/newsfirstlive-kannada/media/post_attachments/wp-content/uploads/2025/03/PANT-1.jpg)
ಕಳೆದ ಐಪಿಎಲ್ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ, ಕ್ಯಾಪ್ಟನ್ ಕೆ.ಎಲ್.ರಾಹುಲ್ರನ್ನು ಸಾರ್ವಜನಿಕವಾಗಿ ನಿಂದಿಸಿರೋ ವಿಚಾರ ಗೊತ್ತೇ ಇದೆ. ಅದೇ ಪರಿಸ್ಥಿತಿ ಪಂತ್ಗೆ ಎದುರಾಗಿದೆ ಎಂದು ಫ್ಯಾನ್ಸ್ ಮಾತಾಡಿಕೊಳ್ತಿದ್ದಾರೆ. ಅದಕ್ಕೆ ಕಾರಣ, ವೈರಲ್ ಆಗಿರುವ ವಿಡಿಯೋ.
ಆಗಿದ್ದೇನು..?
ಐಪಿಎಲ್ನಲ್ಲಿ ನಿನ್ನೆಯ ದಿನ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಎಲ್ಎಸ್ಜಿ ತಂಡಗಳು ಮುಖಾಮುಖಿ ಆಗಿದ್ದವು. ಜಿದ್ದಾಜಿದ್ದಿನ ಪಂದ್ಯದಲ್ಲಿ ಎಲ್ಎಸ್ಜಿ ತಂಡ, ಗೆಲುವಿನ ಸನಿಹದಲ್ಲಿತ್ತು. ಆದರೆ ಕೊನೆ ಕ್ಷಣದಲ್ಲಿ ಅಶುತೋಷ್ ಶರ್ಮಾ ಪಂದ್ಯದ ಗತಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಕಡೆಗೆ ತಿರುಗಿಸಿದರು. ಅಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ಒಂದು ವಿಕೆಟ್ನಿಂದ ಗೆಲುವು ದಾಖಲಿಸಿತು. ಸೋತ ಬೆನ್ನಲ್ಲೇ ಎಲ್ಎಸ್ಜಿ ನಾಯಕ ರಿಷಬ್ ಪಂತ್ಗೆ ತಮ್ಮ ಮಾಲೀಕ ಸಂಜೀವ್ ಗೊಯೆಂಕಾ ಎದುರಾದರು.
ಇದನ್ನೂ ಓದಿ: ತಂಡವನ್ನು ಗೆಲ್ಲಿಸಿಕೊಟ್ಟು ಧೋನಿ ಅಭಿಮಾನಿಗಳಿಂದ ಅವಮಾನಕ್ಕೆ ಒಳಗಾದ ರಚಿನ್ ರವೀಂದ್ರ..!
Pant and Goenka in funny conversation pic.twitter.com/WlelwFjcCE
— Jay Indian (@Jayindian12) March 25, 2025
ವಿಡಿಯೋ ವೈರಲ್..!
ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಪಂದ್ಯದ ಬಗ್ಗೆ ಪಂತ್ ಹಾಗೂ ಗೊಯೆಂಕಾ ಮಾತನಾಡ್ತಿರೋದು ಕಂಡು ಬಂದಿದೆ. ಇದನ್ನು ನೋಡಿದ ಕೆಲವು ಕ್ರಿಕೆಟ್ ಅಭಿಮಾನಿಗಳು, ಪಂತ್ಗೆ ಕ್ಲಾಸ್ ತೆಗೆದುಕೊಳ್ತಿದ್ದಾರೆ ಎಂದು ಮಾತನಾಡಿಕೊಳ್ತಿದ್ದಾರೆ.
ನಿಜಕ್ಕೂ ಕ್ಲಾಸ್ ತೆಗೆದುಕೊಂಡ್ರಾ?
ಅಭಿಮಾನಿಗಳು ಮಾತಾಡಿಕೊಳ್ಳುವಂತಹ ರೀತಿಯಲ್ಲಿ ಏನೂ ನಡೆದಂತೆ ಕಾಣುತ್ತಿಲ್ಲ. ಇಬ್ಬರು ನಗು ನಗುತ್ತ ಮಾತನಾಡುತ್ತಿರೋದು ವಿಡಿಯೋದಲ್ಲಿ ಕಂಡುಬಂದಿದೆ. ಪಂದ್ಯದಲ್ಲಿ ಸೋಲು, ಗೆಲುವಿನ ಬಗ್ಗೆ ಚರ್ಚೆ ಮಾಡಿದಂತೆ ತೋರುತ್ತಿದೆ. ಇನ್ನು, ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಗೊಯೆಂಕಾ ಸ್ಪೀಚ್ ಮಾಡಿದ್ದಾರೆ.
ಇದನ್ನೂ ಓದಿ: ‘ಕೊಹ್ಲಿ ಮತ್ತು ನಾನು..’ ವಿರಾಟ್ ಜೊತೆಗಿನ ಸ್ನೇಹದ ಬಗ್ಗೆ ತಲಾ ಒಳ್ಳೊಳ್ಳೆ ಮಾತು..!
Intensity on the ground, camaraderie off it. Looking ahead to the next one. #LSG#LSGvsDCpic.twitter.com/dGjlTlVBk7
— Dr. Sanjiv Goenka (@DrSanjivGoenka) March 25, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ