/newsfirstlive-kannada/media/post_attachments/wp-content/uploads/2024/10/SANJAY-DATT-MARRIEGE.jpg)
ಬಾಲಿವುಡ್​ನಲ್ಲಿ ನಡೆಯುವ ಮದುವೆಗಳು ಸದಾ ಪತ್ರಿಕೆಯ ಹಾಗೂ ಟಿವಿ ಮಾಧ್ಯಮಗಳ ಹೆಡ್​ಲೈನ್​ಗಳಾಗಿ ಬಿಡುತ್ತವೆ. ಅದು ಇಡೀ ದೇಶವನ್ನು ಚರ್ಚೆಗೆ ದೂಡುವ ಹಾಟ್​ ಟಾಪಿಕ್ ಆಗಿ ಬದಲಾಗುತ್ತದೆ. ಕೆಲವೊಮ್ಮೆ ಅವರ ಅದ್ಧೂರಿತನಗಳು ಹಾಗೂ ಕೆಲವೊಮ್ಮೆ ಅತ್ಯಂತ ಸರಳವಾಗಿ ಆಗಿರುವ ಮದುವೆಯಗಳು, ಒಟ್ಟಿನಲ್ಲಿ ಬಾಲಿವುಡ್ ಅಂಗಳದಲ್ಲಿ ಎಂತಹುದೇ ಮದುವೆಗಳು ನಡೆದರು ಅದು ಚರ್ಚೆಗೆ ಗ್ರಾಸವಾಗುತ್ತದೆ. ಸದ್ಯ ಬಾಲಿವುಡ್​ನ ಹಿರಿಯ ನಟ ಸಂಜಯ್​ ದತ್ತ ನಾಲ್ಕನೇ ಬಾರಿ ಮದುವೆಯಾಗುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಸದ್ಯ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ಇದನ್ನೂ ಓದಿ:Vettaiyan review: ಪಕ್ಕಾ ಮಾಸ್ & ಕ್ಲಾಸ್.. ರಜನಿಕಾಂತ್ ವೆಟ್ಟಯ್ಯನ್ ಸಿನಿಮಾ ಹೇಗಿದೆ ಗೊತ್ತಾ?
ಬಿಟೌನ್ ಅಂಗಳದಲ್ಲಿ ಮುನ್ನಾಭಾಯ್, ಆಕಾ, ಸಂಜುಬಾಬಾ ಅಂತಲೇ ಕರಿಸಿಕೊಳ್ಳುವ ಸಂಜಯ್​ ದತ್ತ ಮತ್ತೊಮ್ಮೆ ಮದುವೆಯಾಗಿರುವ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದ್ರೆ ಸಂಜಯ್​ ದತ್ತ​ರನ್ನು ಮದುವೆಯಾದ ವಧು ಯಾರು ಅಂತ ನೋಡಿದ್ರೆ, ಅದು ಮತ್ಯಾರು ಅಲ್ಲ ಈಗಾಗಲೇ ಸಂಜುಬಾಬಾನ ಮೂರನೇ ಹೆಂಡತಿಯಾಗಿ ಕೈಹಿಡಿದಿರುವ ಮಾನ್ಯತಾ ದತ್ತ.
ಇದನ್ನೂ ಓದಿ:ನಟ ದರ್ಶನ್ ಹೊಸ ಸಿಗ್ನಲ್.. ಅಭಿಮಾನಿಗಳು ಫುಲ್ ಖುಷ್; ಜೈಲಿಂದ ದಾಸ ಕೊಟ್ಟ ಸಂದೇಶ ಏನು?
ಸದ್ಯ ಸಂಜಯ್ ದತ್ತ ಹಾಗೂ ಮಾನ್ಯತಾ ದತ್ತ ಹವನ ಕುಂಡದ ಸುತ್ತ ಏಳು ಹೆಜ್ಜೆಯನ್ನಿಟ್ಟ ವಿಡಿಯೋವೊಂದು ವೈರಲ್ ಆಗುತ್ತಿದೆ. ಏನಿದು ವಿಚಾರ ಅಂತ ನೋಡಿದಾಗ ಇತ್ತೀಚೆಗೆ ಸಂಜಯ್ ದತ್ತ ತಮ್ಮ ಮನೆಯನ್ನು ನವೀಕರಣಗೋಳಿಸಿದ್ದಾರೆ. ಹೀಗಾಗಿ ಮನೆಯಲ್ಲೊಂದು ಪೂಜೆಯನ್ನಿಟ್ಟುಕೊಂಡಿದ್ದಾರೆ. ಇದೇ ವೇಳೆ ಸಂಜಯ್ ದತ್ತ ಹಾಗೂ ಮಾನ್ಯತಾ ಮದುವೆಯಾಗಿ 16 ವರ್ಷಗಳು ಕೂಡ ತುಂಬಿದ್ದರಿಂದ ಈ ಜೋಡಿ ಮತ್ತೊಮ್ಮೆ ಮದುವೆಯಾಗಿದೆ. ಮದುವೆಯಲ್ಲಿ ನಡೆಯುವ ಸಾಂಪ್ರದಾಯದಂತೆ ಇಬ್ಬರು ಹೋಮ ಕುಂಡದ ಸುತ್ತ ಏಳು ಹೆಜ್ಜೆಯನ್ನಿಟ್ಟಿದ್ದಾರೆ.
View this post on Instagram
ಸಂಜಯ್​ ದತ್ತ ಕೇಸರಿ ಬಣ್ಣದ ಕುರ್ತಾ ಹಾಗೂ ದೋತಿ ಮತ್ತು ಅದೇ ಬಣ್ಣದ ಶಾಲ್ ಹಾಕಿಕೊಂಡು ಹೋಮದಲ್ಲಿ ಭಾಗವಹಿಸಿದ್ದರೆ, ಮಾನ್ಯತಾ ಬಿಳಿ ಬಣ್ಣದ ಚೂಡಿಯುಟ್ಟು ಹೋಮಹವನದಲ್ಲಿ ಭಾಗಿಯಾಗಿದ್ದರು. ಸದ್ಯ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us