Advertisment

Exclusive: ಬಿಗ್​ಬಾಸ್​ ಫಿನಾಲೆಗೆ ಡೈರೆಕ್ಟ್‌ ಎಂಟ್ರಿ.. ಮೊದಲ ಟಿಕೆಟ್​​ ಪಡೆದ ಸ್ಪರ್ಧಿ ಇವರೇ!

author-image
Veena Gangani
Updated On
Exclusive: ಬಿಗ್​ಬಾಸ್​ ಫಿನಾಲೆಗೆ ಡೈರೆಕ್ಟ್‌ ಎಂಟ್ರಿ.. ಮೊದಲ ಟಿಕೆಟ್​​ ಪಡೆದ ಸ್ಪರ್ಧಿ ಇವರೇ!
Advertisment
  • ಬಿಗ್​ಬಾಸ್​ ಮನೆಯಲ್ಲಿ ವಾತಾವರಣವೆಲ್ಲ ಫುಲ್ ಚೇಂಜ್​
  • ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದವರೇ ಫೈನಲ್​ಗೆ ಎಂಟ್ರಿ
  • ಬಿಗ್​ಬಾಸ್​ ಕೊಟ್ಟ ಟಾಸ್ಕ್​​ನಲ್ಲಿ ಹೆಚ್ಚು ಅಂಕ ಪಡೆದುಕೊಂಡ ಸ್ಪರ್ಧಿ​​

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​​ಬಾಸ್​​ ಸೀಸನ್​​ 10ರ ಸ್ಪರ್ಧಿಯಾಗಿರೋ ಸಂಗೀತಾ ಶೃಂಗೇರಿ ನೇರವಾಗಿ ಫಿನಾಲೆ ವಾರಕ್ಕೆ ಆಯ್ಕೆಯಾಗಿದ್ದಾರೆ. ಬಿಗ್​ಬಾಸ್​​ ಮನೆಗೆ ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಅವರು ಫೈನಲ್​ಗೆ ಎಂಟ್ರಿ ಕೊಡುತ್ತಿದ್ದಾರೆ.

Advertisment

publive-image

ಬಿಗ್​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳಿಗೆ ಟಿಕೆಟ್​ ಡಿಸೈಡ್ ಗೇಮ್ ಟಾಸ್ಕ್​​ವೊಂದನ್ನು ಕೊಟ್ಟಿದ್ದರು. ಈ ಟಾಸ್ಕ್​ನಿಂದ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿ ಉಂಟಾಗಿತ್ತು. ಹಾಗಾಗಿ ಮನೆಯ ವಾತಾವರಣವೆಲ್ಲ ಫುಲ್ ಬದಲಾವಣೆಯಾಗಿತ್ತು. ಇಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವ ಸ್ಪರ್ಧಿ ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತು. ಈಗ ಟಿಕೆಟ್​ ಡಿಸೈಡ್ ಗೇಮ್​ನಲ್ಲಿ ಸಂಗೀತಾ ಅವರು 260 ಅಂಕಗಳನ್ನು ಗಳಿಸಿ ಫಿನಾಲೆ ವಾರಕ್ಕೆ ಮೊದಲ ಟಿಕೆಟ್​​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಯಲ್ಲಿ ಅಚ್ಚರಿ ಬೆಳವಣಿಗೆ.. ಸಂಗೀತಾರನ್ನ ಹೊರಗಿಟ್ಟಿದ್ದೇಕೆ ಡ್ರೋನ್​ ಪ್ರತಾಪ್?

publive-image

ಈ ವಿಚಾರ ಸಂಗೀತಾ ಅವರ ಫ್ಯಾನ್ಸ್​ಗೆ ತಿಳಿಯುತ್ತಿದ್ದಂತೆ ಫುಲ್​ ಖುಷ್​ ಆಗಿದ್ದಾರೆ. ಸದ್ಯ ಬಿಗ್​ಬಾಸ್​ ಫಿನಾಲೆ ಕೇವಲ ಎರಡು ವಾರಗಳು ಬಾಕಿ ಉಳಿದಿದೆ. ಇದೇ ಹೊತ್ತಲ್ಲಿ ಸಂಗೀತಾ ಅವರು ಫಿನಾಲೆ ವಾರಕ್ಕೆ ಮೊದಲ ಟಿಕೆಟ್​​ ಪಡೆದ ಸ್ಪರ್ಧಿಯಾಗಿ ಹೊರ ಹೊಮ್ಮಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment