ಹಿರಿಯ ನಟ ಅನಂತ್​ ನಾಗ್​ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ.. ರಾಷ್ಟ್ರಪತಿಗಳಿಂದ ಗೌರವ

author-image
Bheemappa
Updated On
ಹಿರಿಯ ನಟ ಅನಂತ್​ ನಾಗ್​ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ.. ರಾಷ್ಟ್ರಪತಿಗಳಿಂದ ಗೌರವ
Advertisment
  • ಹಿರಿಯ ನಟ ಅನಂತನಾಗ್​​ಗೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
  • ಸಿನಿ ಜಗತ್ತಿನಲ್ಲಿ ಮಾಡಿದ ಮಹತ್ತರ ಸಾಧನೆಗಾಗಿ ಪ್ರಶಸ್ತಿ ಪ್ರದಾನ
  • ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕಾರ

ನವದೆಹಲಿ: ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತನಾಗ್‌ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಪದ್ಮಭೂಷಣ ಪ್ರಶಸ್ತಿಯೂ ದೇಶದ ತೃತೀಯ ನಾಗರಿಕ ಅತ್ಯುನ್ನತ ಪ್ರಶಸ್ತಿ ಆಗಿದೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸಿನಿ ಜಗತ್ತಿನ ಕಲಾ ಕ್ಷೇತ್ರದಲ್ಲಿ ಅನಂತ್‌ ನಾಗ್‌ ಅವರ ಮಹಾನ್ ಸಾಧನೆಗೆ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಹಿಂದೆ ಪ್ರಶಸ್ತಿ ಘೋಷಣೆ ಆಗಿದ್ದಾಗ, ಅನಂತ್ ನಾಗ್ ಅವರು ಈ ಪ್ರಶಸ್ತಿ ಕರ್ನಾಟಕದವರಿಗೆ ಹಾಗೂ ಕನ್ನಡಿಗರಿಗೆ ಅರ್ಪಿಸಿದ್ದೇನೆ ಎಂದು ಹೇಳಿರುವುದು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ:RCBಗೆ ಲಕ್, ಟಾಸ್ ಗೆದ್ದ ಕ್ಯಾಪ್ಟನ್​​.. ಪ್ಲೇಯಿಂಗ್​- 11ರಲ್ಲಿ ದೊಡ್ಡ ಬದಲಾವಣೆ!

publive-image

ಅನಂತ್ ನಾಗ್ ಅವರು 1948ರ ಸೆ.4ರಂದು ಉತ್ತರ ಕನ್ನಡದ ಶಿರಳ್ಳಿ ಗ್ರಾಮದಲ್ಲಿ ಜನಿಸಿದರು. 1973ರ ಸಂಕಲ್ಪ ಸಿನಿಮಾದಿಂದ ಸ್ಯಾಂಡಲ್​ವುಡ್​ನ ಬೆಳ್ಳಿ ತೆರೆಗೆ ಎಂಟ್ರಿಕೊಟ್ಟರು. ಕನ್ನಡದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ನಾ ನಿನ್ನ ಬಿಡಲಾರೆ, ಬಯಲುದಾರಿ, ಅಂಕುರ್ ಮೂವಿ ಸೇರಿದಂತೆ ಹಲವು ಮೂವಿಗಳಲ್ಲಿ ಅನಂತ್ ನಾಗ್ ಅವರು ಅಭಿನಯ ಮಾಡಿ ಯಶಸ್ಸು ಕಂಡುಕೊಂಡರು.

ಬಯಲು ದಾರಿ (1976), ಕನ್ನೇಶ್ವರ ರಾಮ (1977), ಚಂದನದ ಗೊಂಬೆ (1979), ಬೆಂಕಿಯ ಬಾಲೆ (1983), ಹೆಂಡ್ತಿಗೆ ಹೇಳಬೇಡಿ (1989), ಗಣೇಶನ 09 ಮದುವೆ, ಗಂಡು (2006), ಗೋಧಿ ಬಣ್ಣ ಸಾಧಾರಣ ಮೈಕಟ್ಟು (2016), ರಾಜಕುಮಾರ (2017), ಸರ್ಕಾರಿ ಹಿ. ಪ್ರಾ. ಶಾಲೆ, ಕಾಸರಗೋಡು, ಕೆಜಿಎಫ್: ಅಧ್ಯಾಯ 1 (2018), ಕೆಜಿಎಫ್: ಅಧ್ಯಾಯ 2 (2022) ಹಾಗೂ ಗಾಳಿಪಟ 2 (2022) ಸಿನಿಮಾ ಸೇರಿದಂತೆ ಇನ್ನು ಹಲವಾರು ಸಿನಿಮಾಗಳಲ್ಲಿ ಅನಂತ್ ನಾಗ್ ಅವರ ಅಭಿನಯ ಮನಮೋಹಕವಾಗಿರುತ್ತದೆ.

2025ರ ಜನವರಿ 25 ರಂದು ಪದ್ಮಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ 7 ಪದ್ಮವಿಭೂಷಣ ಪ್ರಶಸ್ತಿಗಳನ್ನು ಘೋಷಣೆ ಮಾಡಿತ್ತು. ಇದರ ಜೊತೆಗೆ 19 ಪದ್ಮಭೂಷಣ, 113 ಪದ್ಮಶ್ರೀ ಪ್ರಶಸ್ತಿಗಳನ್ನು ಅನೌನ್ಸ್​ ಮಾಡಿತ್ತು. ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದವರನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment