/newsfirstlive-kannada/media/post_attachments/wp-content/uploads/2024/10/Sanju-Samson-Century-1.jpg)
ಬಾಂಗ್ಲಾದೇಶ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ದಸರಾ ಹಬ್ಬದಂದು ರನ್ಗಳ ಹೊಳೆಯನ್ನೇ ಹರಿಸಿದ ಸಂಜು ಸ್ಯಾಮ್ಸನ್ 40 ಎಸೆತಗಳಲ್ಲಿ ಶತಕ ಸಿಡಿಸಿದ್ರು.
ಇನ್ನು, 236.17 ಸ್ಟ್ರೈಕ್ ರೇಟ್ನೊಂದಿಗೆ ರನ್ ಕಲೆ ಹಾಕಿದ ಸಂಜು ಸ್ಯಾಮ್ಸನ್ 47 ಎಸೆತಗಳಲ್ಲಿ 111 ರನ್ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್ನಲ್ಲಿ 11 ಬೌಂಡರಿ, 8 ಸಿಕ್ಸರ್ ಸಿಡಿಸಿದರು. ಒಂದು ಓವರ್ನಲ್ಲಿ ಸತತ 4 ಬೌಂಡರಿ, ಇನ್ನೊಂದು ಓವರ್ನಲ್ಲಿ ಸತತ 5 ಸಿಕ್ಸರ್ ಬಾರಿಸಿದ್ದು ಇನ್ನಿಂಗ್ಸ್ನ ಮತ್ತೊಂದು ಹೈಲೈಟ್.
ಸಂಜು ಸ್ಯಾಮ್ಸನ್ ಶತಕ ಸಿಡಿಸುವಾಗ ನಾನ್ ಸ್ಟ್ರೈಕರ್ನಲ್ಲಿ ಸೂರ್ಯಕುಮಾರ್ ಯಾದವ್ ಇದ್ದರು. 90 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್ ಬಳಿ ಬಂದ ಸೂರ್ಯ, ಶತಕಕ್ಕೆ ಹತ್ತಿರದಲ್ಲಿದ್ದೀಯಾ! ನೋಡಿ ಆಡು ಎಂದಿದ್ದರಂತೆ. ಆದರೆ ಸಂಜು ಸ್ಯಾಮ್ಸನ್ ತಲೆಯಲ್ಲಿ ಬೇರೆ ಓಡುತ್ತಿತ್ತು.
ಈ ಬಗ್ಗೆ ಪಂದ್ಯ ಮುಗಿದ ಬಳಿಕ ಸೂರ್ಯಕುಮಾರ್ ಯಾದವ್ ಸಂಜುಗೆ ಪ್ರಶ್ನೆ ಕೇಳಿದ್ರು. ನೀವು 96 ರನ್ ಗಳಿಸಿದ್ದಾಗ ನೇರವಾಗಿ ನುಗ್ಗಿ ಹೊಡೆಯುತ್ತಿದ್ದಿರಿ. ಈ ರೀತಿಯ ರಿಸ್ಕ್ ಯಾಕೆ ತೆಗೆದುಕೊಂಡಿರಿ? ಎಂದರು. ಇದಕ್ಕೆ ಸಂಜು ಸ್ಯಾಮ್ಸನ್ ಉತ್ತರ ಹೀಗಿತ್ತು.
ಸಂಜು ನೀಡಿದ ಉತ್ತರ ಏನು?
ಕಳೆದ ಕೆಲವು ವಾರಗಳಿಂದ ಟೀಮ್ನಲ್ಲಿ ಈ ರೀತಿಯದ್ದೇ ವಾತಾರವಣ ಇತ್ತು. ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ಎಂದೇ ಕ್ಯಾಪ್ಟನ್ ಮತ್ತು ಕೋಚ್ ತಿಳಿಸಿದ್ದರು. ನನ್ನ ತಲೆಯಲ್ಲಿ ಅದೇ ಇತ್ತು. ಅದು ನನಗೆ ಸರಿಯಾಗಿ ಹೊಂದುತ್ತದೆ ಎಂದು ಭಾವಿಸಿದ್ದೆ. ಹಾಗಾಗಿ ಅದೇ ಪ್ರಯತ್ನ ಮುಂದುವರಿಸಿದೆ. ದೊಡ್ಡ ಹೊಡೆತಕ್ಕೆ ಕೈ ಹಾಕಿದೆ ಎಂದರು ಸಂಜು. ಸ್ಯಾಮ್ಸನ್ ಈ ಉತ್ತರಕ್ಕೆ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಇದನ್ನೂ ಓದಿ: ‘ಟೀಮ್ ಇಂಡಿಯಾ ಗೆಲುವಿಗೆ ಈ ಆಟಗಾರ ಕಾರಣ’ ಎಂದ ಕ್ಯಾಪ್ಟನ್; ಏನಂದ್ರು ಸೂರ್ಯ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ