/newsfirstlive-kannada/media/post_attachments/wp-content/uploads/2025/07/DARSHAN-VS-RAMYA.jpg)
ಗುರುವಂತೆ ಶಿಷ್ಯಂದ್ರು ಅಂತ ಸುಮ್ಮನೇ ಹೇಳಲ್ಲ.. ಕೆಟ್ಟದಾಗಿ ಕಾಮೆಂಟ್ ಒತ್ತಿದ ರೇಣುಕಾಸ್ವಾಮಿ ಕಥೆ ಮುಗಿಸಿದ ಆರೋಪ ಹೊತ್ತ ಡಿ ಗ್ಯಾಂಗ್ ಜೈಲು ಟ್ರಿಪ್ ಮುಗಿಸಿ ಬಂದದ್ದು ಹಳೇ ಕಥೆ. ಈಗ ಅದೇ ಕಾಮೆಂಟ್ ವಿಚಾರಕ್ಕೆ ಡಿ ಬಾಸ್ ಫ್ಯಾನ್ಸ್ ನ್ಯೂಸ್ ಆಗಿದ್ದು, ಸ್ವತಃ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಇನ್ಸ್ಸ್ಟಾದಲ್ಲಿ ವಾರ್ನ್ ಮಾಡಿದ್ದಾರೆ.
ಇದನ್ನೂ ಓದಿ: ದರ್ಶನ್, ಪವಿತ್ರಾ ಗೌಡ ಬೇಲ್ ಕೇಸ್; ಇಂದು ಸುಪ್ರೀಂಕೋರ್ಟ್ನಲ್ಲಿ ಏನೆಲ್ಲಾ ಆಯ್ತು..? ಫುಲ್ ಡಿಟೇಲ್ಸ್!
‘ನ್ಯಾಯ ಸಿಗಬಹುದು’
ಭಾರತದ ಸಾಮಾನ್ಯ ಪ್ರಜೆಗೂ ಸುಪ್ರೀಂ ಕೋರ್ಟ್ ಆಶಾಕಿರಣ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆ- ರಮ್ಯಾ, ನಟಿ
ಮೊದಲಿಗೆ ರಮ್ಯಾ ಪೋಸ್ಟ್ ಮಾಡಿರೋದು ಇಷ್ಟೇ. ಬೆನ್ನಲ್ಲೇ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದರು. ದರ್ಶನ್ ಅಭಿಮಾನಿಗಳು ಹಿಗ್ಗಾಮುಗ್ಗಾ ಅವರನ್ನು ಟ್ರೋಲ್ ಮಾಡಿದರು. ನೋಡೋ ತನಕ ನೋಡಿದ ರಮ್ಯಾ ಅವರು, ನಿನ್ನೆ ವಾರ್ನಿಂಗ್ ನೀಡಿದ್ದಾರೆ.
ಇದನ್ನೂ ಓದಿ: ಒಂದು ಹೈಡ್ರೋಜನ್ ರೈಲಿನ ಬೆಲೆ ಎಷ್ಟು.. ಹೊಸ ಇತಿಹಾಸ ಬರೆಯಲು ಸಜ್ಜಾದ ಭಾರತ..!
‘ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿ’
ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್ಸ್ಟಾಗ್ರಾಂಗೆ ಸ್ವಾಗತ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೇ ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿ - ರಮ್ಯಾ, ನಟಿ
ನ್ಯಾಯ ಸಿಗ್ಬೇಕು ಅನ್ನೋದಕ್ಕೆ ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿ. ಮೊದಲಿಗೆ ಕೊ*ಲೆ ಆರೋಪಿ ನಟ ದರ್ಶನ್ ಅಭಿಮಾನಿಗಳಿಗೆ ವೆಲ್ಕಂ ಮಾಡಿ, ಆಮೇಲೆ ಕಾಮೆಂಟ್ನಿಂದ ಕೊಲೆ*ಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅಂತ ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿಯಂಥ ಮಾರ್ಮಿಕವಾಗಿ ಕ್ಲಾರಿಟಿ ಕೊಟ್ಟಿದ್ದಾರೆ.
ಈ ಕಾಮೆಂಟ್ಸ್ ಕಹಾನಿ ಇಲ್ಲಿಗೆ ನಿಲ್ಲೋ ಯಾವ ಲಕ್ಷಣ ಕೂಡ ಕಾಣ್ತಿಲ್ಲ. ಇದೆಲ್ಲಾ ಒಂದ್ಕಡೆಯಾದ್ರೆ, ಸದ್ಯಕ್ಕೆ ಥೈಲಾಂಡ್ ಶೂಟಿಂಗ್ ಮುಗಿಸಿ ಡಿ ಬಾಸು. ವಾಪಾಸ್ ಆಗಿದ್ದು, ನಾಲ್ಕೈದು ದಿನಗಳಲ್ಲಿ ಸುಪ್ರೀಂ ತೀರ್ಪು ಕೂಡ ಹೊರಬೀಳಲಿದೆ.
ಇದನ್ನೂ ಓದಿ: ಇಂಜಿನಿಯರ್ಗಳಿಗೆ ಜಾಬ್ ಮಾಡಲು ಯಾವ ದೇಶ ಬೆಸ್ಟ್.. ಭಾರತ, ದುಬೈ..? ಉತ್ತರ ಯಾವುದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ