ಶಿವಂ ದುಬೆಗೆ ಸಿಗಬೇಕಿದ್ದ ಅವಕಾಶ ನೀಡಿದ್ದ ಗಂಭೀರ್​.. ಸಂಜು ಹೀಗೆ ಮಾಡಿದ್ದು ಸರಿಯೇ ಎಂದು ಬೇಸರ

author-image
Ganesh
Updated On
9 ವರ್ಷ.. 8 ನಾಯಕರು.. ಸಂಜು ಸ್ಯಾಮ್ಸನ್​​ ಅಂದರೆ ಇವರಿಗೆ ಲೆಕ್ಕಕ್ಕೆ ಉಂಟು, ಆಟಕ್ಕಿಲ್ಲ..!
Advertisment
  • ಸಂಜು ಸ್ಯಾಮ್ಸನ್ ಮತ್ತೆ ಫೇಲ್, ನಿನ್ನೆ ಗೋಲ್ಡನ್ ಡಕ್
  • ಚಿನ್ನದಂಥ ಅವಕಾಶ ಕೈಚೆಲ್ಲಿದ ಕೀಪರ್ ಸಂಜು ಸ್ಯಾಮ್ಸನ್
  • ಫ್ಯಾನ್ಸ್​ ಭಾರೀ ಬೇಸರ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್

ಟೀಂ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ. ಅವಕಾಶ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭ ಇಲ್ಲ. ಸಿಕ್ಕಿರುವ ಚಿನ್ನದಂಥ ಅವಕಾಶವನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಒಲಿಸಿಕೊಳ್ಳೋದು ಅಷ್ಟು ಸುಲಭ ಇಲ್ಲ. ಯಾಕೆಂದರೆ ಕಾಂಪಿಟೇಷನ್ ಅಷ್ಟರ ಮಟ್ಟಿಗೆ ಇದೆ. ವಿಷಯ ಹೀಗಿರುವಾಗ ಸಂಜು ಸ್ಯಾಮ್ಸನ್ ಮತ್ತೆ ಅದೇ ತಪ್ಪು ಮಾಡಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬೆಂಚ್​ಗೆ ಸೀಮಿತವಾಗಿದ್ದ ಸಂಜು, 2 ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು. ಗಿಲ್ ಅವರ ಅನುಪಸ್ಥಿತಿಯಲ್ಲಿ ಆರಂಭಿಕ ಆಟಗಾರರಾಗಿ ಬಡ್ತಿ ಪಡೆದುಕೊಂಡಿದ್ದರು. ಅಭಿಮಾನಿಗಳು ಸಂಜು ಮೇಲೆ ತುಂಬಾ ನಿರೀಕ್ಷೆಗಳನ್ನು ಇಟ್ಕೊಂಡಿದ್ದರು. ಹಿಂದೆ ತಮಗೆ ಆಗಿರುವ ಮೋಸ ಮತ್ತು ಅನ್ಯಾಯಕ್ಕೆ ಬ್ಯಾಟಿಂಗ್ ಮೂಲಕ ಉತ್ತರ ನೀಡುತ್ತಾರೆ ಅಂದ್ಕೊಂಡಿದ್ದರು.

ಇದನ್ನೂ ಓದಿ:‘ಇನ್ನೆಷ್ಟು ಅವಕಾಶ ಕೊಡಬೇಕು..’ ಗೋಲ್ಡನ್ ಡಕ್ ಆದ ಟೀಂ ಇಂಡಿಯಾ ಆಟಗಾರನ ವಿರುದ್ಧ ಆಕ್ರೋಶ

ಅಭಿಮಾನಿಗಳ ಆ ನಿರೀಕ್ಷೆ ಹುಸಿಯಾಗಿತ್ತು. ಕ್ರೀಸ್​ನಲ್ಲಿ ಆಗಿದ್ದೇ ಬೇರೆ. ಭರವಸೆಯ ಸಂಜು ಸ್ಯಾಮ್ಸನ್​​ ಗೋಲ್ಡನ್ ಡಕ್ ಆಗುವ ಮೂಲಕ ಪೆವಿಲಿಯನ್​ಗೆ ತಲೆ ತಗ್ಗಿಸಿ ಬಂದ ಹಾದಿಯಲ್ಲೇ ಹೋದರು. ಈ ಮೂಲಕ ಟೀಂ ಇಂಡಿಯಾ ಮ್ಯಾನೇಜ್ಮೆಂಟ್​​ಗೆ, ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಮೊದಲೇ ಹೇಳಿದ ಹಾಗೆ ತಂಡದಲ್ಲಿ ಭಾರೀ ಪೈಪೋಟಿ ಇದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು, ಮನಸು ಮಾಡಿದ್ರೆ ಸಂಜುಗೆ ಚಾನ್ಸ್​ ಮಿಸ್ ಮಾಡಿ, ಸ್ಫೋಟಕ ಬ್ಯಾಟ್ಸ್​​ಮನ್ ಶಿವಂ ದುಬೆಗೆ ಅವಕಾಶ ನೀಡಬಹುದಿತ್ತು. ಆದರೆ ಗಂಭೀರ್ ಹಾಗೆ ಮಾಡಲಿಲ್ಲ. ಸಂಜು ಸ್ಯಾಮ್ಸನ್​​ಗೆ ಪ್ಲೇಯಿಂಗ್-11ನಲ್ಲಿ ಅವಕಾಶ ನೀಡಿ ಬ್ಯಾಟಿಂಗ್ ಕ್ರಮಾಂಕದಲ್ಲೂ ಮುಂಬಡ್ತಿ ನೀಡಿದ್ದರು. ಆದರೆ ಸಂಜು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡಿಲ್ಲ. ಇದು ಅಭಿಮಾನಿಗಳಲ್ಲಿ ಸಹಜವಾಗಿಯೇ ಬೇಸರ ತಂದಿದೆ.

ಇದನ್ನೂ ಓದಿ:31ರನ್​ ಅಂತರದಲ್ಲಿ 7 ವಿಕೆಟ್ ಬೇಟೆ.. ಅದ್ಭುತ ಆರಂಭ ಕಂಡರೂ ಲಂಕನ್ನರ ಕಟ್ಟಿಹಾಕಿದ್ದು ಈ ಆಟಗಾರರು..!

https://twitter.com/Itsmesany_/status/1817213318974820642

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment