ಮ್ಯಾಚ್​ ಸೋಲು, ರಿಷಭ್ ಪಂತ್ ಹಿಂದೆ ಬಿದ್ದ ಓನರ್ ಸಂಜೀವ್ ಗೋಯೆಂಕಾ.. ಮೈದಾನದಲ್ಲೇ ಫುಲ್ ಕ್ಲಾಸ್?

author-image
Bheemappa
Updated On
ರಿಷಭ್ ಪಂತ್ ಬ್ಯಾಟಿಂಗ್​ನಲ್ಲಿ ನೋ ಚೇಂಜ್.. ಕೆಲವೇ ರನ್​ಗೆ ಕ್ಯಾಪ್ಟನ್ ಔಟ್​​
Advertisment
  • ರಿಷಭ್ ಪಂತ್ ಮುಂದೆ ಕೈ ತೋರಿಸುತ್ತ ಮಾತನಾಡಿದ ಗೋಯೆಂಕಾ?
  • ಲಕ್ನೋ ಫ್ರಾಂಚೈಸಿಯಲ್ಲಿ ಏನಾಗ್ತಿದೆ, ಪಂತ್ ಬ್ಯಾಟಿಂಗ್ ಖದರ್ ಇಲ್ಲ
  • ಶ್ರೇಯಸ್ ಅಯ್ಯರ್ ಜೊತೆ ನಗು ನಗುತ್ತ ಮಾತನಾಡಿದ ಗೋಯೆಂಕಾ

2025ರ ಐಪಿಎಲ್​ ಪಂದ್ಯದಲ್ಲಿ ತವರಿನ ಅಂಗಳದಲ್ಲಿ ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಹೀನಾಯವಾಗಿ ಸೋತು ಹೋಗಿದೆ. ಇದರ ಜೊತೆಗೆ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಬ್ಯಾಟಿಂಗ್ ಪರ್ಫಾಮೆನ್ಸ್ ಕೂಡ ಉತ್ತಮವಾಗಿ ಇರಲಿಲ್ಲ. ಪಂಜಾಬ್ ವಿರುದ್ಧ ಸೋಲುತ್ತಿದ್ದಂತೆ ಲಕ್ನೋ ಸೂಪರ್ ಜೆಂಟ್ಸ್​ ಓನರ್ ಸಂಜೀವ್ ಗೋಯೆಂಕಾ ರಿಷಬ್​ ಪಂತ್​ಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಲಕ್ನೋದ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಲಕ್ನೋ ತಂಡವನ್ನು 8 ವಿಕೆಟ್​ಳಿಂದ ಪಂಜಾಬ್ ಮಣಿಸಿತು. ಪಂದ್ಯ ಮುಗಿಯುತ್ತಿದ್ದಂತೆ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಮೊದಲು ಪಂಜಾಬ್ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ಜೊತೆ ಚೆನ್ನಾಗಿ ನಗು ನಗುತ್ತ ಮಾತನಾಡಿದರು. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿ ತಮ್ಮ ತಂಡದ ಗೆಲುವಿಗೆ ಕಾರಣರಾಗಿದ್ದರು.

ಶ್ರೇಯಸ್ ಅಯ್ಯರ್ ನಂತರ ರಿಷಭ್ ಪಂತ್ ಅವರನ್ನು ಸಂಜೀವ್ ಗೋಯೆಂಕಾ ಮಾತನಾಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಂತ್ ಕಡೆ ಬೆರಳು ತೋರಿಸುತ್ತ ಕೋಪದಲ್ಲಿ ಏನೋ ಹೇಳಿದ್ದಾರೆ ಎನ್ನಲಾಗಿದೆ. ಪಂತ್ ಜೊತೆ ಸಂಜೀವ್ ಗೋಯೆಂಕಾ ಮೈದಾನದಲ್ಲೇ ತೀವ್ರವಾಗಿ ಮಾತುಕತೆ ನಡೆಸಿದ ಫೋಟೋ ವಿಡಿಯೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಲ್ಲದೇ ಈ ಬಗ್ಗೆ ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: ಶ್ರೇಯಸ್​ ಅಯ್ಯರ್ ಮುಂದೆ ರಿಷಭ್ ಪಂತ್​ಗೆ ಮುಖಭಂಗ.. ಪ್ರಭಸಿಮ್ರನ್ ಅರ್ಧಶತಕ, ಲಕ್ನೋಗೆ ಗರ್ವಭಂಗ

publive-image

ಇನ್ನು ಈ ಟೂರ್ನಿಯಲ್ಲಿ 3 ಪಂದ್ಯಗಳನ್ನು ಆಡಿರುವ ಲಕ್ನೋ ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲುಂಡಿದೆ. ಆದರೆ ಮೂರು ಮ್ಯಾಚ್​ಗಳಲ್ಲಿ ಬ್ಯಾಟಿಂಗ್ ಮಾಡುವಲ್ಲಿ ರಿಷಭ್ ಪಂತ್ ವಿಫಲರಾಗಿದ್ದಾರೆ. ಮೊದಲ ಪಂದ್ಯದಲ್ಲಿ ಡಕೌಟ್ ಆಗಿದ್ರೆ, 2ನೇ ಪಂದ್ಯದಲ್ಲಿ ಕೇವಲ 15 ರನ್​ಗೆ ಔಟ್ ಆಗಿದ್ದರು. ಇದಾದ ಮೇಲೆ 3ನೇ ಪಂದ್ಯದಲ್ಲಿ ಕೇವಲ 2 ರನ್​ ಗಳಿಸಿ ಆಡುವಾಗ ಕ್ಯಾಚ್ ಕೊಟ್ಟು ಹೊರ ನಡೆದಿದ್ದರು.

ಈ ವರ್ಷದ ಐಪಿಎಲ್​ ಆಕ್ಷನ್​ನಲ್ಲಿ ರಿಷಭ್ ಪಂತ್ ಅವರಿಗೆ 27 ಕೋಟಿ ರೂಪಾಯಿ ಕೊಟ್ಟು ಲಕ್ನೋ ಖರೀದಿ ಮಾಡಿತ್ತು. ಅದರಂತೆ ಶ್ರೇಯಸ್ ಅಯ್ಯರ್​ಗೆ 26.75 ಕೋಟಿ ರೂಪಾಯಿ ನೀಡಿ ಪಂಜಾಬ್ ಕಿಂಗ್ಸ್​ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಕಳೆದ ವರ್ಷ ಕನ್ನಡಿಗ ಕೆ.ಎಲ್ ರಾಹುಲ್​​ಗೆ ಆದಂತೆ ರಿಷಭ್ ಪಂತ್​ಗೆ ಆಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲ ವಿಡಿಯೋಗಳನ್ನ ಟ್ರೋಲ್ ಮಾಡಲಾಗ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment