/newsfirstlive-kannada/media/post_attachments/wp-content/uploads/2025/04/Sanjjanaa-Galrani.jpg)
ಬಹುಭಾಷಾ ನಟಿ ಸಂಜನಾ ಗಲ್ರಾನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಸಂಜನಾ ಗಲ್ರಾನಿ ಮತ್ತೊಮ್ಮೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಈಗಾಗಲೇ ನಟಿ ಸಂಜನಾ ಗಲ್ರಾನಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಎರಡನೇ ಬಾರಿಗೆ ತಾಯಿ ಆಗುತ್ತಿದ್ದಾರೆ. ಯುಗಾದಿ ಹಬ್ಬದ ದಿನವೇ ಸೀಮಂತ ಕೂಡ ಮಾಡಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಅವರು ಅಜೀಜ್ ಪಾಷಾ ಎಂಬುವವರನ್ನು ಮದುವೆ ಆಗಿದ್ದರು. ಸಿನಿಮಾಗಳಿಂದ ದೂರವಾಗಿದ್ದ ಅವರಿಗೆ ಈಗಾಗಲೇ ಮುದ್ದಾದ ಮಗನಿದ್ದಾನೆ. ಆ ಮಗುವಿಗೆ ಅಲಾರಿಕ್ ಅಂತ ಹೆಸರಿಟ್ಟಿದ್ದಾರೆ.
ನಟಿ ಸಂಜನಾ ಗಲ್ರಾನಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇದೀಗ ದಢೀರ್ ಅಂತ ಎರಡನೇ ಬಾರಿಗೆ ತಾಯಿ ಆಗುತ್ತಿರೋ ವಿಚಾರ ತಿಳಿಸಿದ್ದಾರೆ.
View this post on Instagram
ಸದ್ಯ ನಟಿ ಸಂಜನಾ ಗಲ್ರಾನಿ ತುಂಬು ಗರ್ಭಿಣಿ ಆಗಿದ್ದು, ಸೋಶಿಯಲ್ ಮೀಡಿಯಾ ಸೀಮಂತದ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಮತ್ತೆ ಗರ್ಭಿಣಿಯಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.
ಈ ಯುಗಾದಿ ನನಗೆ ತುಂಬಾ ವಿಶೇಷವಾಗಿದೆ. ಕಾರಣ, ನಮ್ಮ ಕುಟುಂಬಕ್ಕೆ ಹೊಸ ಸದಸ್ಯರು ಶೀಘ್ರದಲ್ಲೇ ಬಂದು ನಮ್ಮೊಂದಿಗೆ ಸೇರಲಿದ್ದಾರೆ. ಅದಕ್ಕಾಗಿ ನಾವು ಕಾಯುತ್ತಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆ ಮತ್ತು ಆಶೀರ್ವಾದ ನಮ್ಮ ಮೇಲಿರಲಿ ಅಂತ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ