ಅತಿ ವೇಗ ತಿಥಿ ಬೇಗ.. ನಟ ದರ್ಶನ್ ಅಂಡ್‌ ಗ್ಯಾಂಗ್‌ಗೆ ಉಮಾಪತಿ ಗೌಡ ಕೌಂಟರ್‌; ಹೇಳಿದ್ದೇನು?

author-image
admin
Updated On
ಅತಿ ವೇಗ ತಿಥಿ ಬೇಗ.. ನಟ ದರ್ಶನ್ ಅಂಡ್‌ ಗ್ಯಾಂಗ್‌ಗೆ ಉಮಾಪತಿ ಗೌಡ ಕೌಂಟರ್‌; ಹೇಳಿದ್ದೇನು?
Advertisment
  • ಇವ್ರು ಕುಡಿಯೋಕೆ ಹುಟ್ಟಿದವರ ವರ್ಗಕ್ಕೆ ಸೇರಿದವ್ರು ಅನ್ಸುತ್ತೆ
  • ಅತಿ ವೇಗ ತಿಥಿ ಬೇಗ ಅಂತಾರಲ್ವಾ ಹಾಗೇ ಇದು ಎಂದ ಉಮಾಪತಿ
  • ನಟ ದರ್ಶನ್ ಅವರ ಬಗ್ಗೆ ನಿರ್ಮಾಪಕ ಉಮಾಪತಿ ಖಡಕ್ ರಿಯಾಕ್ಷನ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಕಂಬಿ ಹಿಂದೆ ಲಾಕ್ ಆಗಿದೆ. ದರ್ಶನ್ ಅವರ ಸಹಚರರ ಮೇಲೆ ಕ್ರೂರವಾಗಿ ಕೊಲೆ ಮಾಡಿದ ಗಂಭೀರ ಆರೋಪಗಳಿವೆ. ಈ ಬಂಧನ ಹಾಗೂ ಪೊಲೀಸರ ತನಿಖೆ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ‘ಸ್ವಲ್ಪ ತಡವಾಗಿದ್ರೂ ದರ್ಶನ್ ಅರೆಸ್ಟ್ ಕೇಸ್ ದಾರಿ ತಪ್ಪಿ ಹೋಗ್ತಿತ್ತು’- ಕಮಿಷನರ್ ದಯಾನಂದ್ ಸ್ಫೋಟಕ ಮಾಹಿತಿ 

ನಟ ದರ್ಶನ್ ಅರೆಸ್ಟ್‌ ಕೇಸ್‌ಗೆ ಸಂಬಂಧಪಟ್ಟಂತೆ ನಿರ್ಮಾಪಕ ಉಮಾಪತಿ ಗೌಡ ಅವರು ಬಹಳ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಸ್ ಫಸ್ಟ್ ಚಾನೆಲ್‌ನಲ್ಲಿ ಮಾತನಾಡಿರುವ ಉಮಾಪತಿ ಗೌಡ ಅವರು ನಟ ದರ್ಶನ್ ಅವರ ಸ್ವಭಾವ ಹಾಗೂ ಅವರ ಜೊತೆಗಿದ್ದವರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ನಟ ದರ್ಶನ್ ಅವರು ಜೊತೆಗಿರುವವರನ್ನ ಒಂದಲ್ಲ ಒಂದು ದಿನ ತೊಂದ್ರೆ ಸಿಕ್ಕಿ ಹಾಕಿಸ್ತಾರೆ ಅಂತ ಗೊತ್ತಿತ್ತು. ಬಂಡೆ ಕೆಲಸ ಮಾಡೋರು ಮೈ, ಕೈ ನೋವು, ರಾತ್ರಿ ನಿದ್ರೆ ಬರಲ್ಲ ಅಂತ ಕುಡಿಯುತ್ತಾರೆ. ಆದರೆ ಕೆಲವರು ಕುಡಿಯೋಕೆ ಹುಟ್ಟಿದವರ ವರ್ಗಕ್ಕೆ ಸೇರಿದವ್ರು ಅನ್ಸುತ್ತೆ. ಕಂಟ್ರೋಲ್‌ಗೆ ಸಿಗದಷ್ಟು ಕುಡಿದಾಗ ಹೀಗೆಲ್ಲಾ ಆಗುತ್ತೆ. ಅತಿ ವೇಗ ತಿಥಿ ಬೇಗ ಅಂತಾರಲ್ವಾ ಹಾಗೇ ಇದು ಎಂದು ನಿರ್ಮಾಪಕ ಉಮಾಪತಿ ಗೌಡ ಟಾಂಗ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment