‘ಎಷ್ಟು ಅವಕಾಶ ಕೊಟ್ರೂ ಅದೇ ರಾಗ ಅದೇ ಹಾಡು’- ನಾಚಿಕೆ ಆಗಬೇಕು ಎಂದು ಸ್ಟಾರ್​ ಪ್ಲೇಯರ್​ ವಿರುದ್ಧ ಆಕ್ರೋಶ

author-image
Ganesh Nachikethu
Updated On
31ರನ್​ ಅಂತರದಲ್ಲಿ 7 ವಿಕೆಟ್ ಬೇಟೆ.. ಅದ್ಭುತ ಆರಂಭ ಕಂಡರೂ ಲಂಕನ್ನರ ಕಟ್ಟಿಹಾಕಿದ್ದು ಈ ಆಟಗಾರರು..!
Advertisment
  • ಇಂದು ಟೀಮ್​ ಇಂಡಿಯಾ, ಶ್ರೀಲಂಕಾ ತಂಡದ ಮಧ್ಯೆ ರೋಚಕ ಪಂದ್ಯ
  • ಕೊನೆಯ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್​ ಇಂಡಿಯಾ ಕಣಕ್ಕೆ
  • ಅವಕಾಶ ಸಿಕ್ಕರೂ ಮತ್ತೆ ಬ್ಯಾಟಿಂಗ್​​ನಲ್ಲಿ ಸ್ಟಾರ್​ ಆಟಗಾರನ​ ವೈಫಲ್ಯ..!

ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಪಲ್ಲೆಕೆಲೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಎರಡು ಟಿ20 ಪಂದ್ಯಗಳಲ್ಲೂ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಭಾರತ ತಂಡದ ಹೊಸ ಕ್ಯಾಪ್ಟನ್​​​ ಸೂರ್ಯಕುಮಾರ್​ ಯಾದವ್​​ ನೇತೃತ್ವದಲ್ಲಿ ಟೀಮ್​ ಇಂಡಿಯಾ 2-0 ಅಂತರದಿಂದ ಟಿ20 ಸರಣಿಯನ್ನು ಗೆದ್ದಿದೆ.

3 ಟಿ20 ಪಂದ್ಯಗಳ ಸರಣಿಯಲ್ಲಿ ಟೀಮ್​ ಇಂಡಿಯಾ 2-0 ಅಂತರದಿಂದ ಸೀರೀಸ್​ ಗೆದ್ದಿದ್ದು, ಇಂದು ಕೊನೆ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ವಿರುದ್ಧ ಹೇಗಾದ್ರೂ ಗೆಲ್ಲಲೇಬೇಕು ಎಂದು ಶ್ರೀಲಂಕಾ ಜಿದ್ದಿಗೆ ಬಿದ್ದಿದೆ.

publive-image

ಪಲ್ಲೆಕೆಲೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶ್ರೀಲಂಕಾ, ಟೀಮ್​ ಇಂಡಿಯಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಸದ್ಯ ಮಳೆ ನಿಂತಿದ್ದು, ಟಾಸ್​ ಗೆದ್ದ ಶ್ರೀಲಂಕಾ ಕ್ಯಾಪ್ಟನ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ಹಾಗಾಗಿ ಟೀಮ್​ ಇಂಡಿಯಾ ಫಸ್ಟ್​ ಬ್ಯಾಟಿಂಗ್​ ಮಾಡಿದೆ. ಅಲ್ಲದೇ ಕೇವಲ 20 ಓವರ್​ನಲ್ಲಿ 9 ವಿಕೆಟ್​ಗೆ 137 ರನ್​ ಕಲೆ ಸಾಧಾರಣ ಗುರಿ ನೀಡಿದೆ.

ಸಂಜು ಮತ್ತೆ ಫೇಲ್ಯೂರ್​​..!

ಇನ್ನು, ಭಾರತ ತಂಡದ ಪ್ಲೇಯಿಂಗ್​ ಎಲೆವೆನ್​ನಲ್ಲಿ ಭಾರೀ ಬದಲಾವಣೆ ಮಾಡಲಾಗಿತ್ತು. ರಿಷಬ್​ ಪಂತ್​ ಬದಲಿಗೆ ಸಂಜು ಸ್ಯಾಮ್ಸನ್​ ಅವರಿಗೆ ಅವಕಾಶ ನೀಡಲಾಗಿತ್ತು. ಮೊದಲ 2 ಪಂದ್ಯಗಳಲ್ಲಿ ಅವಕಾಶ ನೀಡಿದ್ರೂ ಪಂತ್​ ಸರಿಯಾಗಿ ಬಳಸಿಕೊಳ್ಳಲಿಲ್ಲ ಅನ್ನೋ ಆರೋಪ ಕೇಳಿ ಬಂದಿತ್ತು. ಹಾಗಾಗಿ ಸಂಜು ಅವರನ್ನೇ ಆಡಿಸಲಾಯ್ತು. ಕಳೆದ ಪಂದ್ಯದಲ್ಲಿ ಗೋಲ್ಡನ್ ಡಕೌಟ್​ ಆಗಿದ್ದ ಸಂಜು ಸ್ಯಾಮ್ಸನ್​​​ ಈ ಸಲ ಡಕೌಟ್​ ಆಗಿದ್ದಾರೆ. ಹಾಗಾಗಿ ಫ್ಯಾನ್ಸ್​ ನಿನಗೆ ಎಷ್ಟು ಅವಕಾಶ ಕೊಟ್ರೂ ವೇಸ್ಟ್. ಅದೇ ರಾಗ ಅದೇ ಹಾಡು, ಚೂರಾದ್ರೂ ನಾಚಿಕೆ ಆಗಬೇಕು​ ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment