newsfirstkannada.com

×

ಕೋಟಿ ಕೊಟ್ರೂ ಬಿಗ್​ಬಾಸ್​ಗೆ ಹೋಗಲ್ಲ ಎಂದಿದ್ದ ಡ್ರೋನ್​ ಪ್ರತಾಪ್​​, ಸಂಗೀತಾ; ಆಮೇಲೇನಾಯ್ತು..?

Share :

Published January 25, 2024 at 5:52am

    ಕೋಟಿ ಕೊಟ್ಟರೂ ಬಿಗ್​​ಬಾಸ್​ ಮನೆಗೆ ಹೋಗಲ್ಲ ಎಂದಿದ್ದ ಸ್ಪರ್ಧಿಗಳು!

    ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಬಳಿಕ ಇವರಿಗೆ ಫ್ಯಾನ್​​ ಬೇಸ್​ ಜಾಸ್ತಿ ಆಯ್ತು

    ನಾವು ಬಿಗ್​ಬಾಸ್ ನೋಡ್ತಾ ಇರೋದೇ ಪ್ರತಾಪ್​ಗೋಸ್ಕರ ಎಂದ ಫ್ಯಾನ್ಸ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಗ್ರ್ಯಾಂಡ್​ ಫಿನಾಗೆ ಇನ್ನೂ ಮೂರೇ ದಿನ ಬಾಕಿ ಉಳಿದಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ 6 ಸ್ಪರ್ಧಿಗಳು ಗ್ರ್ಯಾಂಡ್​ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಆದರೆ ಬಿಗ್​ಬಾಸ್​ಗೂ ಬರುವ ಮುನ್ನ ಈ ಇಬ್ಬರು ಸ್ಪರ್ಧಿಗಳು ಕೋಟಿ ಕೊಟ್ಟರು ನಾನು ಬಿಗ್​ಬಾಸ್​ಗೆ ಹೋಗುವುದಿಲ್ಲ ಅಂತಾ ಹೇಳಿದ್ದರು.

ಆದರೆ ಈ ಹೇಳಿಕೆಯನ್ನು ನೀಡಿದ್ದ ಆ ಇಬ್ಬರು ಸ್ಪರ್ಧಿಗಳು ಬಿಗ್​ಬಾಸ್​​ನ ಗ್ರ್ಯಾಂಡ್​​ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬೇರೆ ಯಾರು ಅಲ್ಲ. ಅದುವೇ ಚಾರ್ಲಿ ಸಿನಿಮಾದ ನಟಿ ಸಂಗೀತಾ ಶೃಂಗೇರಿ ಹಾಗೂ ಡ್ರೋನ್​​ ಪ್ರತಾಪ್​​. ಹೌದು, ಬಿಗ್​​ ಮನೆಗೆ ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಹಾಗೂ ಡ್ರೋನ್​ ಪ್ರತಾಪ್​ ಇಬ್ಬರು ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.

ಬಿಗ್​ಬಾಸ್​ ಮನೆಗೆ ಈ ಇಬ್ಬರು ಎಂಟ್ರಿ ಕೊಟ್ಟ ಬಳಿಕ ಫ್ಯಾನ್​​ ಬೇಸ್​ ಜಾಸ್ತಿಯಾಗಿದೆ. ಹಂತ ಹಂತವಾಗಿ ಬಿಗ್​ಬಾಸ್​​ ಕೊಟ್ಟ ಟಾಸ್ಕ್​​​ಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಜನರ ಮನಸ್ಸನ್ನು ಗೆದ್ದುಕೊಂಡರು. ಸದ್ಯ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಾವು ಬಿಗ್​ಬಾಸ್ ನೋಡ್ತಾ ಇರೋದೇ ಪ್ರತಾಪ್​ಗೋಸ್ಕರ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಬಿಗ್​ಬಾಸ್​​ಗೆ ಬರೋ ಮುಂಚೆ  ಸಂಗೀತಾ ‘‘ನಾನು ಕೋಟಿ ಕೊಟ್ಟರು ಬಿಗ್ಬಾಸ್​ಗೆ ಹೋಗುವುದಿಲ್ಲ’’ ಅಂತಾ ಹೇಳಿದ್ದರು. ಇತ್ತ ಪ್ರತಾಪ್, ‘‘ಇಲ್ಲ ಆ ಶೋ ನಾನ್ ನೋಡೇ ಇಲ್ಲಾ. ಇಲ್ಲಿ ಮಾಡಬೇಕಿರೋ ಕೆಲಸ ಬಿಟ್ಟು 2-3 ತಿಂಗಳು ಅಲ್ಲಿ ಹೋಗಿ ಇರೋಕೆ ಆಗೋಲ್ಲ’’ ಎಂದಿದ್ದರು. ಆದ್ರೆ ಈಗ ಈ ಇಬ್ಬರೇ ಫಿನಾಲೆ ಮೆಟ್ಟಿಲು ಏರಿದ್ದಾರೆ. ಆಚೆ ಇದ್ದಾಗ ಇಷ್ಟ ಇಲ್ಲಾ ಅಂದೋರನ್ನೇ ಫಿನಾಲೆ ಮೆಟ್ಟಿಲು ಏರಿಸಿದ್ರಾ ವೀಕ್ಷಕರು ಎಂಬ ಪ್ರಶ್ನೆ ಎದುರಾಗಿದೆ.

ಒಬ್ಬ ಸೈಲೆಂಟ್ ಆಗಿ ಇದ್ದುಕೊಂಡೆ ಕರುನಾಡ ಮನ ಗೆದ್ದುಕೊಂಡ. ಇನ್ನೊಬ್ಬರು ಮಾತಿನಲ್ಲೇ ಎಲ್ಲಾರನ್ನು ಎದರು ಹಾಕೊಂಡು ಸಿಂಗಲ್ ಆಗಿ ಫೈಟ್ ಮಾಡಿದವರು. ಈ ಇಬ್ಬರ ಪ್ಲಾನ್ ಮನೆಯಲ್ಲಿ ಸಖತ್​ ಆಗಿ ವರ್ಕ್​ ಆಯ್ತು. ಇನ್ನು ನಿನ್ನೆ ಬಿಗ್​ಬಾಸ್​ ಆರು ಸ್ಪರ್ಧಿಗಳಿಗೆ ಖಡಕ್​ ಆಗಿ ಪ್ರಶ್ನೋತ್ತರ ನಡೆಸಲು ಕಿರಿಕ್​ ಕೀರ್ತಿ ಮತ್ತು ಜಾಹ್ನವಿ ಬಿಗ್​ ಮನೆಗೆ ಕಾಲಿಟ್ಟಿದ್ದಾರೆ. ಇವರ ಕೇಳುವ ನೇರ ಪ್ರಶ್ನೆಗಳಿಗೆ ಸ್ಪರ್ಧಿಗಳು ನೇರವಾಗಿ ಉತ್ತರಿಸಿದ್ದಾರೆ. ಪ್ರತಾಪ್ ಹಾಗೂ ಸಂಗೀತಾಗೆ ಬಿಗ್‌ಬಾಸ್ ಬರಲ್ಲ ಅಂತಾ ಹೇಳಿ ಬಿಗ್ ಬಾಸ್‌ಗೆ ಬಂದಿದ್ದೀರಾ ಎಂದು ಕೇಳಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಆಗ ಈ ಪ್ರಶ್ನೆಗೆ ಉತ್ತರಿಸಿದ ಸಂಗೀತಾ ಹೀಗೆ ಇರುತ್ತೆ ಅಂತಾ ಗೊತ್ತಿರಲಿಲ್ಲ. ಇದೊಂದು ಹೊಸ ಪ್ರಪಂಚ. ನಾನೂ ಇಲ್ಲಿಯ ನೆನಪುಗಳನ್ನು ಯಾವತ್ತು ಮರೆಯಲ್ಲ ಎಂದು ಹೇಳಿದ್ದಾರೆ. ಮತ್ತು ಪ್ರತಾಪ್‌ ಮಾತನಾಡಿ ಈ ಹಿಂದೆ ಕೂಡಾ ಬಿಗ್‌ಬಾಸ್ ತಂಡನನ್ನು ಕಾಂಟೆಕ್ಟ್ ಮಾಡಿತ್ತು. ನಾನು ಒಪ್ಪಿರಲಿಲ್ಲ ಆದರೆ ಈ ಬಾರಿ ಹ್ಯಾಪಿ ಬಿಗ್‌ಬಾಸ್ ಅಂತಾ ಹೇಳಿದ್ದಕೆ ನಾನು ಬಂದೆ. ತುಂಬಾ ಬದಲಾವಣೆ ತಂದಿದೆ ಈ ಬಿಗ್‌ಬಾಸ್ ಎಂದು ಹೇಳಿದ್ದಾರೆ. ಸದ್ಯ ಬಿಗ್​ಬಾಸ್​ ಎಷ್ಟು ಸಲ ಆಫರ್​ ಬಂದ್ರು ಹೋಗಲ್ಲ ಅಂದವರು ಈಗ ಫಿನಾಲೆ ಮೆಟ್ಟಿಲೇರಿ ಇಬ್ಬರಲ್ಲಿ ಒಬ್ಬರು ಬಿಗ್​ಬಾಸ್​ ಟ್ರೋಫಿ ಗೆಲ್ಲುತ್ತಾರಾ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟಿ ಕೊಟ್ರೂ ಬಿಗ್​ಬಾಸ್​ಗೆ ಹೋಗಲ್ಲ ಎಂದಿದ್ದ ಡ್ರೋನ್​ ಪ್ರತಾಪ್​​, ಸಂಗೀತಾ; ಆಮೇಲೇನಾಯ್ತು..?

https://newsfirstlive.com/wp-content/uploads/2024/01/bigg-boss-2024-01-24T191918.009.jpg

Load More