/newsfirstlive-kannada/media/post_attachments/wp-content/uploads/2024/12/SHAMI-SANIYA.jpg)
ಟೀಂ ಇಂಡಿಯಾ ಸ್ಟಾರ್​ ಮೊಹಮ್ಮದ್ ಶಮಿ ಮತ್ತು ಟೆನಿಸ್ ಸೆನ್ಸೇಷನ್ ಸಾನಿಯಾ ಮಿರ್ಜಾಗೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ಅವು ನಕಲಿ ಚಿತ್ರಗಳಾಗಿದ್ದು, AI ರಚಿತ ಚಿತ್ರಗಳಾಗಿವೆ.
ವೈರಲ್ ಆಗಿರುವ ಕೆಲವು ಚಿತ್ರಗಳಲ್ಲಿ ಅವರನ್ನು ದುಬೈನಲ್ಲಿ ತೋರಿಸಲಾಗಿದೆ. ಇಬ್ಬರೂ ಮದುವೆ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಮದುವೆಯಾಗಲಿದ್ದಾರೆ ಎಂದು ಅನೇಕ ಪೋಸ್ಟ್‌ಗಳು ಹೇಳಿವೆ. ಆದರೆ ಅವೆಲ್ಲ ನಕಲಿ ಚಿತ್ರಗಳಾಗಿವೆ.
AI ಮಾಡಿದ ನಕಲಿ ಚಿತ್ರ ಗುರುತಿಸೋದು ಹೇಗೆ?
ಎಐ ರಚಿಸಿದ ಚಿತ್ರವನ್ನು ಎಚ್ಚರಿಕೆಯಿಂದ ನೋಡಿದರೆ ಅದರಲ್ಲಿ ಏನಾದರೂ ಒಂದು ತಪ್ಪು ಕಾಣಿಸುತ್ತದೆ. ಅದು ರಿಯಲ್ ಫೋಟೋ ಅಲ್ಲ ಎಂದು ಗೊತ್ತಾಗುತ್ತದೆ. ಕೆಲ ಫೋಟೋಗಳಲ್ಲಿ, ಕೈಗಳ ಬೆರಳುಗಳು ವಿಚಿತ್ರ ರೀತಿಯಲ್ಲಿ ರೂಪುಗೊಂಡರೆ, ಇನ್ನು ಕೆಲ ಫೋಟೋಗಳಲ್ಲಿ ವ್ಯಕ್ತಿಯ ಕಿವಿ ಕಾಣೆಯಾಗಿರುತ್ತದೆ. ಕಣ್ಣುಗಳು, ಹಲ್ಲುಗಳು ವಿಚಿತ್ರವಾಗಿ ಕಾಣುತ್ತದೆ. AIನ ಚಿತ್ರಗಳ ಬ್ಯಾಗ್ರೌಂಡ್ ಮುಸುಕಾಗಿರುತ್ತದೆ.
/newsfirstlive-kannada/media/post_attachments/wp-content/uploads/2024/12/SHAMI-SANIYA-1.jpg)
AI ಪತ್ತೆ ಟೂಲ್: ಇತ್ತೀಚಿನ ದಿನಗಳಲ್ಲಿ AI ನೊಂದಿಗೆ ಮಾಡಿದ ಚಿತ್ರಗಳನ್ನು ಪತ್ತೆಹಚ್ಚಲು ಅನೇಕ ಫೈಂಡ್​ ಟೂಲ್ ಸಹ ಲಭ್ಯವಿದೆ. ಆನ್‌ಲೈನ್‌ನಲ್ಲಿ ಅನೇಕ ಸಾಧನಗಳಿವೆ. ಅದರ ಸಹಾಯದಿಂದ ಅಸಲಿ, ಮೋಸದ ಫೋಟೋಗಳು ಯಾವುದೆಂದು ತಿಳಿಯಬುದು.
ನೆರಳು ಮೇಲೆ ಗಮನ ಕೊಡಿ: ನಕಲಿ ಫೋಟೋಗಳಲ್ಲಿನ ವಸ್ತುವಿನ ನೆರಳಿಗೆ ಗಮನ ಕೊಡಿ. ವಸ್ತುವಿನ ನೆರಳು ಬೆಳಕಿನ ಮೂಲದ ಎದುರು ಭಾಗದಲ್ಲಿರಬೇಕು.
ರಿವರ್ಸ್ ಇಮೇಜ್ ಸರ್ಚ್: ಗೂಗಲ್ ಸಹಾಯದಿಂದ ನೀವು ಚಿತ್ರಗಳ ಸತ್ಯಾಸತ್ಯತೆಯನ್ನು ಕಂಡುಹಿಡಿಯಬಹುದು. Googleನಲ್ಲಿ ಯಾವುದೇ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್​​ನಲ್ಲಿ ಹುಡುಕಿ. ಚಿತ್ರ ಅಸಲಿ ಆಗಿದ್ದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯೂ ಸಿಗುತ್ತದೆ.
ಇದನ್ನೂ ಓದಿ:ಅಪ್ಪನಾದ ಖುಷಿಯಲ್ಲಿ ಟೀಂ ಇಂಡಿಯಾ ಸ್ಟಾರ್.. ಮುದ್ದಾದ ಮಗುವಿನ ಹೆಸರು ರಿವೀಲ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us