ಕೈಕೊಟ್ಟ ಸಂಜು ಸ್ಯಾಮ್ಸನ್​​.. ಹೊಸ ನಾಯಕನ ಹುಡುಕಾಟದಲ್ಲಿ ರಾಜಸ್ಥಾನ್ ರಾಯಲ್ಸ್..!

author-image
Ganesh
Updated On
KL ರಾಹುಲ್​​, ಇಶಾನ್​​ಗೆ ಬಿಗ್​ ಶಾಕ್​; ಟೀಂ ಇಂಡಿಯಾದಿಂದ ಇಬ್ಬರಿಗೂ ಕೊಕ್​​; ಕಾರಣವೇನು?
Advertisment
  • ಸಂಜು ಸ್ಯಾಮ್ಸನ್​​ಗೆ ದಿಢೀರ್ ಆಗಿದ್ದೇನು ಗೊತ್ತಾ?
  • ಐಪಿಎಲ್​​ನಲ್ಲಿ ಅದ್ಭುತವಾಗಿ ಮುನ್ನಡೆಸ್ತಿರುವ ಸಂಜು
  • ಸಂಜು ಔಟ್ ಆದರೆ ಅವರ ಬದಲಿ ಆಟಗಾರ ಯಾರು?

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಗಾಯಗೊಂಡರು. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎಸೆದ ಬಾಲ್ ಸಂಜು ಬೆರಳಿಗೆ ತಗುಲಿತು. ರಾಜಸ್ಥಾನ ರಾಯಲ್ಸ್ ನಾಯಕ ಸಂಪೂರ್ಣವಾಗಿ ಫಿಟ್ ಆಗಲು ಸುಮಾರು 6-7 ವಾರಗಳ ಅಗತ್ಯ ಇದೆ.

ಹೀಗಾಗಿ ಐಪಿಎಲ್​ನ ಮೊದಲ ಕೆಲವು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಹೊರಗುಳಿಯುವ ಸಾಧ್ಯತೆಯಿದೆ. ಇದು ರಾಜಸ್ಥಾನ್ ರಾಯಲ್ಸ್​ ತಂಡವನ್ನು ಸಹಜವಾಗಿಯೇ ಆತಂಕಕ್ಕೆ ತಳ್ಳಿದೆ. ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಗುಳಿದರೆ, ಅವರ ಬದಲಿ ಆಟಗಾರ ಯಾರು? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಇದನ್ನೂ ಓದಿ: ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ.. iPhone 16 ಮೇಲೆ ಭಾರೀ ಆಫರ್​..!

publive-image

ರಾಜಸ್ಥಾನ್ ರಾಯಲ್ಸ್​ ನಾಯಕರಾಗಿರುವ ಸಂಜು, ತಂಡವನ್ನು ಅದ್ಭುತವಾಗಿ ಮುನ್ನಡೆಸಿಕೊಂಡು ಬರ್ತಿದ್ದಾರೆ. 2021ರಿಂದ ಸಂಜು ಸ್ಯಾಮ್ಸನ್​ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದಾರೆ. 2022ರಲ್ಲಿ ರನ್ನರ್ ಅಪ್ ಆಗಿತ್ತು. 2024ರಲ್ಲಿ ಪ್ಲೇ-ಆಫ್ ಪ್ರವೇಶ ಮಾಡಿತ್ತು ರಾಜಸ್ಥಾನ್ ರಾಯಲ್ಸ್​. ಈ ಬಾರಿಯ ಮೆಗಾ ಹರಾಜಿನಲ್ಲಿ ದೊಡ್ಡ ದೊಡ್ಡ ಆಟಗಾರರನ್ನು ಖರೀದಿ ಮಾಡಿದೆ.

ಸಂಜು ಅವರು ಐಪಿಎಲ್​​ನಲ್ಲಿ 168 ಪಂದ್ಯಗಳನ್ನು ಆಡಿದ್ದಾರೆ. 139 ಸ್ಟ್ರೈಕ್​ರೇಟ್​ನಲ್ಲಿ 4419 ರನ್​ಗಳಿಸಿದ್ದಾರೆ. ಸಂಜು ಔಟ್ ಆದರೆ ಅವರ ಬದಲಿಗೆ ಯಾರನ್ನ ಆರ್​ಆರ್​ ಖರೀದಿ ಮಾಡುತ್ತೆ ಅನ್ನೋ ಕುತೂಹಲ ಹೆಚ್ಚಾಗಿದೆ. ಕನ್ನಡಿಗ ಮಯಾಂಗ್ ಅಗರ್ವಾಲ್, ಸರ್ಫರಾಜ್ ಖಾನ್ ಹಾಗೂ ಪೃಥ್ವಿ ಶಾ ಹೆಸರು ಕೇಳಿಬಂದಿದೆ. ಇವರುಗಳು ಐಪಿಎಲ್​ ಮೆಗಾ ಹರಾಜಿನಲ್ಲಿ ಸೇಲ್ ಆಗದೇ ಹೊರ ಉಳಿದಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಸಿಕ್ರೇಟ್ ಸಾಮಾನ್ಯ ಬಸ್​ ಡ್ರೈವರ್​​ಗೂ ಗೊತ್ತು.. ಬೇಡದ ವಿಚಾರಕ್ಕೆ ವಿರಾಟ್ ಟ್ರೆಂಡ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment