ಲೀಗ್​​ನಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಸಂಜು ಸ್ಯಾಮ್ಸನ್​ ಸೇಲ್.. ಆಕ್ಷನ್​​ನಲ್ಲಿ ಎಲ್ಲ ದಾಖಲೆ ಉಡೀಸ್!

author-image
Bheemappa
Updated On
CSK, RR ಮಧ್ಯೆ ಭರ್ಜರಿ ಟ್ರೇಡಿಂಗ್​ ಟಾಕ್; ಚೆನ್ನೈ ಫ್ರಾಂಚೈಸಿಯಿಂದ ಹೊರಬಿತ್ತು ಶಾಕಿಂಗ್​ ನ್ಯೂಸ್​..!
Advertisment
  • ಭಾರೀ ಮೊತ್ತಕ್ಕೆ ಮಾರಾಟ ಆಗಿರುವ ಸಂಜು ಸ್ಯಾಮ್ಸನ್
  • ಪರ್ಸ್​ನಲ್ಲಿದ್ದ ಅರ್ಧಕ್ಕೂ ಹೆಚ್ಚು ಹಣ ನೀಡಿದ ಫ್ರಾಂಚೈಸಿ
  • ಇನ್ಮುಂದೆ ತವರಿನ ಲೀಗ್​ನಲ್ಲಿ ಅಬ್ಬರಿಸಲಿರುವ ಸಂಜು

ಟೀಮ್ ಇಂಡಿಯಾದ ಯಂಗ್ ಬ್ಯಾಟರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್​ ತವರಿನ ಲೀಗ್​ನಲ್ಲಿ ಇನ್ಮುಂದೆ ಕಾಣಿಸಿಕೊಳ್ಳಲ್ಲಿದ್ದಾರೆ. ಈಗಾಗಲೇ ಆಕ್ಷನ್​ ನಡೆದಿದ್ದು ಕೇರಳ ಕ್ರಿಕೆಟ್​ ಲೀಗ್​ (KCL)ನಲ್ಲಿ ಸಂಜು ಸ್ಯಾಮ್ಸನ್ ಭಾರೀ ಮೊತ್ತಕ್ಕೆ ಮಾರಾಟ ಆಗಿರುವುದು ದಾಖಲೆ ಆಗಿದೆ.

ವಿಜಯ್ ಹಜಾರೆ ಟ್ರೋಫಿಯಿಂದ ಹೊರಗುಳಿದ ಬಳಿಕ ಇದೇ ಮೊದಲ ಬಾರಿಗೆ ಕೆಸಿಎಲ್​​ನಲ್ಲಿ ಸಂಜು ಸ್ಯಾಮ್ಸನ್ ಆಡುತ್ತಿದ್ದಾರೆ. ಅಂದು ತಂಡದ ಅಭ್ಯಾಸದಲ್ಲಿ ಆಡದ ಕಾರಣ ಸಂಜು ಸ್ಯಾಮ್ಸನ್ ಅವರನ್ನು ವಿಜಯ್ ಹಜಾರೆ ಟ್ರೋಫಿಯಿಂದ ಹೊರಗಿಡಲಾಗಿತ್ತು. ಬಳಿಕ ಈ ಬಗ್ಗೆ ಈ ಪತ್ರ ಬರೆದು ಮನವಿ ಮಾಡಿದ್ದರು. ಸದ್ಯ ಕೆಸಿಎಲ್​​ನಲ್ಲಿ ಕೊಚ್ಚಿ ಬ್ಲೂ ಟೈಗರ್​​ ತಂಡ ಸಂಜು ಸ್ಯಾಮ್ಸನ್ ಅವರನ್ನು ಬರೋಬ್ಬರಿ 26.60 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ.

ಇದನ್ನೂ ಓದಿ:ಬಾಲಕನನ್ನ 50 ಸಲ ಲೈಂಗಿಕವಾಗಿ ಬಳಸಿಕೊಂಡ ಟೀಚರ್.. ಕೋರ್ಟ್​​ನಲ್ಲಿ ಏನಾಯ್ತು?

publive-image

ಭಾರತ ತಂಡದಲ್ಲಿ ಆಡುವ ಕಮಿಟ್​​ಮೆಂಟ್​ ಇದ್ದಿದ್ದರಿಂದ ಕೆಸಿಎಲ್​ನ ಬ್ರಾಂಡ್ ಅಂಬಾಸಿಡರ್ ಆಗಿದ್ದರೂ ಸಂಜು ಮೊದಲ ಆವೃತ್ತಿಯಲ್ಲಿ ಆಡಿರಲಿಲ್ಲ. ಈ ಬಗ್ಗೆ ಮನವಿ ಮಾಡಿಕೊಂಡಿದ್ದರಿಂದ ಆಕ್ಷನ್​​ನಿಂದ ಅವರ ಹೆಸರನ್ನು ಮೊದಲೇ ಕೈಬಿಡಲಾಗಿತ್ತು. ಟಿ20ಯಲ್ಲಿ ತನ್ನದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವ ಸಂಜು ಬಾಂಗ್ಲಾದೇಶ ಹಾಗೂ ಆಫ್ರಿಕಾ ವಿರುದ್ಧ 3 ಸೆಂಚುರಿ ಸಿಡಿಸಿದ್ದಾರೆ.

ಕೇರಳ ಕ್ರಿಕೆಟ್​ ಲೀಗ್​ನ ಹರಾಜಿನಲ್ಲಿ ಸಂಜು ಸ್ಯಾಮ್ಸನ್,​ ದುಬಾರಿ ಮೊತ್ತಕ್ಕೆ ಕೊಚ್ಚಿ ಬ್ಲೂ ಟೈಗರ್ಸ್​ ಪಾಲಾಗಿರುವುದು ಲೀಗ್​ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಪ್ಲೇಯರ್ ಆಗಿದ್ದಾರೆ. ಹರಾಜಿನಲ್ಲಿ 3 ಲಕ್ಷ ಮೂಲ ಬೆಲೆ ಹೊಂದಿದ್ದ ಸಂಜು ಸ್ಯಾಮ್ಸನ್​, ಬರೋಬ್ಬರಿ 26.60 ಲಕ್ಷಕ್ಕೆ ಕೊಚ್ಚಿ ಬ್ಲೂ ಟೈಗರ್​​ ತಂಡದ ಪಾಲಾಗಿದ್ದಾರೆ. ಈ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲಾದ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷ ಎಂದರೆ ತಂಡದ ಮಾಲೀಕರ ಪರ್ಸ್​ನಲ್ಲಿದ್ದ 50 ಲಕ್ಷ ರೂಪಾಯಿಗಳಲ್ಲಿ ಅರ್ಧಕ್ಕೂ ಹೆಚ್ಚು ಮೊತ್ತ ಸಂಜು ಸ್ಯಾಮ್ಸನ್​ ನೀಡಲಾಗಿದೆ.​​​​​​​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment