/newsfirstlive-kannada/media/post_attachments/wp-content/uploads/2025/05/Sanjiv_Goenka.jpg)
ವಿಶ್ವವಿಖ್ಯಾತ ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಗೆ 3.36 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರ ಖಚಿತ ಆಭರಣಗಳನ್ನು ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್‌ನ ಅಧ್ಯಕ್ಷ ಹಾಗೂ ಲಕ್ನೋ ಸೂಪರ್ ಜೈಂಟ್ಸ್‌ನ ಮಾಲೀಕ ಸಂಜೀವ್ ಗೋಯೆಂಕಾ ಅವರು ದಾನ ಮಾಡಿದ್ದಾರೆ.
ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ಕ್ಕೆ 3 ಕೋಟಿ 36 ಲಕ್ಷ ರೂಪಾಯಿ ಮೌಲ್ಯದ ಬಂಗಾರ, ವಜ್ರ ಖಚಿತ ಆಭರಣಗಳುಗಳನ್ನು ಲಕ್ನೋ ಸೂಪರ್ ಜೈಂಟ್ಸ್‌ನ ಮಾಲೀಕ ಸಂಜೀವ್ ಗೋಯೆಂಕಾ ಅವರು ದಾನ ಮಾಡಿದರು. ಇವರು ಆಧ್ಯಾತ್ಮಿಕತೆ ಹಾಗೂ ಸಂಪ್ರದಾಯಗಳ ಮೇಲೆ ಅಪಾರ ನಂಬಿಕೆ ಹೊಂದಿರುವ ಹಿನ್ನೆಲೆಯಲ್ಲಿ ಈ ಕಾರ್ಯ ಮಾಡಿದ್ದಾರೆ.
ಇದನ್ನೂ ಓದಿ:ಐಪಿಎಲ್ ಫ್ಯಾನ್ಸ್ಗೆ ಶಾಕ್.. ಕೋಲ್ಕತ್ತಾ ಜೊತೆಗಿನ RCB ಮ್ಯಾಚ್ ನಡೆಯೋದು ಅನುಮಾನ
ಐಪಿಎಲ್ನ ಎಲ್ಎಸ್ಜಿ ತಂಡದ ಓನರ್ ಸಂಜೀವ್ ಗೋಯೆಂಕಾ ದಾನ ಮಾಡಿರುವ ಚಿನ್ನಾಭರಣ ಒಟ್ಟು 5.267 ಕೆ.ಜಿ ಇದೆ. ಈ ಚಿನ್ನಾಭರಣಗಳಲ್ಲಿ ವಜ್ರಗಳದ ಹರಳುಗಳು ಕೂಡ ಸೇರಿವೆ. ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ವಿಶ್ವದ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಗೆ ಅಮೂಲ್ಯ ಕಾಣಿಕೆಗಳನ್ನು ಸಂಜೀವ್ ಗೋಯೆಂಕಾ ಅವರು ಅರ್ಪಿಸಿದರು.
ಸಂಜೀವ್ ಗೋಯೆಂಕಾ ಅವರು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ಗೋವಿಂದನಿಗೆ ವಿಶೇಷ ಪೂಜೆ ಮಾಡಿ, ದರ್ಶನ ಪಡೆದುಕೊಂಡರು. ಇನ್ನು ಸಂಜೀವ್ ಗೋಯೆಂಕಾ ಬಂಗಾರದ ಆಭರಣಗಳನ್ನು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚ. ವೆಂಕಯ್ಯ ಚೌಧರಿ ಅವರಿಗೆ ನೀಡಿದರು. ದೇವಾಲಯದ ರಂಗನಾಯಕಕುಲ ಮಂಟಪದಲ್ಲಿ ಈ ಸಮಾರಂಭ ನಡೆಯಿತು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ