/newsfirstlive-kannada/media/post_attachments/wp-content/uploads/2025/03/sanju_samson.jpg)
ಒಂದಲ್ಲ.. ಎರಡಲ್ಲ.. ಸುದೀರ್ಘ 11 ವರ್ಷಗಳ ಪ್ರಯಾಣ.. ಸಂಜು ಸ್ಯಾಮ್ಸನ್ ಅಂದ್ರೆ ರಾಜಸ್ಥಾನ್ ರಾಯಲ್ಸ್, ರಾಜಸ್ಥಾನ್ ರಾಯಲ್ಸ್ ಅಂದ್ರೆ ಸಂಜು ಸ್ಯಾಮ್ಸನ್ ಎಂದೇ ಕ್ರಿಕೆಟ್ ಲೋಕ ಗುರುತಿಸಿದೆ. ಕೇರಳದ ಸಂಜು ಸ್ಯಾಮ್ಸನ್ ರಾಜಸ್ಥಾನದ ಮನೆ ಮಗ ಅನಿಸಿಬಿಟ್ಟಿದ್ದಾರೆ. ಇಂತಾ ಸಂಜು ಸ್ಯಾಮ್ಸನ್ ಇದೀಗ ರಾಜಸ್ಥಾನ್ ತಂಡವನ್ನ ತೊರೆಯುತ್ತಾರೆ ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ABD ಮೇಲೆ ಕೊಹ್ಲಿಗೆ ಕೋಪ.. ತಿಂಗಳುಗಟ್ಟಲೇ ಮಾತಿಲ್ಲ, ಕಥೆಯಿಲ್ಲ.. ಈ ಸ್ಟೋರಿ ಗೊತ್ತಾ ನಿಮಗೆ..?
18ನೇ ಸೀಸನ್ನ ಐಪಿಎಲ್ ಅಂತ್ಯ ಕಂಡು ಒಂದು ತಿಂಗಳೂ ಕಂಪ್ಲೀಟ್ ಆಗಿಲ್ಲ. ಅದಾಗಲೇ ನೆಕ್ಸ್ಟ್ ಸೀಸನ್ ಐಪಿಎಲ್ಗೆ ಸದ್ದಿಲ್ಲದೇ ಫ್ರಾಂಚೈಸಿಗಳು ಸಿದ್ಧತೆ ನಡೆಸ್ತಿವೆ. ಸೈಲೆಂಟಾಗಿಯೇ ಟ್ರೇಡ್ ವಿಂಡೋ ಅಡಿ ಆಟಗಾರರ ವರ್ಗಾವಣೆಯ ವ್ಯವಹಾರಗಳು ನಡೀತಿವೆ. ಇದೀಗ ಐಪಿಎಲ್ನ ಸೂಪರ್ ಸ್ಟಾರ್ ಆಟಗಾರನೊಬ್ಬ ಬೇರೆ ಫ್ರಾಂಚೈಸಿಯ ಸಂಪರ್ಕದಲ್ಲಿರೋ ಬಿಗ್ ಸುದ್ದಿ ಹೊರಬಿದ್ದಿದೆ. ಅವರೇ ರಾಜಸ್ಥಾನ್ ರಾಯಲ್ಸ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್.
11 ವರ್ಷಗಳ ಸುದೀರ್ಘ ಪಯಣಕ್ಕೆ ಫುಲ್ ಸ್ಟಾಫ್
ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದ ಶಕ್ತಿ. ತಂಡದ ಸಾರಥಿ, ತಂಡದ ಕಟ್ಟಾಳು. ರಾಜಸ್ಥಾನ್ ರಾಯಲ್ಸ್ ಹಾಗೂ ಸಂಜು ಸ್ಯಾಮ್ಸನ್ದ್ದು ಸುದೀರ್ಘ 11 ವರ್ಷಗಳ ಜರ್ನಿ. 2013ರಲ್ಲಿ ಇದೇ ಫ್ರಾಂಚೈಸಿಯೊಂದಿಗೆ ಐಪಿಎಲ್ ಕರಿಯರ್ ಆರಂಭಿಸಿದ ಸಂಜು ಸ್ಯಾಮ್ಸನ್, 2016-17ರ 2 ಸೀಸನ್ ಹೊರತುಪಡಿಸಿದ್ರೆ, ಉಳಿದೆಲ್ಲಾ ಸೀಸನ್ಗಳಲ್ಲಿ ರಾಜಸ್ಥಾನದ ಅವಿಭಾಜ್ಯ ಅಂಗವಾಗಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ಕೇರಳದ ಸಂಜು ಸ್ಯಾಮ್ಸನ್ ರಾಜಸ್ಥಾನದ ಮನೆ ಮಗ ಆಗಿಬಿಟ್ಟಿದ್ದಾರೆ. ಈ ಮನೆ ಮಗ ಇದೀಗ ತಂಡವನ್ನ ತೊರೆಯುತ್ತಿರೋ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ಸಿಎಸ್ಕೆ ಸೇರ್ತಾರಾ ಸ್ಯಾಮ್ಸನ್?
ಸೀಸನ್ 18ರ ಅಂತ್ಯದ ಬೆನ್ನಲ್ಲೇ ಆಟಗಾರರ ವರ್ಗಾವಣೆಯ ಮಾಡೋ ಟ್ರೇಡ್ವಿಂಡೋ ಓಪನ್ ಆಗಿದೆ. ಅಡಿಯಲ್ಲಿ ಸಂಜು ಸ್ಯಾಮ್ಸನ್ನ ತಂಡಕ್ಕೆ ಕರೆತರಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂದಾಗಿದೆ ಎನ್ನಲಾಗಿದೆ. ಈ ಸೀಸನ್ನಲ್ಲಿ ಚೆನ್ನೈ ಪ್ರದರ್ಶನ ನೀಡಿತು. ಇದಕ್ಕೆ ಬ್ಯಾಟ್ಸ್ಮನ್ಗಳ ವೈಫಲ್ಯ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಬ್ಯಾಟಿಂಗ್ ಸ್ಟ್ರೆಂಥ್ ಹೆಚ್ಚಿಸಲು ಮುಂದಾಗಿರೋ ಸಿಎಸ್ಕೆ ಸಂಜುಗೆ ಗಾಳ ಹಾಕಲು ಹೊರಟಿದೆ. ಈಗಾಗಲೇ ಸಂಜು ಜೊತೆಗೆ ಫ್ರಾಂಚೈಸಿ ಮಾತುಕತೆ ನಡೆಸಿದ್ದು, ಮುಂದಿನ ಸೀಸನ್ನಲ್ಲಿ ಯೆಲ್ಲೋ ಜೆರ್ಸಿ ತೊಡಲು ಸಂಜು ಕೂಡ ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ಪತ್ನಿಯ ಹುಟ್ಟುಹಬ್ಬದಂದು ಕಣ್ಣೀರು.. ಸೋತು ಗೆದ್ದ ಕನ್ನಡಿಗ ಕರುಣ್ ನಾಯರ್..
ಸ್ಯಾಮ್ಸನ್ ಮ್ಯಾನೇಜರ್ ನಡೆ ನೀಡ್ತಿದೆ ಪುಷ್ಠಿ
ಸಂಜು ಸ್ಯಾಮ್ಸನ್ ವಿಚಾರದಲ್ಲಿ ರಾಜಸ್ಥಾನ್ ರಾಯಲ್ಸ್ ಆಗಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವಾಗಲಿ ಯಾವುದೇ ಅಧಿಕೃತವಾದ ಹೇಳಿ ನೀಡಿಲ್ಲ. ಸಂಜು ಸ್ಯಾಮ್ಸನ್ರ ಮ್ಯಾನೇಜರ್ ಪ್ರಶೋಬ್ ಸುದೆವನ್ ನಡೆ ಈ ಸುದ್ದಿಗೆ ಪುಷ್ಟಿಕೊಡ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಂಜು ಸ್ಯಾಮ್ಸನ್ ಸಿಎಸ್ಕೆ ಸೇರ್ತಾರೆ ಅನ್ನೋ ಪೋಸ್ಟ್ಗಳನ್ನ ಪ್ರಶೋಬ್ ಲೈಕ್ ಮಾಡಿದ್ದಾರೆ. ಈ ಗಾಳಿ ಸುದ್ದಿಗೆ ಜೀವ ನೀಡಿದಂತಾಗಿದೆ.
ಸಂಜು ಸ್ಯಾಮ್ಸನ್ ತಂಡ ತೊರೆಯಲು ಮುಂದಾಗಿದ್ದೇಕೆ?
ಸುದೀರ್ಘ 11 ವರ್ಷಗಳ ಕಾಲ ರಾಜಸ್ಥಾನ್ ರಾಯಲ್ಸ್ ತಂಡವನ್ನ ಸಂಜು ಪ್ರತಿನಿಧಿಸಿದ್ದಾರೆ. ಇಂದು ಸಂಜು ಏನೇ ಆಗಿದ್ರೂ ಅದಕ್ಕೆ ಫ್ರಾಂಚೈಸಿ ನೀಡಿದ ಬೆಂಬಲ, ಸಹಕಾರದ್ದು ಪ್ರಮುಖ ಪಾತ್ರವಿದೆ. ಇಂತಾ ಫ್ರಾಂಚೈಸಿಯನ್ನ ಸಂಜು ಸ್ಯಾಮ್ಸನ್ ತೊರೆಯಲು ಮುಂದಾಗಿರೋದಕ್ಕೆ ಆಂತರಿಕ ಭಿನ್ನಾಭಿಪ್ರಾಯವೇ ಪ್ರಮುಖ ಕಾರಣ ಎನ್ನಲಾಗ್ತಿದೆ. ಈ ಸೀಸನ್ ಐಪಿಎಲ್ ವೇಳೆ ಮ್ಯಾನೇಜ್ಮೆಂಟ್ - ಸಂಜು ನಡುವೆ ನಡೆದ ಘಟನೆಗಳು ಕೂಡ ಗಟ್ಟಿ ನಿರ್ಧಾರದ ಹಿಂದಿವೆ ಎನ್ನಲಾಗಿದೆ.
ಐಪಿಎಲ್ನ ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಟೈ ಆಗಿತ್ತು. ಸೂಪರ್ ಓವರ್ಗೂ ಮುನ್ನ ಡಗೌಟ್ ಬಳಿ ನಡೆದ ಮೀಟಿಂಗ್ ವೇಳೆ ಸಂಜು ಸ್ಯಾಮ್ಸನ್ನ ಕಡೆಗಣಿಸಲಾಯ್ತು. ಮೀಟಿಂಗ್ ವೇಳೆ ಪಕ್ಕದಲ್ಲೇ ಓಡಾಡ್ತಿದ್ದ ನಾಯಕ ಸಂಜು ಸ್ಯಾಮ್ಸನ್ ನೋಡಿಯೂ ನೋಡದಂತೆ ಹೆಜ್ಜೆ ಹಾಕ್ತಿದ್ರು. ಇದೇ ವೇಳೆ ತಂಡದ ಸಹ ಆಟಗಾರ ಯಧುವೀರ್ ಸಿಂಗ್, ಟೀಮ್ ಮೀಟಿಂಗ್ಗೆ ಬರುವಂತೆ ಸನ್ನೆ ಮಾಡಿದ್ರು. ಇದಕ್ಕೆ ಸನ್ನೆಯಲ್ಲೇ ಉತ್ತರ ನೀಡಿದ್ದು ಸಂಜು ಮೀಟಿಂಗ್ನಿಂದ ದೂರ ಉಳಿದ್ರು. ಈತರದ್ದೇ ಹಲವು ಘಟನೆಗಳು ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದಿವೆ ಎನ್ನಲಾಗ್ತಿದೆ. ಆಟಗಾರರ ಖರೀದಿ, ಪ್ಲೇಯಿಂಗ್ ಇಲೆವೆನ್ ಆಯ್ಕೆ, ಗೇಮ್ಪ್ಲಾನ್ ಎಲ್ಲಾ ವಿಚಾರದಲ್ಲೂ ಕಡೆಗಣಿಸೋದಕ್ಕೆ ಬೇಸರಗೊಂಡಿರೋ ಸಂಜು ತಂಡ ಬಿಡೋ ನಿರ್ಧಾರ ಮಾಡಿದ್ದಾರೆ ಅನ್ನೋದು ಸದ್ಯದ ಸುದ್ದಿ.
ಇದನ್ನೂ ಓದಿ: ಕ್ರಿಕೆಟ್ ಆಟದ ವೇಳೆ ವಿರಾಟ್ ಕೊಹ್ಲಿ ತಿನ್ನುವ ಚಾಕೊಲೇಟ್ ಬೆಲೆ ಎಷ್ಟು?
ಸಂಜುಗೆ ನಾಯಕತ್ವ ಸಿಗುತ್ತಾ.?
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಋತುರಾಜ್ ಗಾಯಕ್ವಾಡ್ ನಾಯಕನಾಗಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಸಿಎಸ್ಕೆ ತಂಡ ಸೇರಿದ್ರೂ ನಾಯಕತ್ವ ಸಿಗೋದು ಅನುಮಾನ. ಸಂಜುಗೆ ಪಟ್ಟಕಟ್ಟಿದ್ರೆ, ಋತುರಾಜ್ನ ಕೈ ಬಿಡಬೇಕಾಗುತ್ತದೆ. ಪ್ರಾಕ್ಟಕಲಿ ಹೀಗಾಗೋದು ಅನುಮಾನವೇ. ಇದ್ರ ನಡುವೆ ಕೆಕೆಆರ್ ಫ್ರಾಂಚೈಸಿ ಕೂಡ ಹೊಸ ನಾಯಕನ ಹುಡುಕಾಟ ನಡೆಸ್ತಿದೆ. ಹೀಗಿರೋ ಕೆಕೆಆರ್ ಫ್ರಾಂಚೈಸಿ ಅನುಭವಿ ಕ್ಯಾಪ್ಟನ್ ಸಂಜು ಸ್ಯಾಮ್ಸನ್ನ ಕಡೆಗಣಿಸೋಕೆ ಸಾಧ್ಯನೇ ಇಲ್ಲ. ಒಂದು ವೇಳೆ ಸಂಜು ಕೆಕೆಆರ್ ಆಫರ್ ನೀಡಿದ್ರೆ ಆಗ ಸಂಜು ಸ್ಯಾಮ್ಸನ್ ನಿರ್ಧಾರ ಏನಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಜಸ್ಪ್ರಿತ್ ಬೂಮ್ರಾ ಮೊದಲ ಪಂದ್ಯದಲ್ಲಿ ಆಡಲೇಬಾರದು.. ಕ್ರಿಕೆಟರ್ ಹೀಗೆ ಹೇಳಿದ್ದು ಯಾಕೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ