‘ನಾನು 5-6 ಮದುವೆ ಬೇಕಾದರೂ ಆಗ್ತೀನಿ, ಆದರೆ..’ ಹುಟ್ಟುಹಬ್ಬದ ದಿನ ಉಪ್ಪಿ ಹೀಗ್ಯಾಕೆ ಹೇಳಿದ್ರು?

author-image
Veena Gangani
Updated On
‘ಅನ್ಯಾಯದ ಅನುಮಾನಕ್ಕೆ ಬುಸುಗುಟ್ಟಿದ ಪಡೆ’- ಕೋರ್ಟ್‌ ತಡೆ ಕೊಟ್ಟ ಮೇಲೆ ಬದಲಾಯ್ತು ‘ಬುದ್ಧಿವಂತ’ನ ನಡೆ
Advertisment
  • ಅಭಿಮಾನಿಗಳ ಜೊತೆಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ನಟ ಉಪೇಂದ್ರ
  • ಸ್ಯಾಂಡಲ್​ವುಡ್​ ಸ್ಟಾರ್​ ನಟ ಉಪೇಂದ್ರಗೆ ಇಂದು ಹುಟ್ಟು ಹಬ್ಬದ ಸಂಭ್ರಮ
  • ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿ ಫ್ಯಾನ್ಸ್​ ವಿಶ್​

ಇಂದು ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್, ನಿರ್ದೇಶಕ, ನಟ ಉಪೇಂದ್ರರಿಗೆ 56ನೇ ಹುಟ್ಟುಹಬ್ಬದ ಸಂಭ್ರಮ. ಈ ಹೊತ್ತಲ್ಲಿ ಉಪ್ಪಿ ತಮ್ಮ ಕತ್ರಿಗುಪ್ಪೆಯ ಮನೆ ಬಳಿ ಅಭಿಮಾನಿಗಳ ಜೊತೆಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ:ಸೀರಿಯಲ್​ ಬಿಟ್ಟು ವಿದೇಶಕ್ಕೆ ಹಾರಿದ ಕಿರುತೆರೆ ನಟಿ ಮೋಕ್ಷಿತಾ ಪೈ; ಸದ್ಯದಲ್ಲೇ ಗುಡ್​ನ್ಯೂಸ್ ಕೊಡ್ತಾರಾ?

publive-image

ಈ ವೇಳೆ ಅಭಿಮಾನಿಗಳು ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟ ಹೊಸ, ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ವಿಶ್​ ಮಾಡುತ್ತಿದ್ದಾರೆ. ಬರ್ತ್​ ಡೇ ಸಂಭ್ರಮದಲ್ಲಿದ್ದ ಉಪೇಂದ್ರ ವಿಶ್​ ಮಾಡಲು ಚಿತ್ರರಂಗದ ಗಣ್ಯರು ಸಹ ಆಗಮಿಸಿದ್ರು. ಉಪೇಂದ್ರ ಅಣ್ಣನ ಮಗ ನಿರಂಜನ್ ಮತ್ತು ನಟ ಶ್ರೀನಗರ ಕಿಟ್ಟಿ ಆಗಮಿಸಿ ಬರ್ತ್​ ಡೇಗೆ ವಿಶ್ ಮಾಡಿದ್ರು.

publive-image

ಇದಾದ ಬಳಿಕ ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಕಷ್ಟು ಮಂದಿ ಜಾಸ್ತಿ ಡೈರೆಕ್ಟ್ ಮಾಡಲ್ಲ ಏಕೆ ಅಂತ ಕೇಳುತ್ತಾರೆ. ನಾನು ಐದಾರು ಮದುವೆ ಬೇಕಾದ್ರು ಆಗ್ತೀನಿ ಆದರೆ ಡೈರೆಕ್ಷನ್ ಮಾಡೋದು ಕಷ್ಟ. ಅಷ್ಟು ಟೆನ್ಷನ್ ಆಗುತ್ತೆ ಅಂತ ಹೇಳಿದ್ದಾರೆ. ರಿಯಲ್ ಸೂಪರ್ ಸ್ಟಾರ್ ಉಪೇಂದ್ರ ಅಭಿನಯ ಮತ್ತು ಡೈರೆಕ್ಟ್ ಮಾಡಿರುವ U&I ಸಿನಿಮಾ ಮಾತಿನ ಮನೆಯಲ್ಲಿ ಬ್ಯುಸಿಯಾಗಿದೆ. 5 ಭಾಷೆಗಳಲ್ಲಿ U&I ಸಿನಿಮಾ ಮೂಡಿಬರುತ್ತಿದೆ. ಇದೇ ಮೊದಲ ಬಾರಿಗೆ​ ಉಪ್ಪಿ ಅವರು ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲೂ ವಾಯ್ಸ್ ಡಬ್ಬಿಂಗ್ ಮಾಡುತ್ತಿರುವುದು ವಿಶೇಷ. ಅಕ್ಟೋಬರ್ ಯುಐ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ.

ಇದನ್ನೂ ಓದಿ: ಅಮ್ಮನ ಕಳ್ಕೊಂಡ 4 ವರ್ಷದ ಕಂದಮ್ಮ.. ಮಂಗಳೂರು ಉಪನ್ಯಾಸಕಿ ದುರಂತ ಅಂತ್ಯ; ಏನಿದು ಲಿವರ್ ದಾನ?

publive-image

ಇದರ ಜೊತೆಗೆ ರಿಯಲ್ ಸ್ಟಾರ್​ ಉಪೇಂದ್ರ ಅವರ 45 ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅರ್ಜುನ್ ಜನ್ಯಾ ನಿರ್ದೇಶನದ 45 ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ  ಹ್ಯಾಟ್ರಿಕ್ ಹೀರೋ ಶಿವಣ್ಣ, ರಾಜ್ ಬಿ ಶೆಟ್ಟಿ, ಕಿರುತೆರೆ ನಟಿ ಕೌಸ್ತುಭ ಮಣಿ ಕೂಡ ಅಭಿನಯಿಸುತ್ತಿದ್ದಾರೆ. ಈ ಉಪ್ಪಿ ಪಾತ್ರ ಲುಕ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment