/newsfirstlive-kannada/media/post_attachments/wp-content/uploads/2024/11/RCB-5.jpg)
ಆರ್​​ಸಿಬಿ ಫುಲ್​ ಟ್ರೆಂಡಿಂಗ್​ನಲ್ಲಿದೆ. ಲಾಯಲ್​ ಫ್ಯಾನ್ಸ್​ ಫುಲ್​ ರೊಚ್ಚಿಗೆದ್ದಿದ್ದಾರೆ. ಅದಕ್ಕೆ ಕಾರಣ ಮಾಜಿ ಕ್ರಿಕೆಟಿಗ, ಹಾಲಿ ಕಾಮೆಂಟೇಟರ್​​ ಸಂಜಯ್​ ಮಾಂಜ್ರೇಕರ್​.
ವಿವಾದ ಏನು..?
‘ಎಬಿ ಡಿವಿಲಿಯರ್ಸ್​​ ಅದ್ಭುತವಾದ ಆಟಗಾರ. ಆದ್ರೆ, IPLನಲ್ಲಿ ಎಬಿ ಡಿವಿಲಿಯರ್ಸ್​ನ ಸರಿಯಾಗಿ ಬಳಸಿಕೊಳ್ಳಲಿಲ್ಲ. ಆತನ ಸಾಮರ್ಥ್ಯ ಅರ್ಥ ಮಾಡಿಕೊಳ್ಳಲಿಲ್ಲ. ಎಬಿಡಿ ತಪ್ಪಾದ ಫ್ರಾಂಚೈಸಿಗೆ ಆಡಿದ್ರು. ಬೇರೆ ಯಾವುದಾದರೂ ಫ್ರಾಂಚೈಸಿಗೆ ಆಡಿದ್ರೆ, ಇನ್ನಷ್ಟು ಶ್ರೇಷ್ಠ ಆಟಗಾರನಾಗಿರುತ್ತಿದ್ರು ಎಂದಿದ್ದಾರೆ ಮಾಂಜ್ರೇಕರ್. ಈ ರೀತಿಯ ವಿವಾದಾತ್ಮಕ ಹೇಳಿಕೆ ಮಾಂಜ್ರೇಕರ್​​ಗೆ ಹೊಸದಲ್ಲ.
ಅಂದು ವಿರಾಟ್ ಕೊಹ್ಲಿ
ವಿಶ್ವದ ಸಾರ್ವಕಾಲಿಕ ಶ್ರೇಷ್ಟ ಬ್ಯಾಟ್ಸ್​ಮನ್​​ಗಳ ಪೈಕಿ ಒಬ್ಬ ಅನಿಸಿಕೊಂಡಿರೋ ಕೊಹ್ಲಿಯನ್ನೇ ಟೆಸ್ಟ್​ ಕ್ರಿಕೆಟ್​ಗೆ ಸೂಟ್​ ಆಗಲ್ಲ ಎಂದಿದ್ದರು. ಟೆಸ್ಟ್​ ಫಾರ್ಮೆಟ್​ನಲ್ಲಿ ಕೊಹ್ಲಿ ಆಡಿದ ಮೊದಲ 6 ಪಂದ್ಯಗಳಲ್ಲೇ ಸಾಮರ್ಥ್ಯವನ್ನು ಅಳತೆ ಮಾಡಿದ್ದ ಮಾಂಜ್ರೇಕರ್​, ಬಹಿರಂಗವಾಗಿ ಟ್ವೀಟ್​ ಮಾಡಿದ್ರು. 2012ರ ಜನವರಿ 6ರಂದು ಟ್ವೀಟ್​ ಮಾಡಿದ್ದ ಮಾಂಜ್ರೇಕರ್​, ವಿರಾಟ್​​ಗೆ ಇನ್ನೊಂದು ಅವಕಾಶ ಕೊಡ್ತೀನಿ. ಆತ ಇಲ್ಲಿಗೆ ಸೇರಿದವನಲ್ಲ ಎಂದು ಅರ್ಥ ಮಾಡಿಕೊಳ್ಳಲು ಎಂದು ಬರೆದುಕೊಂಡಿದ್ರು. ಅಂದು ಮಾಂಜ್ರೇಕರ್​​ ಟೆಸ್ಟ್​ ಕ್ರಿಕೆಟ್​ಗೆ ಸೂಟ್​​ ಆಗಲ್ಲ ಎಂದಿದ್ದ ಕೊಹ್ಲಿ ಈಗ ಕ್ರಿಕೆಟ್​ ಲೋಕಕ್ಕೆ ಕಿಂಗ್​ ಆಗಿದ್ದಾರೆ.
ಇದನ್ನೂ ಓದಿ: ಸ್ಪಿನ್ ಟು ವಿನ್ ಫಾರ್ಮುಲಾ ಚಿಂತೆಯಲ್ಲಿ ಟೀಂ ಇಂಡಿಯಾ.. ರಾಜ್​ಕೋಟ್ ಪಿಚ್ ಕತೆ ಬೇರೆಯೇ ಇದೆ..!
/newsfirstlive-kannada/media/post_attachments/wp-content/uploads/2025/01/SANJAY-MANJREKAR.jpg)
ಜಡೇಜಾನ ಕೆಣಕಿ ಮುಖಭಂಗ
2019ರಲ್ಲಿ ಟೀಮ್​ ಇಂಡಿಯಾ ಆಲ್​ರೌಂಡರ್​ ರವೀಂದ್ರ ಜಡೇಜಾರನ್ನ ಬಿಟ್ಸ್​ ಮತ್ತು ಪೀಸಸ್​ ಪ್ಲೇಯರ್​ ಎಂದು ಮಾಂಜ್ರೇಕರ್​ ಜರಿದಿದ್ರು. ಬೆನ್ನಲ್ಲೇ ಅಭಿಮಾನಿಗಳು ಮಾಂಜ್ರೆಕರ್​ಗೆ ಫುಲ್​ ಕ್ಲಾಸ್​ ತೆಗೆದುಕೊಂಡಿದ್ರು. ಆಗ ಟ್ವೀಟ್​​ ಮಾಡಿದ್ದ ಜಡೇಜಾ, ನಾನು ನೀನು ಆಡಿದ್ದಕ್ಕಿಂತ ದುಪ್ಪಟ್ಟು ಪಂದ್ಯವನ್ನಾಡಿದ್ದೇನೆ. ಈಗಲೂ ಆಡ್ತೀದ್ದೇನೆ. ಸಾಧಿಸಿದವರನ್ನ ಗೌರವಿಸೋದನ್ನ ಕಲಿ ಎಂದು ಕಟುವಾದ ಶಬ್ಧಗಳಲ್ಲಿ ತಿರುಗೇಟು ನೀಡಿದ್ರು. 2019 ವಿಶ್ವಕಪ್​ ಸೆಮೀಸ್​ನಲ್ಲಿ ಅರ್ಧಶತಕ ಸಿಡಿಸಿದ ಬಳಿಕ ಕಾಂಮೇಟರಿ ಬಾಕ್ಸ್​ನಲ್ಲಿ ಮಾಂಜ್ರೇಕರ್​ ಕಡೆಗೆ ಬ್ಯಾಟ್​ ತೋರಿಸಿ ಸೆಲಬ್ರೇಷನ್​ ಮಾಡಿದರು.
ಪೊಲಾರ್ಡ್​ಗೆ ಮೆದುಳೇ ಇಲ್ಲ ಎಂದಿದ್ದರು
ಜಡೇಜಾಗೆ ಮಾತ್ರವಲ್ಲ.. ವೆಸ್ಟ್​ ಇಂಡೀಸ್​ ಆಲ್​​ರೌಂಡರ್​ ಕೀರನ್​ ಪೊಲಾರ್ಡ್​​ಗೆ ಮೆದುಳೇ ಇಲ್ಲದ ಪ್ಲೇಯರ್​​ ಎಂದು ಸಂಜಯ್​ ಮಾಂಜ್ರೇಕರ್​ ಹೇಳಿದ್ರು. ಇದಕ್ಕೆ ಟ್ವಿಟ್ಟರ್​ನಲ್ಲಿ ಕಿರನ್​ ಪೊಲಾರ್ಡ್​ ತಿರುಗೇಟು ನೀಡಿದ್ದರು.
ಇದನ್ನೂ ಓದಿ: ತಿರುಗಿಬಿದ್ದ ರೋಹಿತ್ ಶರ್ಮಾ.. ವೈಫಲ್ಯಕ್ಕೆ ಕಾರಣವಾಯ್ತು ಈ ಅಸಲಿ ವಿಚಾರ..!
/newsfirstlive-kannada/media/post_attachments/wp-content/uploads/2024/11/RCB_KOHLI-1.jpg)
‘ಬಾಬಾ’ಗೆ ಶಮಿ ಯಾರ್ಕರ್​.!
ಈ ಬಾರಿಯ ಐಪಿಎಲ್​ ಹರಾಜಿಗೂ ಮುನ್ನ ಗಾಯಗೊಂಡಿರೋ ಶಮಿ ಅತಿ ಕಡಿಮೆ ಬೆಲೆಗೆ ಸೇಲ್​ ಆಗ್ತಾರೆ ಎಂದು ಮಾಂಜ್ರೇಕರ್​ ಭವಿಷ್ಯ ನುಡಿದಿದ್ರು. ಇದ್ರಿಂದ ಬೇಸರಗೊಂಡಿದ್ದ ಶಮಿ ಬಾಬಾಗೆ ಜಯವಾಗಲಿ. ನಿಮ್ಮ ಭವಿಷ್ಯದ ಬಗ್ಗೆಯೂ ಯೋಚಿಸಲು ಸ್ವಲ್ಪ ಜ್ಞಾನ ಉಳಿಸಿಕೊಳ್ಳಿ. ಯಾರಾದ್ರೂ ಭವಿಷ್ಯ ಕೇಳೋದಿದ್ರೆ, ಸರ್​ನ ಕೇಳಿ ಎಂದು ಖಾರವಾಗಿ ಸ್ಟೋರಿ ಬರೆದುಕೊಂಡಿದ್ದರು.
ಹಲವು ಬಾರಿ ಮಾಂಜ್ರೇಕರ್​ ಬಾಯಿ ಹರಿಬಿಟ್ಟ ಉದಾಹರಣೆಗಳಿವೆ. ಕಾಮೆಂಟರಿ ಬಾಕ್ಸ್​ನಲ್ಲಿದ್ದು ಆಟಗಾರರನ್ನ ಹೊಗಳಿದ್ದಕ್ಕಿಂತ, ಮಾಂಜ್ರೇಕರ್​ ಆಟಗಾರರ ಟೀಕಿಸೋದೇ ಹೆಚ್ಚು. ಆ ಟೀಕಿಸೋ ಭರದಲ್ಲಿ ವಿವಾದಕ್ಕೆ ಪದೇ ಪದೇ ಗುರಿಯಾಗಿದ್ದಾರೆ. ತಪ್ಪನ್ನ ಸರಿಪಡಿಸಿಕೊಂಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us