ಡಿಕೆಶಿ ನಟ್ಟು ಬೋಲ್ಟು ಟೈಟ್​ ಹೇಳಿಕೆ.. ಪರ ವಿರೋಧದ ಚರ್ಚೆಗೆ ಇಳಿದ ಸ್ಯಾಂಡಲ್​ವುಡ್​

author-image
Gopal Kulkarni
Updated On
ಡಿಕೆಶಿ ನಟ್ಟು ಬೋಲ್ಟು ಟೈಟ್​ ಹೇಳಿಕೆ.. ಪರ ವಿರೋಧದ ಚರ್ಚೆಗೆ ಇಳಿದ ಸ್ಯಾಂಡಲ್​ವುಡ್​
Advertisment
  • ಡಿಸಿಎಂ ಡಿಕೆಶಿ ನಟ್ಟು ಬೋಲ್ಟು ಟೈಟ್ ಬಗೆಗಿನ ಹೇಳಿಕೆ
  • ಡಿ.ಕೆ ಶಿವಕುಮಾರ್‌ ಪರ ಬ್ಯಾಟ್ ಬೀಸಿದ ಸಾಧು ಕೋಕಿಲ!
  • ಡಿ.ಕೆ ಸಾಹೇಬ್ರು ಹೇಳಿರುವುದರಲ್ಲಿ ತಪ್ಪಿಲ್ಲ ಎಂದ ಸಾಧು

ಡಿಸಿಎಂ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಚಿತ್ರರಂಗದ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದ್ದರು. ನಟ್ಟು, ಬೋಲ್ಟ್‌, ಟೈಟ್ ಮಾಡ್ತೀನಿ ಅನ್ನೋ ಎಚ್ಚರಿಕೆ ನುಡಿಗಳನ್ನು ನುಡಿದಿದ್ದರು. ಹೀಗೆ ಡಿಸಿಎಂ ವಾರ್ನಿಂಗ್ ಕೊಟ್ಟಿದ್ದು, ಕನ್ನಡಚಿತ್ರಕ್ಕೆ. ಆದ್ರೀಗ ಡಿಕೆಶಿ ಆಡಿದ ಮಾತುಗಳು ಟೀಕೆಗೆ ಗುರಿಯಾಗಿವೆ. ವಿಪಕ್ಷಗಳು ಡಿಕೆಶಿ ಹೇಳಿಕೆ ಖಂಡಿಸುತ್ತ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿವೆ. ಇದರ ಬೆನ್ನಲ್ಲೇ ಚಂದನವನದ ಕಲಾವಿದರು, ಡಿಕೆ ಶಿವಕುಮಾರ್​ ಬೆನ್ನಿಗೆ ನಿಂತು. ನಟ್ಟು, ಬೋಲ್ಟ್​ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

publive-image

ಸ್ಯಾಂಡಲ್​ವುಡ್​ ನಟ-ನಟಿಯ ನಟ್ಟು-ಬೋಲ್ಟು ಟೈಟ್​ ಮಾಡುವ ಹೇಳಿಕೆ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ಇದರಿಂದ ಹಿಂದೆ ಸಾಧುಕೋಕಿಲಾ ಕೈವಾಡ ಇರುವ ಅಂತೆಕಂತೆಗಳು ಗಾಂಧಿನಗರದಲ್ಲಿ ಜೋರಾಗಿ ಹರಿದಾಡ್ತಿದೆ. ಇದರ ಬೆನ್ನಲ್ಲೇ ಸಾಧು ಕೋಕಿಲಾ ಡಿಸಿಎಂ ಡಿಕೆಶಿ ಪರ ಬ್ಯಾಟ್​ ಬೀಸಿದ್ದಾರೆ. ಡಿ.ಕೆ ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕು ಎನ್ನುವುದಷ್ಟೇ ಅವರ ಉದ್ದೇಶ ಎಂದು ಸಮರ್ಥಿಕೊಂಡಿದ್ದಾರೆ. ಇನ್ನು ಖ್ಯಾತ ಕಲಾವಿದರೂ ಕೂಡ ಡಿಕೆಶಿ ಹೇಳಿಕೆ ಸರಿಯಾಗೇ ಇದೆ ಎಂದು ತಲೆಯಾಡಿಸಿದ್ದಾರೆ.

publive-image

ಕೆಲವರು ಡಿಸಿಎಂ ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ರೆ. ಇನ್ನೂ ಕೆಲವರು ಆ ರೀತಿ ಮಾತನಾಡಿದ್ದು ತಪ್ಪು ಎಂದಿದ್ದಾರೆ. ಖ್ಯಾತ ನಿರ್ದೇಶಕ, ಟಿ.ಎಸ್​.ನಾಗಾಭರಣ, ಕಲಾವಿದರೂ ಒಂದಾಗಿರಬೇಕು ಅನ್ನೋದು ಒಳ್ಳೆಯದು. ಆದ್ರೆ, ಅವರ ಬರಲಿಲ್ಲ ಎಂಬ ಕಾರಣಕ್ಕೆ ಧಮ್ಕಿ ಹಾಕೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

publive-image

ಇನ್ನು ಡಿಸಿಎಂ ಡಿಕೆಶಿ ಹೇಳಿಕೆಯನ್ನು ರಾಜಕೀಯ ದರ್ಪ ಎಂದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ವಿರುದ್ಧ ಮಂಡ್ಯ ಶಾಸಕ ಗಣಿಗ ರವಿಕುಮಾರ್​ ಕಿಡಿಕಾರಿದ್ದಾರೆ.
ನಟರ ನಟ್ಟು-ಬೋಲ್ಟು ಟೈಟ್​ ಮಾಡೋದು ಗೊತ್ತು ಎಂಬ ಡಿಕೆಶಿ ಹೇಳಿಕೆ ರಾಜಕೀಯವಾಗಿ ಮತ್ತು ಸಿನಿಮಾ ರಂಗದಲ್ಲೂ ಪರ-ವಿರೋಧ ಚರ್ಚೆಗೆ ಸಾಕ್ಷಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment