/newsfirstlive-kannada/media/post_attachments/wp-content/uploads/2024/11/SANDHY-CASE.jpg)
ಕುಡಿತದ ಅಮಲಿನಲ್ಲಿ ಱಶ್ ಡ್ರೈವಿಂಗ್ ಮಾಡಿಕೊಂಡು ಬಂದು ಅಮಾಯಕ ಸಂಧ್ಯಾಳ ಜೀವ ತೆಗೆದಿದ್ದ ಧನುಷ್​ ಮತ್ತೊಬ್ಬ ವ್ಯಕ್ತಿಯ ಜೀವಕ್ಕೂ ಕೂಡ ಕಂಟಕನಾಗಿದ್ದಾನೆ. ಅಂದು ಅವನ ಱಶ್ ಡ್ರೈವಿಂಗ್​ನಿಂದಾಗಿಯೇ ಈಗಲೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸೈಯದ್ ಅರ್ಬಾಜ್ ಎಂಬ ವ್ಯಕ್ತಿ.
ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಅಮಾಯಕ ಯುವತಿಯ ಸಾವಿಗೆ ಕಾರಣನಾಗಿದ್ದ ಧನುಷ್​. ಅಂದು ಪಾರ್ಟಿಯಲ್ಲಿ ತಲೆ ಭುಜದ ಮೇಲೆ ನಿಲ್ಲದಷ್ಟು ಕುಡಿದು ಅದರದೇ ಅಮಲಿನಲ್ಲಿ ಅತಿವೇಗದಲ್ಲಿ ತನ್ನ ಐಷಾರಾಮಿ ಬೆನ್ಜ್ ಕಾರನ್ನು ನುಗ್ಗಿಸಿಕೊಂಡು ಬರುವಾಗ ಕೆಲಸ ಮುಗಿಸಿ ಮನೆಗೆ ಹೊರಟಿದ್ದ 30 ವರ್ಷದ ಸಂಧ್ಯಾಳಿಗೆ ಗುದ್ದಿದ್ದ. ಇವರ ಮೋಜು ಮಸ್ತಿ ಹುಚ್ಚಾಟಕ್ಕೆ ಸಂಧ್ಯಾ ಅನ್ಯಾಯವಾಗಿ ಬಲಿಯಾಗಿ ಹೋಗಿದ್ದಳು.
ಇದನ್ನೂ ಓದಿ: BMTC ಡ್ರೈವರ್‌ಗೆ ಹೃದಯಾಘಾತ.. ಪ್ರಯಾಣಿಕರ ಜೀವ ಉಳಿಸಿದ ಕಂಡಕ್ಟರ್; ಕೊನೇ ಕ್ಷಣದ ವಿಡಿಯೋ ಇಲ್ಲಿದೆ!
/newsfirstlive-kannada/media/post_attachments/wp-content/uploads/2024/11/justiceforsandhya2.jpg)
ಕೆಂಗೇರಿ ಬಸ್​ ನಿಲ್ದಾಣದ ಬಳಿ ರಸ್ತೆ ಕ್ರಾಸ್ ಮಾಡುವಾಗ ಟೆಕ್ಕಿ ಸಂಧ್ಯಾ ಹೀಗೆ ಅನ್ಯಾಯವಾಗಿ ದುರಂತವಾಗಿ ಸಾವಿಗೀಡಾಗಿದ್ದರು. ಇದೇ ಸಮಯದಲ್ಲಿ ಮುಂದೆ ಹೋಗುತ್ತಿದ್ದ ದ್ವಿಚಕ್ರವಾಹನಕ್ಕೂ ಕೂಡ ಧನುಷ್​ನ ಕಾರು ಡಿಕ್ಕಿ ಹೊಡೆದಿತ್ತು. ಸಯ್ಯದ್​ ಅರ್ಬಾಜ್ ಎಂಬ ವ್ಯಕ್ತಿಯು ಈಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಡಿದ ಮತ್ತಲ್ಲಿ ಅತಿವೇಗವಾಗಿ ಕಾರು ಚಾಲನೆ ಮಾಡಿದ್ದೇ ಈ ಎಲ್ಲಾ ದುರಂತಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/11/SANDHY-CASE-1.jpg)
ಇದನ್ನೂ ಓದಿ: ರುದ್ರಣ್ಣ ಯಡವಣ್ಣ ಕೇಸ್​; ಸಚಿವೆ ಆಪ್ತ ಸೇರಿ ಮೂವರ ವಿರುದ್ಧ FIR.. ಆರೋಪಿಗಳು ಎಸ್ಕೇಪ್
ಸದ್ಯ ಹೀಗೆ ಒಬ್ಬರ ಜೀವವನ್ನು ತೆಗೆದು ಮತ್ತೊಬ್ಬರ ಜೀವಕ್ಕೆ ಕಂಟಕನಾಗಿದ್ದ ಆರೋಪಿ ಧನುಷ್​ ದೊಡ್ಡ ಬ್ಯುಸಿನೆಸ್ ಹಿನ್ನೆಲೆಯ ಕುಟುಂಬ. ಧನುಷ್ ತಂದೆ ಎಲ್​ಬಿ ಟ್ರಾವೆಲ್ಸ್​ ನಡೆಸುತ್ತಿದ್ದಾರೆ. ಅಂದು ಕುಡಿದ ಅಮಲಿನಲ್ಲಿ ಧನುಷ್ ಓಡಿಸುತ್ತಿದ್ದ ಕಾರು ಕೂಡ ಎಲ್ ಟ್ರಾವೆಲ್ಸ್ ಹೆಸರನಲ್ಲಿಯೇ ಇದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಕಾರಿನಲ್ಲಿ ಹೋಗುವಾಗ ಸಂಧ್ಯಾಳಿಗೆ ಡಿಕ್ಕಿ ಹೊಡೆದಿದೆ ಕಾರು.
ಇಷ್ಟೆಲ್ಲಾ ಕುಕೃತ್ಯ ನಡೆಸಿದ ಮೇಲೆಯೂ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗೋಕೆ ನೋಡಿದ್ದರು. ಎಸ್ಕೇಪ್ ಆಗಲು ಯತ್ನಿಸಿದ್ದ ಧನುಷ್ ಹಾಗೂ ಸ್ನೇಹಿತರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪಘಾತದ ಬಳಿಕ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಧನುಷ್ ಹಾಗೂ ಆತನ ಸ್ನೇಹಿತರು ಕುಡಿದಿದ್ದು ಪತ್ತೆಯಾಗಿದೆ. ಅಪಘಾತಕ್ಕೆ ಕಾರಣವಾಗಿದ್ದ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಬಿಎನ್​ಎಸ್ 105ರ ಅಡಿಯಲ್ಲಿ ಧನುಷ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us