Advertisment

ಕಿವಿನಲ್ಲೇ ರಕ್ತ ಬರ್ತಿದೆ -ದರ್ಶನ್ ಅರೆಸ್ಟ್ ಆಗಿದ್ದಕ್ಕೆ ಸಂಜನಾ ಗಲ್ರಾನಿ ಹೇಳಿದ್ದೇನು..?

author-image
Ganesh
Updated On
ಕಿವಿನಲ್ಲೇ ರಕ್ತ ಬರ್ತಿದೆ -ದರ್ಶನ್ ಅರೆಸ್ಟ್ ಆಗಿದ್ದಕ್ಕೆ ಸಂಜನಾ ಗಲ್ರಾನಿ ಹೇಳಿದ್ದೇನು..?
Advertisment
  • ನಟ ದರ್ಶನ್ ಬಂಧನಕ್ಕೆ ಮರುಗಿದ ಸಂಜನಾ ಗಲ್ರಾನಿ
  • ವಿಡಿಯೋ ಬಿಡುಗಡೆ ಮಾಡಿ ಬೇಡಿಕೊಂಡ ಸಂಜನಾ
  • ಕೊಲೆ ಆರೋಪ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಅರೆಸ್ಟ್

ಕಲಾವಿದರಿಗೆ ಪರಿಚಯ ಇಲ್ಲದಿದ್ದರೂ ಆರೋಪಿಯಾಗುತ್ತಾರೆ ಎಂದು ನಟಿ ಸಂಜನಾ ಗಲ್ರಾನಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಪೊಲೀಸ್ ಆಯುಕ್ತರು ಕೊಲೆ ಆರೋಪ ಅಂತ ಹೇಳಿದ್ದಾರೆ. ಇದು ನಿಜ ಆಗಬಾರದು ಅಂತ ದೇವರ ಬಳಿ ಬೇಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

Advertisment

ನನಗೆ ಆದ ರೀತಿ ನನ್ನ ಮೆಚ್ಚಿನ ನಟರಿಗೆ ಆಗಬಾರದು ಅಂತ ಬೇಡಿಕೊಳ್ಳುತ್ತೇನೆ. ರೇಣುಕಾಸ್ವಾಮಿ ಕುಟುಂಬಕ್ಕೆ ಮತ್ತಷ್ಟು ಶಕ್ತಿ ಕೊಡಬೇಕು ಅಂತ ಬೇಡಿಕೊಳ್ಳುತ್ತೇನೆ. ಕನ್ನಡದ ಹೀರೋ ಸೇಫ್ ಆಗಿ ಮನೆ ಸೇರಬೇಕು. ಏನು ನಡೆದಿದೆ ಎಂದು ಹೇಳೋಕೆ ನಾವು ತೀರ್ಪು ಕೊಡೋಕೆ ಆಗಲ್ಲ.

ಇದನ್ನೂ ಓದಿ:ಹಲ್ಲೆ ಮಾಡಿ ಸ್ವಾಮಿಗೆ ಹಣ ಕೊಟ್ಟು ಹೋಗಿದ್ರಂತೆ ದರ್ಶನ್.. ಆಮೇಲೆ ನಡೆದಿದ್ದೇ ಬೇರೆ.. ಕೇಸ್​ಗೆ ಬಿಗ್​​ ಟ್ವಿಸ್ಟ್​..!

publive-image

ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಮತ್ತೊಂದು ವಿಡಿಯೋದಲ್ಲಿ.. ಯಾರೋ ಒಬ್ಬರಿಗೆ ಕಪಾಳಕ್ಕೆ ಹೊಡೆಯೋ ಅಧಿಕಾರ ಯಾರಿಗೂ ಇಲ್ಲ. ನಮ್ಮ ನೆಲದಲ್ಲಿ ತನ್ನದೇಯಾದ ಕಾನೂನು ಇದೆ. ಆ ಕಾನೂನಿಂದಾಗಿಯೇ ನಾವು ಮನೆಯಲ್ಲಿ ಆರಾಮಾಗಿ ಇದ್ದೇವೆ. ಭಗವಂತ ನಮ್ಮ ದರ್ಶನ್ ಸರ್ ಅವರನ್ನು ಇದರಿಂದ ಆಚೆಗೆ ಕರೆದುಕೊಂಡು ಬನ್ನಿ. ಈ ಸುದ್ದಿಗಳನ್ನು ಕೇಳೋಕೆ ಕಿವಿಯಿಂದ ರಕ್ತ ಬರುತ್ತಿದೆ.
ದರ್ಶನ್ ಸರ್​ ಮೇಲಿನ ಆರೋಪ ನನಗೆ ನಂಬಲು ಆಗುತ್ತಿಲ್ಲ. ನಾನು ಅಷ್ಟು ಗೌರವ ಕೊಡ್ತೀನಿ. ತೀರ್ಪು ಬರೋದಕ್ಕೆ ಮೊದಲೇ ನಾವು ಎಲ್ಲವನ್ನೂ ಹೇಳೋಕೆ ಆಗಲ್ಲ. ಆದಷ್ಟು ಬೇಗ ದರ್ಶನ್ ಸರ್ ಆಚೆ ಬರಬೇಕು. ಇಲ್ಲಿದ್ದರೆ ಅವರ ಜೊತೆಯಲ್ಲಿ ಕೆಲಸ ಮಾಡುವ ಅದೆಷ್ಟೋ ಮಂದಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದು ಸಿನಿಮಾ ಇಂಡಸ್ಟ್ರಿಗೆ ಆರ್ಥಿಕವಾಗಿ ದೊಡ್ಡ ಪೆಟ್ಟು ಬೀಳಲಿದೆ ಎಂದಿದ್ದಾರೆ.

Advertisment

ಇದನ್ನೂ ಓದಿ:ರೇಣುಕಾಸ್ವಾಮಿಗೆ ಪವಿತ್ರಗೌಡ ಚಪ್ಪಲಿ ಏಟು..? ಶೆಡ್​ಗೆ ಕರ್ಕೊಂಡು ಬಂದ ಮೇಲೆ ದರ್ಶನ್ ಮಾಡಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment