newsfirstkannada.com

ಫೈರಿ ಬ್ಯಾಟರ್​​ನಿಂದ ತಂಡಕ್ಕೆ ಬಿಗ್​ ಬೂಸ್ಟ್.. ಪ್ಲೇಯಿಂಗ್​- 11ರಲ್ಲಿ ಪಂತ್ ಆಯ್ಕೆಗೆ ಅಡ್ಡಗಾಲು ಹಾಕ್ತಾರಾ ಸಂಜು?

Share :

Published June 5, 2024 at 11:48am

  ಅಭ್ಯಾಸ ಪಂದ್ಯದಲ್ಲಿ ಧೂಳೆಬ್ಬಿಸಿಸಿರುವ ಗೇಮ್ ಚೇಂಜರ್

  ಸಾಲು-ಸಾಲು ಸವಾಲುಗಳು ಎಂಟೆದೆನೆ ಬಂಟನ ಮುಂದಿವೆ

  ಕೀಪರ್ ಸ್ಥಾನಕ್ಕಾಗಿ ಭಾರತ ಪ್ಲೇಯರ್ಸ್​ ಮಧ್ಯೆ ಪೈಪೋಟಿ

ರಿಷಬ್​ ಪಂತ್​​​​ ಸಾವನ್ನೇ ಗೆದ್ದ ವೀರ. ಮತ್ತೆ ಟೀಮ್ ಇಂಡಿಯಾದಲ್ಲಿ ಆರ್ಭಟಿಸಲು ಸಜ್ಜಾಗಿದ್ದಾನೆ. ಅಭ್ಯಾಸ ಪಂದ್ಯದಲ್ಲಿ ವೀರಾವೇಶ ತೋರಿದ್ದಾಗಿದೆ. ಈಗ ಅಸಲಿ ಅಖಾಡದಲ್ಲಿ ಆರ್ಭಟಿಸಲು ಹಪಾಹಪಿಸ್ತಿದ್ದಾರೆ. ಅದರ ಜೊತೆ ಸಾಲು-ಸಾಲು ಸವಾಲುಗಳು ಎಂಟೆದೆನೆ ಬಂಟನ ಮುಂದಿವೆ. ಅವುಗಳನ್ನ ಹೇಗೆ ಮೆಟ್ಟಿ ನಿಲ್ತಾನೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.

T20 ವಿಶ್ವಕಪ್​​​​​ ದಂಗಲ್ ಆರಂಭಗೊಂಡಿದ್ದಾಗಿದೆ. ಆದ್ರೆ ಟೀಮ್ ಇಂಡಿಯಾ ದರ್ಬಾರ್ ಶುರುವಾಗೋದು ಮಾತ್ರ ಇಂದಿನಿಂದ. ಮೊದಲ ಪಂದ್ಯದಲ್ಲಿ ಐರ್ಲೆಂಡ್​ ತಂಡವನ್ನ ಎದುರಿಸಲಿದೆ. ಡಿಸ್ಟ್ರಕ್ಟಿವ್ ಬ್ಯಾಟರ್​​ ರಿಷಬ್​ ಪಂತ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ವಿಶ್ವಕಪ್​​ ರಣರಂಗದಲ್ಲಿ ಆರ್ಭಟಿಸುವ ಶಪಥ..!

ಪಂತ್ ಮತ್ತೆ ಬ್ಲೂ ಜರ್ಸಿಯಲ್ಲಿ ಆರ್ಭಟಿಸಲಿ, ಆದಷ್ಟು ಬೇಗನೇ ಟೀಮ್ ಇಂಡಿಯಾವನ್ನ ಸೇರಿಕೊಳ್ಳಲಿ ಅನ್ನೋದು ಫ್ಯಾನ್ಸ್ ಹೆಬ್ಬಕೆಯಾಗಿತ್ತು. ಸದ್ಯ ಅಭಿಮಾನಿಗಳ ಆ ಮಹಾದಾಸೆ ಫಲಿಸಿದೆ. ಟಿ20 ವಿಶ್ವಕಪ್ ಗೆಲ್ಲಿಸಲು ಪಂತ್​​​ ಬ್ಲೂ ಜರ್ಸಿ ತೊಟ್ಟು ಘರ್ಜಿಸಲು ಸಜ್ಜಾಗಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಪಂತ್​​​​​, ಬಾಂಗ್ಲಾ ಸಂಹರಿಸಿದ್ದಾಗಿದೆ. ಈಗ ಮುಂದಿನ ಗುರಿ ಐರ್ಲೆಂಡ್​ ಬೇಟೆಯಾಡೋದು.

17 ತಿಂಗಳ ನಂತರ ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್​​​..!

ಭೀಕರ ಕಾರು ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಪಂತ್​​ ಬರೋಬ್ಬರಿ 17 ತಿಂಗಳ ನಂತ್ರ ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಫೈರಿ ಬ್ಯಾಟರ್​​ ಆಗಮನದಿಂದ ತಂಡಕ್ಕೆ ಬಿಗ್​ ಬೂಸ್ಟ್ ಸಿಕ್ಕಿದೆ ನಿಜ. ಅಭ್ಯಾಸ ಪಂದ್ಯದಲ್ಲಿ ರೋರಿಂಗ್ ನಡೆಸಿದ ಮಾತ್ರಕ್ಕೆ ಡೇರಿಂಗ್ ಬ್ಯಾಟರ್​​​​​​​​​​ ಕಮ್​ಬ್ಯಾಕ್​​ ಹಾದಿಯಂತೂ ಸುಲಭವಿಲ್ಲ. ಅವರ ಮುಂದೆ ಹಲವು ಸವಾಲುಗಳಿವೆ.

ಸಂಜು ಸ್ಯಾಮ್ಸನ್​ ಜೊತೆ ಪ್ರಬಲ ಪೈಪೋಟಿ

ಪಂತ್​​​​​​​ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್​​. ಅದ್ರಲ್ಲಿ ಯಾವುದೇ ಡೌಟಿಲ್ಲ. ಅಭ್ಯಾಸ ಪಂದ್ಯದಲ್ಲೆ ಅದಕ್ಕೆ ಆನ್ಸರ್ ಸಿಕ್ಕಿದೆ. ಆದರೆ ಇಂದು ಪ್ಲೇಯಿಂಗ್​​​-11ನಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳುವ ಬಿಗ್ ಚಾಲೆಂಜ್​ ಇದೆ. ಯಾಕಂದ್ರೆ ಸ್ಯಾಮ್ಸನ್​ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಸ್ಯಾಮ್ಸನ್ ಫೇಲಾಗಿರಬಹುದು. ಇತ್ತೀಚೆಗೆ ಟಿ20 ಫಾರ್ಮೆಟ್​ನಲ್ಲಿ ಅವರ ರೆಕಾರ್ಡ್ಸ್ ಅದ್ಭುತವಾಗಿದೆ. ಹಾಗಾಗಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ​​

ಪರಿಪೂರ್ಣ ಪ್ರದರ್ಶನದ ನಿರೀಕ್ಷೆ

ರಿಷಬ್​ ಪಂತ್​ 2024ನೇ ಐಪಿಎಲ್​ನಲ್ಲಿ 446 ರನ್ ಗಳಿಸಿದ್ರೂ ಅವರಿಂದ ಪರಿಪೂರ್ಣ ಪ್ರದರ್ಶನ ಮೂಡಿ ಬಂದಿರಲಿಲ್ಲ. ಬ್ಯಾಟಿಂಗ್​ನಲ್ಲಿ ಹಳೇ ಖದರ್​​ ಮಾಯವಾಗಿತ್ತು. ಆದರೆ ಅಭ್ಯಾಸ ಪಂದ್ಯದಲ್ಲಿ ಆರ್ಭಟಿಸಿ ನಿರೀಕ್ಷೆ ಹೆಚ್ಚಿಸಿದ್ದಾರೆ. ಆದ್ರೆ ಅಷ್ಟೇ ಸಾಕಾಗಲ್ಲ. ಪಂತ್​ರ ಹಿಂದಿನ ಅಟ್ಯಾಕಿಂಗ್ ಸ್ಟ್ರೈಲ್​​​, ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಗತ್ತು ಕಾಣ್ತಿಲ್ಲ. ಇದು ಆ ಅಬ್ಬರ ಮರುಕಳಿಸಬೇಕಿದೆ.

ಆಯ್ಕೆಗಾರರ ನಂಬಿಕೆ ಉಳಿಸಿಕೊಳ್ಳುವ ಸವಾಲು

17ನೇ ಐಪಿಎಲ್​​ ಪ್ರದರ್ಶನದ ಆಧಾರದ ಮೇಲೆ ಪಂತ್​ಗೆ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅನುಭವ ಮತ್ತು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​​​​​ ಅವರ ಕೈ ಹಿಡಿದಿದೆ. 17 ತಿಂಗಳ ಬಳಿಕ ತಂಡಕ್ಕೆ ವಾಪಸಾದ ಪಂತ್​​​ ಅದ್ಭುತ ಆಟವಾಡಿ ಸೆಲೆಕ್ಟರ್ಸ್​ ನಂಬಿಕೆಯನ್ನ ಉಳಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಪಂತ್​​​​​​ 17 ತಿಂಗಳ ಬಳಿಕ ತಂಡಕ್ಕೆ ಮರಳಿದ್ದು ನಿಜಕ್ಕೂ ಡಬಲ್ ಖುಷಿ ತಂದಿದೆ. ಆದರೆ ಈ ಖುಷಿ ಕೇವಲ ಕಮ್​​ಬ್ಯಾಕ್​ಗೆ ಸೀಮಿತವಾಗುತ್ತಾ ? ಇಲ್ಲ ಟಿ20 ವಿಶ್ವಕಪ್​​​​ ವಾರ್​​ನಲ್ಲಿ ಜಬರ್ದಸ್ತ್​​ ಆಟವಾಡಿ ಆಯ್ಕೆಯನ್ನ ಸಮರ್ಥಿಕೊಳ್ತಾರಾ ಅನ್ನೋದನ್ನ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಫೈರಿ ಬ್ಯಾಟರ್​​ನಿಂದ ತಂಡಕ್ಕೆ ಬಿಗ್​ ಬೂಸ್ಟ್.. ಪ್ಲೇಯಿಂಗ್​- 11ರಲ್ಲಿ ಪಂತ್ ಆಯ್ಕೆಗೆ ಅಡ್ಡಗಾಲು ಹಾಕ್ತಾರಾ ಸಂಜು?

https://newsfirstlive.com/wp-content/uploads/2024/06/SANJU_PANT.jpg

Load More