newsfirstkannada.com

‘ಅಕ್ಕಾ.. ಸ್ವಲ್ಪ ಎಣ್ಣೆ ಹೊಡೆದು ಮಲಗಿಕೊಳ್ಳಿ’ ಎಂದ ಪಾಟೀಲ್; ಹೆಬ್ಬಾಳ್ಕರ್ ಬೆಂಬಲಿಗರಿಂದ ಆಪ್ತನಿಗೆ ಕಪಾಳಮೋಕ್ಷ..!

Share :

Published April 14, 2024 at 8:12am

Update April 14, 2024 at 8:17am

  ಸಂಜಯ್ ಪಾಟೀಲ್​ನ ಕೀಳುಮಟ್ಟದ ಹೇಳಿಕೆಗೆ ಭಾರೀ ಆಕ್ರೋಶ

  ರಾತ್ರಿ ಪಾಟೀಲ್ ಮನೆಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ನಿಂದ​ ಹೈಡ್ರಾಮಾ

  ‘ಮಹಿಳೆಯರು ಬಂದಿರೋದನ್ನ ನೋಡಿ ಹೆಬ್ಬಾಳ್ಕರ್​ಗೆ ನಿದ್ದೆ ಬರಲ್ಲ’

ಬೆಳಗಾವಿಯಲ್ಲಿ ರಾಜಕಾರಣ ರಣ.. ರಣ ರಾಜಕಾರಣವಾಗಿ ಬದಲಾಗೋಗಿದೆ. ಇಲ್ಲಿ ವಿರೋಧಿಗಳನ್ನು ಹಣಿಯಲು ಎಲ್ಲ ತಂತ್ರ ಹೆಣೆಯಲಾಗ್ತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ಮತ್ತೆ ಕೀಳುಮಟ್ಟದ ಹೇಳಿಕೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು ಕಾಂಗ್ರೆಸ್ ನಾಯಕರು ರಾತ್ರೋ ರಾತ್ರಿ ಸಂಜಯ್ ಪಾಟೀಲ್ ಮನೆಗೆ ಮುತ್ತಿಗೆ ಹಾಕಿ ಹೈಡ್ರಾಮಾ ಸೃಷ್ಟಿಸಿದ್ದಾರೆ.

ಲೋಕಸಮರದಲ್ಲಿ ರಾಜಕಾರಣಿಗಳು ಮಾತಿನ ಭರದಲ್ಲಿ ನಾಲಿಗೆಯನ್ನು ಹರಿಬಿಡೋದು ಕಾಮನ್ ಆಗಿಬಿಟ್ಟಿದೆ. ಒಬ್ಬರ ಮೇಲೊಬ್ಬರು ಕೆಲಸ ಬಗ್ಗೆ ಮಾತಾಡಿದ್ರೆ ಸರಿ ಆದ್ರೆ ವೈಯಕ್ತಿಕವಾಗಿ ತೇಜೋವಧೆ ಮಾಡೋ ಕೀಳು ಮಟ್ಟಕ್ಕೆ ಇಳಿಯುತ್ತಿದ್ದಾರೆ. ಈಗ ಬಿಜೆಪಿ ನಾಯಕ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಡಿದ ಮಾತೊಂದು ಭಾರೀ ವಿವಾದ ಸೃಷ್ಟಿಸಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಎಕ್ಸ್​ಟ್ರಾ ಪೆಗ್ ಹೊಡೆಬೇಕಾಗುತ್ತದೆ

ಬೆಳಗಾವಿ ಗ್ರಾಮೀಣ‌ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾಜಿ ಶಾಸಕ ಸಂಜಯ್ ಪಾಟೀಲ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಂದಿರೋದನ್ನ ನೋಡಿದ ಬಳಿಕ ಹೆಬ್ಬಾಳ್ಕರ್​ಗೆ ನಿದ್ದೆ ಬರಲ್ಲ. ನಿದ್ದೆ ಮಾತ್ರೆ ತೆಗೆದುಕೊಂಡು ಮಲಗಬೇಕಾಗುತ್ತೆ.. ಇಲ್ಲಾಂದ್ರೆ ರಾತ್ರಿ ಒಂದು ಎಕ್ಸ್​​ಟ್ರಾ ಪೆಗ್ ಹೊಡಿಬೇಕಾಗುತ್ತೆ ಅನ್ನೋ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.

ಇವತ್ತು ನಮ್ಮ ಅಕ್ಕ ರಾತ್ರಿ ಮಲಗೋಕೆ ಆಗಲ್ಲ ಅಂತ ನಮ್ಮ ಕಾರ್ಯಕರ್ತರು ಹೇಳುತ್ತಿದ್ದಾರೆ. ಅದಕ್ಕಾಗಿ ಅಕ್ಕ ಇವತ್ತು ನಿಮಗೆ ಮಲಗೋಕೆ ಸಾಧ್ಯನೇ ಇಲ್ಲ. ಹಾಗಾಗಿ ಸ್ವಲ್ಪ ಎಣ್ಣೆ ಹೊಡೆದು ಅರಾಮಾಗಿ ಮಲಗಿಕೊಳ್ಳಿ.

ಸಂಜಯ ಪಾಟೀಲ್, ಮಾಜಿ ಶಾಸಕ

ಸಂಜಯ್ ಪಾಟೀಲ‌ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗರಂ

ಸಂಜಯ್ ಪಾಟೀಲ್ ಹೇಳಿಕೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ. ಪ್ರಚಾರಕ್ಕಾಗಿ ನನ್ನ ಬಗ್ಗೆ ನೀಚತನದ ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿಯವರಿಗೆ ಮಹಿಳೆಯರು ಮತ್ತು‌‌ ಮಹಿಳಾ ಕುಲದ ಬಗ್ಗೆ ಇರುವ ಗೌರವ ಎಷ್ಟು ಎನ್ನುವುದು ತೋರಿಸುತ್ತೆ ಅಂತ ಕಿಡಿ ಕಾರಿದ್ರು.

ಈ ಬಿಜೆಪಿಯವರಿಗೆ ಮಹಿಳೆಯರ ಕುಲ ಮತ್ತು ಮಹಿಳೆಯರ ಮೇಲೆ ಗೌರವ ಎಷ್ಟು ಅನ್ನೋದು ಇದು ತೋರಿಸುತ್ತೆ. ಬಿಜೆಪಿಯವರ ಅಜೆಂಡಾ ಕೂಡ ಇದೆ ಆಗಿದೆ. ಹಿಂದುಗಳ ಬಗ್ಗೆ, ಹಿಂದು ಸಂಸ್ಕೃತಿ ಬಗ್ಗೆ ದೊಡ್ಡದಾಗಿ ಭಾಷಣ ಮಾಡುವ ಸಂಜಯ್ ಪಾಟೀಲ್​ ಹೇಳಿಕೆ, ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ಮಹಿಳೆಯರನ್ನ ಪ್ರತಿನಿಧಿಸೋ ಮಂತ್ರಿ ಅಷ್ಟೇ ಅಲ್ಲ, ಇಡೀ ರಾಜ್ಯದ, ದೇಶದ ಮಹಿಳೆಯರನ್ನ ಅವಮಾನ ಮಾಡಿದ್ದಾರೆ. ಈ ನೀಚ ಹೇಳಿಕೆಯನ್ನು ಖಂಡಿಸುತ್ತೇನೆ.

ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ಇದನ್ನೂ ಓದಿ: BJP Manifesto: ಮೋದಿಯಿಂದ ಇಂದು ಪ್ರಣಾಳಿಕೆ ಬಿಡುಗಡೆ; ಸರ್ಪ್ರೈಸ್ ಘೋಷಣೆಗಳ ನಿರೀಕ್ಷೆಯಲ್ಲಿ ಜನ..!

ಸಂಜಯ ಪಾಟೀಲ್ ಆಪ್ತನಿಗೆ ಕಪಾಳಮೋಕ್ಷ

ಇನ್ನು ಸಂಜಯ್ ಪಾಟೀಲ್ ಹೇಳಿಕೆಗೆ ಕಾಂಗ್ರೆಸ್​ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ರಾತ್ರಿ ಹೆಬ್ಬಾಳ್ಕರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಆದರ್ಶ ನಗರದಲ್ಲಿನ ಸಂಜಯ್ ಪಾಟೀಲ ಮನೆಗೆ ಮುತ್ತಿಗೆ ಹಾಕಿ ಕ್ಷಮೆಗೆ ಪಟ್ಟು ಹಿಡಿದಿದ್ರು. ಸಂಜಯ ಪಾಟೀಲ್ ಮೇಲೆ ಕ್ರಮ ತೆಗೆದುಕ್ಕೊಳ್ಳುವಂತೆ ಆಗ್ರಹಿಸಿದ್ದಲ್ಲದೆ ಭಾವಚಿತ್ರಕ್ಕೆ ಬಳೆ ಸೀರೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯೊಬ್ಬರು ಸಂಜಯ್ ಪಾಟೀಲ್ ಆಪ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಪ್ರಚಾರದ ಭರಾಟೆಯಲ್ಲಿ ಮಾತಿನ ಭರದಲ್ಲಿ ನಾಯಕರು ನಾಲಿಗೆ ಹರಿಬಿಡುತ್ತಿದ್ದಾರೆ. ಇದು ವಿವಾದವಾದ ಬಳಿಕ ನಾನು ಹಾಗೆ ಹೇಳಿದ್ದಲ್ಲ ಹೀಗೆ ಅಂತ ಸಮಜಾಯಿಷಿ ಕೊಡ್ತಾರೆ. ಸದ್ಯ ಸಂಜಯ್ ಪಾಟೀಲ್ ಮನೆಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಮನವೊಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಕ್ಕಾ.. ಸ್ವಲ್ಪ ಎಣ್ಣೆ ಹೊಡೆದು ಮಲಗಿಕೊಳ್ಳಿ’ ಎಂದ ಪಾಟೀಲ್; ಹೆಬ್ಬಾಳ್ಕರ್ ಬೆಂಬಲಿಗರಿಂದ ಆಪ್ತನಿಗೆ ಕಪಾಳಮೋಕ್ಷ..!

https://newsfirstlive.com/wp-content/uploads/2024/04/LAXMI_HEBBALKAR_SANJAI_PATIL.jpg

Load More