ಸಂಜು ಸ್ಯಾಮ್ಸನ್​​, ಮಯಾಂಕ್​​ಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ; ಟೀಮ್​ ಇಂಡಿಯಾದಿಂದಲೇ ಔಟ್​

author-image
Ganesh Nachikethu
Updated On
ಸಂಜು ಸ್ಯಾಮ್ಸನ್​​, ಮಯಾಂಕ್​​ಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ; ಟೀಮ್​ ಇಂಡಿಯಾದಿಂದಲೇ ಔಟ್​
Advertisment
  • 2025ರ ಚಾಂಪಿಯನ್ಸ್​ ಟ್ರೋಫಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ
  • ಸ್ಟಾರ್​ ಪ್ಲೇಯರ್​ ಸಂಜು ಸ್ಯಾಮ್ಸನ್​​ ಮತ್ತು ಕನ್ನಡಿಗ ಮಯಾಂಕ್​ಗೆ ಕೊಕ್​​
  • ಮಯಾಂಕ್​​, ಸ್ಯಾಮ್ಸನ್​​ಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ ಸೆಲೆಕ್ಷನ್​ ಕಮಿಟಿ

ಬಹುನಿರೀಕ್ಷಿತ 2025ರ ಚಾಂಪಿಯನ್ಸ್​ ಟ್ರೋಫಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಆಗಿದೆ. ಟೀಮ್​ ಇಂಡಿಯಾ ಸ್ಟಾರ್​ ಆಟಗಾರ ಸಂಜು ಸ್ಯಾಮ್ಸನ್​​ ಮತ್ತು ಕನ್ನಡಿಗ ಮಯಾಂಕ್​​ ಅಗರ್ವಾಲ್​​ಗೆ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಬಿಗ್​​ ಶಾಕ್​​ ಕೊಟ್ಟಿದೆ.

ಮಯಾಂಕ್​​ಗೆ ಮಣೆ ಹಾಕದ ಬಿಸಿಸಿಐ

ಕರ್ನಾಟಕ ತಂಡವನ್ನು ವಿಜಯ್‌ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಮಯಾಂಕ್​​ ಅಗರ್ವಾಲ್​ ಲೀಡ್​ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಕರ್ನಾಟಕ ಪರ ಟೂರ್ನಿಯಲ್ಲಿ ಮಯಾಂಕ್‌ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ರು. ಈ ಮೂಲಕ ಚಾಂಪಿಯನ್ಸ್​ ಟ್ರೋಫಿಗೆ ಬಿಸಿಸಿಐ ಕದ ತಟ್ಟಿದ್ರು. ಇಷ್ಟಾದ್ರೂ ಬಿಸಿಸಿಐ ಕರ್ನಾಟಕದ ಸ್ಟಾರ್ ಆಟಗಾರರನ್ನು ಬಿಸಿಸಿಐ ಕಡೆಗಣನೆ ಮಾಡಿದೆ.

ಕನ್ನಡಿಗನ ಸಾಧನೆ

ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​ ಮಯಾಂಕ್‌ ಅಗರ್ವಾಲ್​​. ಇವರು ಭಾರತದ ಪರ 21 ಟೆಸ್ಟ್‌ ಹಾಗೂ 5 ಏಕದಿನ ಪಂದ್ಯ ಆಡಿದ ಅನುಭವ ಹೊಂದಿದ್ದಾರೆ. 4 ಶತಕ ಹಾಗೂ 6 ಅರ್ಧಶಕದೊಂದಿಗೆ 1488 ರನ್​​​ ಸಿಡಿಸಿದ್ದಾರೆ. ಸದ್ಯ ನಡೆಯುತ್ತಿರೋ ವಿಜಯ್ ಹಜಾರೆ ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರೋ ಇವರು 10 ಪಂದ್ಯಗಳಲ್ಲಿ 651 ರನ್‌ ಸಿಡಿಸಿದ್ದಾರೆ.

ಸಂಜುಗೆ ಕೊಕ್​

ಚಾಂಪಿಯನ್ಸ್ ಟ್ರೋಫಿಯಲ್ಲಿ ಸಂಜು ಸ್ಯಾಮ್ಸನ್​​ ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಇವರು ಟಿ20 ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಎರಡನೇ ವಿಕೆಟ್‌ ಕೀಪರ್‌ ಆಗಿ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನಲಾಗಿತ್ತು. ಭಾರತ ತಂಡದಲ್ಲಿ ಪಂತ್‌ ಮತ್ತು ಕೆಎಲ್ ರಾಹುಲ್ ವಿಕೆಟ್‌ ಕೀಪರ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್​ ಅವರನ್ನು ಆಯ್ಕೆ ಮಾಡಿಲ್ಲ.

ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡ ಹೀಗಿದೆ!

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ.

ಇದನ್ನೂ ಓದಿ:ಚಾಂಪಿಯನ್ಸ್‌ ಟ್ರೋಫಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಸ್ಟಾರ್​ ಆಟಗಾರರೇ ಔಟ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment