದಾರೆ. ಕಳೆದ 2017ರ ನವೆಂಬರ್​ 13ರಂದು ಪವಿತ್ರಾಗೌಡಗೆ ಸೌಂದರ್ಯ ಜಗದೀಶ್ ಅವರಿಂದ 1 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ.

2018ರ ಜನವರಿ 23 ರಂದು ಪವಿತ್ರಾಗೌಡ ಅವರಿಗೆ ಮತ್ತೆ 1 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ. 2018, ಜನವರಿ 24 ರಂದು ಪವಿತ್ರಾ ಗೌಡ ಅವರು RR ನಗರ ಬಳಿಯ ಕೆಂಚನಹಳ್ಳಿಯಲ್ಲಿ 1.75 ಲಕ್ಷ ಮೌಲ್ಯದ ಮನೆ ಖರೀದಿಸಿದ್ದಾರೆ.

ಇದಿಷ್ಟೇ ಅಲ್ಲ ಪವಿತ್ರಾ ಗೌಡ ಕೆಂಚನಹಳ್ಳಿಯ ಮನೆ ಖರೀದಿ ಪತ್ರದಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಸಾಕ್ಷಿಯಾಗಿ​ ಸಹಿ ಹಾಗಿದ್ದಾರೆ. ಇಷ್ಟಾದರೂ ಈ ಹಣದ ವ್ಯವಹಾರವನ್ನು ಸೌಂದರ್ಯ ಜಗದೀಶ್​ ಅವರು ಪಾಲುದಾರರಿಂದ ಮುಚ್ಚಿಟ್ಟಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಚಾಪೆ ಮೇಲೆ ನಿದ್ದೆ, ಸೊಳ್ಳೆ ಕಾಟದಿಂದ ಪರದಾಟ.. ಜೈಲಲ್ಲಿ ಪವಿತ್ರಾ ಗೌಡಗೆ ಕರಾಳ ರಾತ್ರಿ 

ಸೌಂದರ್ಯ ಜಗದೀಶ್ ಅವರು ಕಳೆದ ಏಪ್ರಿಲ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಆ ಬಳಿಕ ಪಾಲುದಾರರ ವಿರುದ್ಧವೇ ಸೌಂದರ್ಯ ಜಗದೀಶ್ ಪತ್ನಿ ರೇಖಾ ಅವರು ದೂರು ನೀಡಿದ್ದರು. ಇದಾದ ಮೇಲೆ ಸೌಂದರ್ಯ ಜಗದೀಶ್ ವ್ಯವಹಾರದ ದಾಖಲೆಯನ್ನು ಪಾಲುದಾರರು ಕಲೆ ಹಾಕಿದ್ದಾರೆ.

ನಟ ದರ್ಶನ್​ ಹಾಗೂ ಸೌಂದರ್ಯ ಜಗದೀಶ್​ ಸಾಕಷ್ಟು ಆಪ್ತರಾಗಿದ್ದರು. ಹೀಗಾಗಿ ದರ್ಶನ್ ಒತ್ತಡಕ್ಕೆ ಮಣಿದು ಸೌಂದರ್ಯ ಜಗದೀಶ್ ಅವರು 2 ಕೋಟಿ ರೂಪಾಯಿ ಹಣ ಕೊಟ್ಟಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌಂದರ್ಯ ಜಗದೀಶ್ ಮೇಲೆ ದರ್ಶನ್ ಒತ್ತಡ.. ಪವಿತ್ರಾ ಗೌಡ ಮನೆ ಖರೀದಿಗೆ ₹2 ಕೋಟಿ ಕೊಟ್ರಾ?

https://newsfirstlive.com/wp-content/uploads/2024/04/Soundarya-Jagadish-1.jpg

Load More