/newsfirstlive-kannada/media/post_attachments/wp-content/uploads/2025/04/bramagantu.jpg)
ಬ್ರಹ್ಮಗಂಟು ಧಾರಾವಾಹಿ ಪ್ರಾರಂಭದ ದಿನಗಳಲ್ಲಿ ವೀಕ್ಷಕರ ಮನಸ್ಸು ಗೆಲ್ಲೋಕೆ ಒದ್ದಾಡ್ತಾಯಿತ್ತು. ದೀಪಾ ಲಂಗ ದಾವಣಿಯಿಂದ ಸೀರೆಗೆ ಶಿಫ್ಟ್ ಆದ್ಮೇಲೆ ಧಾರಾವಾಹಿ ದಿಕ್ಕೇ ಬದಲಾಗಿದೆ. ಟಿಆರ್ಪಿ ಲಿಸ್ಟ್ನಲ್ಲಿ ಟಾಪ್ ಹತ್ತು ಧಾರಾವಾಹಿಗಳ ಸಾಲಿನಲ್ಲಿ ಬ್ರಹ್ಮಗಂಟು ಕೂಡ ಸ್ಥಾನ ಪಡೆದುಕೊಂಡಿದೆ. ಚಿರು-ದೀಪಾ ಕ್ಯೂಟ್ ಕ್ಯೂಟ್ ಕ್ಷಣಗಳು ವೀಕ್ಷಕರನ್ನ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ನರಸಿಂಹ ಪಾತ್ರದಲ್ಲಿ ಭರತ್ ಹಾಗೂ ಸಂಜನಾ ಪಾತ್ರದಲ್ಲಿ ಆರತಿ ಜೋಡಿ ವೀಕ್ಷಕರಿಗೆ ಮೋಡಿ ಮಾಡ್ತಿದ್ದಾರೆ.
ಇದನ್ನೂ ಓದಿ:ಹಣೆಯ ಬೊಟ್ಟು, ಕೈ ಬಳೆ ನೋಡಿ ಗುಂಡಿಟ್ರು.. ಶಿವಮೊಗ್ಗದಲ್ಲಿ ಕರಾಳತೆ ಬಿಚ್ಚಿಟ್ಟ ಮಂಜುನಾಥ್ ಮಗ ಅಭಿ ಜೈ!
ನರಸಿಂಹ ಹಾಗೂ ಸಂಜನಾ ಜೋಡಿ ಕೂಡ ವರ್ಕ್ ಔಟ್ ಆಗಿದೆ. ರೆಬಲ್ ಜೋಡಿ ಅಂದ್ರೂ ತಪ್ಪಲ್ಲ. ಜಗಳದ ಜುಗಲ್ಬಂದಿ ನೋಡೋಕಂತನೇ ಕಾದು ನೋಡೋ ಅಭಿಮಾನಿಗಳಿದ್ದಾರೆ. ನನ್ನ ನೀನು ಗೆಲ್ಲಲಾರೇ.. ರೆಂಜ್ಗೆ ಇಬ್ಬರೂ ಕಿತ್ತಾಡ್ತಿರ್ತಾರೆ. ಸದ್ಯ ಸಂಜನಾ ಬೆಳದಿಂಗಳ ಬಾಲೆ ಆಟ ಬಯಲಾಗಿದೆ. ನರಸಿಂಹ ಕೊಡ್ತಿರೋ ತಿರುಗೇಟಿಗೆ ಸಂಜನಾ ಕೊಬ್ಬು ಕರಗ್ತಿದೆ.
ಇಬ್ಬರೂ ಒಟ್ಟಿಗೆ ಕೂತು ಎಣ್ಣೆ ಪಾರ್ಟಿ ಮಾಡ್ತಿರ್ಬೇಕಾದ್ರೇ ಸಂಜನಾ ಪೋಷಕರು ಎಂಟ್ರಿ ಕೊಡ್ತಾರೆ. ಮಗಳ ಮೇಲೆ ಹರಿಹಾಯ್ದು, ಬೇಗ ಮದುವೆ ಮಾಡಿ ಇದಕ್ಕೆಲ್ಲಾ ಫುಲ್ ಸ್ಟಾಪ್ ಇಡ್ಬೇಕು ಅಂತ ಪ್ಲ್ಯಾನ್ ಮಾಡಿದ್ದಾರೆ. ಸಂಜನಾಗೆ ಹೆಣ್ಣು ನೋಡೋ ಶಾಸ್ತ್ರ ಮಾಡಲಾಗುತ್ತೆ. ಆಗ ನರಸಿಂಹನ ಎಂಟ್ರಿ. ಇದು ಮುಂಬರುವ ಸಂಚಿಕೆಗಳ ಇಂಟ್ರಸ್ಟಿಂಗ್ ಸ್ಟೋರಿ. ಸದ್ಯ ನಮಗೆ ಒಂದಿಷ್ಟು ಶೂಟಿಂಗ್ ಫೋಟೋಗಳು ಲಭ್ಯ ಆಗಿದ್ದು, ನರಸಿಂಹ ವೈಟ್ ಆ್ಯಂಡ್ ವೈಟ್ ಪಂಚೆ ಶರ್ಟ್ನಲ್ಲಿ ಮಿಂಚ್ತಿದ್ರೇ ಸಂಜನಾ ಹಸಿರು ಸೀರೆ ಉಟ್ಟು ಕಂಗೋಳಿಸ್ತಿದ್ದಾಳೆ. ಈ ವಿಡಿಯೋ ನೋಡ್ತಿದ್ರೇ ಇಬ್ಬರೂ ಮದುವೆ ಆಗೋಕೆ ಸಜ್ಜಾಗ್ತಿದ್ದಾರೆ ಅನ್ಸದೇ ಇರದು.
ಇನ್ನೂ, ದೀಪಾಳ ಅಕ್ಕ ರೂಪ ಇಷ್ಟು ದಿನ ಸೀರಿಯಲ್ನಲ್ಲಿ ಆಗಾಗ ಕಾಣಿಸಿಕೊಳ್ತಿದ್ರು. ಇನ್ಮುಂದೆ ತಂಗಿ ಬಾಳಿಗೆ ವಿಲನ್ ಆಗಿ ಬರೋ ಚಾನ್ಸ್ ಇದೆ. ಹೀರೋಯಿನ್ ಆಗೋ ಕನಸು ಹೊತ್ತು ಮದುವೆ ಮನೆಯಿಂದ ಓಡಿ ಹೋಗಿದ್ದ ರೂಪ ಮುಂದೆ ಬಾಯ್ಫ್ರೆಂಡ್ ಮೋಸದ ಆಟ ಬಯಲಾಗಿದ್ದು, ಚಿರು ಅರಸಿ ದೀಪಾ ಬಾಳಿಗೆ ಮತ್ತೇ ಮುಳ್ಳಾಗಿ ಬರೋ ಚಾನ್ಸ್ ಇದೆ. ಒಟ್ಟಿನಲ್ಲಿ ಮುಂಬರುವ ಬ್ರಹ್ಮಗಂಟು ಸಂಚಿಕೆಗಳು ಸಖತ್ ಇಂಟ್ರಸ್ಟಿಂಗ್ ಆಗಿದ್ದು, ನರಸಿಂಹ-ಸಂಜನಾ ಮ್ಯಾರೆಜ್ ಗಲಾಟೆ ಡಬಲ್ ಮನರಂಜನೆ ಹೊತ್ತು ತರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ