/newsfirstlive-kannada/media/post_attachments/wp-content/uploads/2024/10/deepka1.jpg)
ಸ್ಯಾಂಡಲ್‌ವುಡ್ ಸ್ಟಾರ್ ನಟಿ ಅಮೂಲ್ಯ ಅವರ ಸಹೋದರ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಮೃತಪಟ್ಟ ನಟಿ ಅಮೂಲ್ಯ ಅಣ್ಣ ಸ್ಯಾಂಡಲ್ವುಡ್ನಲ್ಲಿ ಕೆಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ದೀಪಕ್ ಅರಸ್ ಅವರು ನಿಧನದ ಸುದ್ದಿ ಕೇಳಿ ಸ್ಯಾಂಡಲ್‌ವುಡ್ ನಟ ಹಾಗೂ ನಟಿಯರು ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಹಾವು ಕೊಂ*ದ 24 ಗಂಟೆಯಲ್ಲೇ ಗುಡಿ ನಿರ್ಮಾಣ.. ಆದ್ರೂ ಮಕ್ಕಳಿಗೆ ಪದೇ ಪದೆ ಸರ್ಪ ಕಾಣುತ್ತಿರುವುದು ಏಕೆ?
ನಿನ್ನೆ ರಾತ್ರಿಯೇ ದೀಪಕ್ ಅರಸ್ ಅವರು ಮೃತಪಟ್ಟ ಸುದ್ದಿ ನ್ಯೂಸ್ಫಸ್ಟ್ಗೆ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ದೀಪಕ್ ಅರಸ್ ಅವರು ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಮೃತ ಕನ್ನಡದ ನಿರ್ದೇಶಕ ದೀಪಕ್ ಅವರಿಗೆ ಸುಮಾರು 42 ವರ್ಷ ವಯಸ್ಸಾಗಿತ್ತು. ನಿರ್ದೇಶಕ ದೀಪಕ್ ಅವರು ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ದೀಪಕ್ ಅರಸ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರಂತೆ.
ಹೀಗಾಗಿ ಕಿಡ್ನಿ ಟ್ರಾನ್ಸ್ಪರೆಂಟ್ ಮಾಡಲು ಸಿದ್ಧತೆ ನಡೆಸಲಾಗಿತ್ತಂತೆ. ಆದರೆ ದೀಪಕ್ ದೇಹ ಸ್ಪಂಧಿಸದ ಕಾರಣ ಕೊನೆಯುಸಿರೆಳೆದಿದ್ದಾರೆ. ಇನ್ನು ನಿರ್ದೇಶಕ ದೀಪಕ್ ಅರಸ್ ಅಂತಿಮ ದರ್ಶನಕ್ಕೆ ನಟ ಗಣೇಶ್, ತರುಣ್ ಸುದೀರ್, ನಟಿ ಸೋನಲ್, ಕಿರುತೆರೆ ನಟಿ ವೈಷ್ಣವಿ ಸೇರಿದಂತೆ ಸಾಕಷ್ಟು ನಟ ನಟಿಯರು ಬಂದಿದ್ದಾರೆ. ದೀಪಕ್ ಅರಸ್ರನ್ನು ಕಳೆದುಕೊಂಡ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.
ಸಿನಿಮಾ ಕನಸು ಕಂಡಿದ್ದ ದೀಪಕ್.. ಅಮೂಲ್ಯ ಪತಿ ಕಂಬನಿ
ನಿರ್ದೇಶಕ ದೀಪಕ್ ಅರಸ್ ಸಾವಿಗೆ ಅಮೂಲ್ಯ ಪತಿ ಜಗದೀಶ್ ಕಂಬನಿ ಮಿಡಿದಿದ್ದಾರೆ. ಅಣ್ಣನನ್ನು ಕಳೆದುಕೊಂಡ ಅಮೂಲ್ಯ ತುಂಬಾ ನೋವಲ್ಲಿ ಇದ್ದಾರೆ. ಅಮೂಲ್ಯ ವೃತ್ತಿ ಬದುಕಿನ ಯಶಸ್ಸಿನ ಹಿಂದೆ ಸಹೋದರ ದೀಪಕ್ ಅರಸ್ ತ್ಯಾಗ ತುಂಬಾ ದೊಡ್ಡದ್ದಾಗಿದೆ. ಆರೋಗ್ಯ ಸಮಸ್ಯೆಗಳಿದ್ರೂ ಸಿನಿಮಾ ಮೇಲಿನ ಆಸಕ್ತಿ ಕಮ್ಮಿ ಇರಲಿಲ್ಲ. ಒಳ್ಳೆಯ ಸಿನಿಮಾ ಮಾಡ್ಬೇಕು ಅಂತಾ ಓಡಾಡ್ತಿದ್ರು. ಎರಡು ಕಿಡ್ನಿ ಫೆಲ್ಯೂರ್ ಆಗಿದ್ದು, ಬ್ರೈನ್ನಲ್ಲಿ ಬ್ಲೀಡಿಂಗ್ ಶುರುವಾಗಿದ್ರಿಂದ ಸಾನಪ್ಪಿದ್ದಾರೆ ಅಂತಾ ಜಗದೀಶ್ ತಿಳಿಸಿದ್ದಾರೆ.
ಇದನ್ನೂ ಓದಿ:BIG BREAKING: ಬಿಗ್ ಬಾಸ್‌ಗೆ ಗುಡ್ ಬೈ.. ಕೊನೆಗೂ ಮನೆಯಿಂದ ಹೊರ ಬಂದ ಜಗದೀಶ್!
ದೀಪಕ್ ಅರಸ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಾಗಿದ್ದರು. 2011ರಲ್ಲಿ ತೆರೆಕಂಡ ಬಿಗ್ಬಾಸ್ ಖ್ಯಾತಿಯ ನಟ ರಾಕೇಶ್ ನಾಯಕನಾಗಿ ಮತ್ತು ಅಮೂಲ್ಯ ನಾಯಕಿಯಾಗಿ ನಟಿಸಿದ ಮನಸಾಲಜಿ, ಸೋನಲ್ ಮೊಂಥೆರೋ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ