/newsfirstlive-kannada/media/post_attachments/wp-content/uploads/2025/03/Pramila-Joshai8.jpg)
ಸ್ಯಾಂಡಲ್ವುಡ್ ಹಿರಿಯ ನಟಿ ಪ್ರಮಿಳಾ ಜೋಷಾಯ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ನಟಿ ಪ್ರಮಿಳಾ ಜೋಷಾಯ್ ಅವರು ತಮ್ಮ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಪ್ರಮಿಳಾ ಜೋಷಾಯ್ ಅವರ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ ಈ ಸ್ಪೆಷಲ್ ಸೆಲೆಬ್ರಿಟಿಗಳು.
ಇದನ್ನೂ ಓದಿ: ಐಶ್ವರ್ಯಾ ಸಿಂಧೋಗಿ ಮನೆಗೆ ಮೋಕ್ಷಿತಾ ಪೈ ಸರ್‌ಪ್ರೈಸ್ ಎಂಟ್ರಿ; ಅಸಲಿಗೆ ಬಂದಿದ್ದು ಯಾರಿಗೋಸ್ಕರ ಗೊತ್ತಾ?
ಪ್ರಮಿಳಾ ಜೋಷಾಯ್ ಅವರ ಹುಟ್ಟು ಹಬ್ಬಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟಿಯರು ಆಗಮಿಸಿದ್ದಾರೆ.
ಪ್ರಮಿಳಾ ಜೋಷಾಯ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ.
ಇನ್ನೂ, ಪ್ರಮಿಳಾ ಜೋಷಾಯ್ ಅವರ ನಿವಾಸಕ್ಕೆ ಬಂದ ಸ್ಟಾರ್ ನಟಿಯರು ಶುಭಕೋರಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.
ಪ್ರಮಿಳಾ ಅವರ ಹುಟ್ಟು ಹಬ್ಬಕ್ಕೆ ವಿನಯಾ ಪ್ರಸಾದ್, ಮಾಳವಿಕಾ, ಭಾರತಿ ವಿಷ್ಣುವರ್ಧನ್, ಶ್ರುತಿ, ಮಾಲಾಶ್ರೀ ಭಾಗಿಯಾಗಿದ್ದರು.
ಪ್ರಮಿಳಾ ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ಮೇಘನಾ ರಾಜ್ ಹಾಗೂ ಪತಿ ಸುಂದರ್ ರಾಜ್ ಕೂಡ ತಾಯಿಯ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.
ನಟಿ ಅಮೂಲ್ಯ, ಸುಧಾರಾಣಿ, ರಕ್ಷಿತಾ ಪ್ರೇಮ್, ರಕ್ಷಿತಾ ಪ್ರೇಮ್ ಅವರ ತಾಯಿ ಮಮತಾ ರಾವ್, ಪ್ರೇಮಾ, ಮಾಲಾಶ್ರೀ ಮಗಳು ಆರಾಧನಾ, ಪ್ರಿಯಾಂಕ ಉಪೇಂದ್ರ ಸೇರಿದಂತೆ ಸಾಕಷ್ಟು ನಟಿಯರ ದಂಡು ಆಗಮಿಸಿದ್ದರು.
ಪ್ರಮಿಳಾ ಅವರು ಕನ್ನಡ ಮಾತ್ರವಲ್ಲದೆ, ತಮಿಳು ಸಿನಿಮಾಗಳಲ್ಲೂ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ