/newsfirstlive-kannada/media/post_attachments/wp-content/uploads/2024/07/Kohli_Bumrah.jpg)
ವೆಸ್ಟ್ ಇಂಡೀಸ್ನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿತ್ತು. ಇದಕ್ಕೆ ಕಾರಣ ಟೀಮ್ ಇಂಡಿಯಾದ ಸ್ಟಾರ್ ವೇಗಿ ಬುಮ್ರಾ ಎಸೆದ ಕೊನೆ 3 ಓವರ್ಗಳು. ಇವರು ಕೊನೆ 3 ಓವರ್ಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಭಾರತ ತಂಡವನ್ನು ಗೆಲ್ಲಿಸಿದ್ರು. ಹಾಗಾಗಿ ಬುಮ್ರಾ ಅವರನ್ನು ವಿರಾಟ್ ಕೊಹ್ಲಿ ಇತ್ತೀಚೆಗೆ ಮುಂಬೈ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆದ ಟಿ20 ವಿಶ್ವಕಪ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೊಂಡಾಡಿದ್ರು.
ಇನ್ನು, ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲಲು ಕಾರಣ ಬುಮ್ರಾ ಎಂದು ವಿರಾಟ್ ಕೊಹ್ಲಿ ಹೇಳಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸ್ಟಾರ್ ವೇಗಿ ಬುಮ್ರಾ ಹೆಂಡತಿ ಸಂಜನಾ ಗಣೇಶ್ ಅವರೇ ಕೊಹ್ಲಿ ಅವರಿಗೆ ಥ್ಯಾಂಕ್ಸ್ ತಿಳಿಸಿದ್ದಾರೆ. ಡಿಯರ್ ವಿರಾಟ್ ಕೊಹ್ಲಿ, ಕ್ರಿಕೆಟ್ ಜಗತ್ತಿನ ಮುಂದೆ ಬುಮ್ರಾ ಅವರನ್ನು ಹೈಪ್ ಮಾಡಿದ್ದಕ್ಕೆ ಧನ್ಯಾವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
Dear, Virat Kohli.
Thank you for hyping Jasprit Bumrah in front of the cricketing World. ?❤️ pic.twitter.com/N6t03v0ov2
— Sanjana Ganesan ?? (@iSanjanaGanesan) July 4, 2024
ಬುಮ್ರಾ ಬಗ್ಗೆ ಕೊಹ್ಲಿ ಹೇಳಿದ್ದೇನು..?
ಟೀಮ್ ಇಂಡಿಯಾ ಯಾವಾಗ ಸಂಕಷ್ಟಕ್ಕೆ ಸಿಲುಕಿದ್ರೂ ಈತ ಇದ್ದೇ ಇರುತ್ತಾನೆ. ಪ್ರತಿ ಬಾರಿ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮನ್ನು ಪದೇ ಪದೇ ಗೆಲ್ಲಿಸೋ ಭರವಸೆ ಮೂಡಿಸಿದ್ದು ಬೂಮ್ರಾ. ಮತ್ತೆ ಮತ್ತೆ ಈ ಟಿ20 ವಿಶ್ವಕಪ್ ಗೆಲುವಿನತ್ತ ಕರೆತಂದ ವ್ಯಕ್ತಿ ಆತ. ಬುಮ್ರಾ ಎಂಟನೇ ಅದ್ಭುತ. ಅವರು ನಮ್ಮ ದೇಶಕ್ಕಾಗಿ ಆಡುತ್ತಿರುವುದು ನಮ್ಮ ಅದೃಷ್ಟ. ಫೈನಲ್ ಪಂದ್ಯದ ಕೊನೆ 5 ಓವರ್ಗಳಲ್ಲಿ ಬುಮ್ರಾ ಬೌಲಿಂಗ್ ಮಾತ್ರ ಬಹಳ ವಿಶೇಷ. 2-3 ಬೌಲ್ ಮಾಡಿ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ರು. ನಾವು ಎಲ್ಲರೂ ಬುಮ್ರಾ ಅವರನ್ನು ಅಭಿನಂದಿಸೋಣ. ಭಾರತದ ವಿಶ್ವಕಪ್ ಗೆಲುವಿಗೆ ಅವರೇ ಕಾರಣ ಎಂದಿದ್ದರು ಕೊಹ್ಲಿ.
ಇದನ್ನೂ ಓದಿ: ರೋಹಿತ್, ಹಾರ್ದಿಕ್ ಅಲ್ಲ.. ಭಾರತ ವಿಶ್ವಕಪ್ ಗೆಲುವಿಗೆ ಈ ಆಟಗಾರ ಕಾರಣ ಎಂದ ಕೊಹ್ಲಿ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ