/newsfirstlive-kannada/media/post_attachments/wp-content/uploads/2025/05/sonu-nigam4.jpg)
ಬೆಂಗಳೂರು: ಕನ್ನಡದ ಹಾಡು ಕೇಳಿದ್ದಕ್ಕೆ ಪಹಲ್ಗಾಮ್‌ಗೆ ಹೋಲಿಸಿದ್ದ ಹಿನ್ನೆಲೆ ಗಾಯಕ ಸೋನು ನಿಗಮ್ ವಿರುದ್ಧ ಸ್ಯಾಂಡಲ್‌ವುಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ಸೋನು ನಿಗಮ್ ಬ್ಯಾನ್ ವಿಚಾರವಾಗಿ ಇಂದು ಫಿಲ್ಮ್ ಚೇಂಬರ್‌ನಲ್ಲಿ ಪದಾಧಿಕಾರಿಗಳು, ಸಂಗೀತ ನಿರ್ದೇಶಕರು, ಗಾಯಕರು, ನಿರ್ಮಾಪಕರ ಸಭೆ ನಡೆಸಲಾಯಿತು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಲಾಯಿತು.
ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಸೋನು ನಿಗಮ್‌ಗೆ ತಾತ್ಕಾಲಿಕ ನಿರ್ಬಂಧ ಏರಲು ಫಿಲ್ಮ್ ಚೇಂಬರ್ ನಿರ್ಧಾರ ಮಾಡಿದೆ. ಅಂದ್ರೆ ಸೋನು ನಿಗಮ್ ಕನ್ನಡಿಗರ ಬಳಿ ಕ್ಷಮಾಪಣೆ ಕೇಳಬೇಕು. ಅಲ್ಲಿಯವರೆಗೂ ಕನ್ನಡ ಚಲನಚಿತ್ರರಂಗದಿಂದ ಸೋನು ನಿಗಮ್ ಅವರನ್ನ ದೂರ ಇಡೋದಕ್ಕೆ ಫಿಲ್ಮ್ ಚೇಂಬರ್ ನಿರ್ಧಾರ ಮಾಡಿದೆ.
ಇದನ್ನೂ ಓದಿ: ಸೋನು ನಿಗಮ್ ವಿರುದ್ಧ ಕ್ರಮಕ್ಕೆ ಮೊದಲ ಹೆಜ್ಜೆಯಿಟ್ಟ ಅವಲಹಳ್ಳಿ ಪೊಲೀಸರು..!
ಕನ್ನಡ.. ಕನ್ನಡ ಎಂದವರನ್ನು ಪಹಲ್ಗಾಮ್‌ಗೆ ಹೋಲಿಸಿದ್ದಕ್ಕೆ ಸೋನು ನಿಗಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡಿಗರ ಭಾವನೆ ಮತ್ತು ಕನ್ನಡ ಪರ ಹೋರಾಟಗಾರರ ಒತ್ತಾಯಕ್ಕೆ ಮಣಿದಿರುವ ಫಿಲ್ಮ್ ಚೇಂಬರ್ ಕ್ಷಮೆ ಕೇಳೋತನಕ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವ ನಿರ್ಧಾರ ಮಾಡಿದೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಸೋನು ನಿಗಮ್ ಕನ್ನಡಿಗರ ಕ್ಷಮಾಪಣೆ ಕೇಳೋ ತನಕ ಹತ್ತಿರ ಸೇರಿಸಲ್ಲ. ಇಂದಿನ ಸಭೆಯ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೋನು ನಿಗಮ್ ಅವರು ಕ್ಷಮಾಪಣೆ ಕೇಳೋ ತನಕ ಬಿಡಲ್ಲ ಎಂದಿದ್ದಾರೆ.
ಫಿಲ್ಮ್ ಚೇಂಬರ್ ನಿರ್ಧಾರಕ್ಕೆ ಕನ್ನಡ ಚಲನಚಿತ್ರರಂಗದ ಸಂಗೀತ ನಿರ್ದೇಶಕರ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ. ಧರ್ಮ ವಿಶ್ ಅವರು ಮಾತನಾಡಿ, ನಾನು ವಿ. ಹರಿಕೃಷ್ಣ, ಸಾಧುಕೋಕಿಲಾ ಎಲ್ಲರ ನಿರ್ಧಾರ ಪಡೆದು ಇಲ್ಲಿಗೆ ಬಂದಿದ್ದೀನಿ. ನಮ್ಮ ಅನಿಸಿಕೆಯೂ ಸೋನುಗೆ ಅಸಹಕಾರ ನೀಡ್ಬೇಕು ಅನ್ನೋದು. ನಮ್ಮ ನಿರ್ಧಾರವಷ್ಟೇ ಮುಖ್ಯವಲ್ಲ. ಆಡಿಯೋ ಕಂಪೆನಿಗಳು ಇದಕ್ಕೆ ಸಾಥ್ ನೀಡಬೇಕು ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ