/newsfirstlive-kannada/media/post_attachments/wp-content/uploads/2024/07/Sanju-Samson_Gambhir.jpg)
ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಬಗ್ಗೆ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​​ ಸಂಜು ಸ್ಯಾಮ್ಸನ್​ ರಿಯಾಕ್ಟ್​ ಮಾಡಿದ್ದಾರೆ. ಅವಕಾಶ ನೀಡಿದ್ರೆ ಆಡುತ್ತೇನೆ. ಇಲ್ಲದೆ ಹೋದಲ್ಲಿ ಸುಮ್ಮನೆ ಇರುತ್ತೇನೆ. ನಾನು ಯಾವುದರ ಬಗ್ಗೆ ಕೂಡ ಹೆಚ್ಚು ಯೋಚನೆ ಮಾಡುವುದಿಲ್ಲ ಎಂದರು ಸಂಜು ಸ್ಯಾಮ್ಸನ್​​.
ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಶತಕ ಬಾರಿಸಿದ್ದರು. ಈ ಮೂಲಕ ಟೀಮ್​ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಹಾಗಾಗಿ ಏಕದಿನ ತಂಡದಲ್ಲಿ ಸಂಜು ಸ್ಯಾಮ್ಸನ್​ಗೆ ಸ್ಥಾನ ಸಿಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಕೆ.ಎಲ್​ ರಾಹುಲ್​ ಮತ್ತು ಪಂತ್​ ಅವರನ್ನು ಆಯ್ಕೆ ಮಾಡಿದ್ದರು.
ಸಂಜು ಸ್ಯಾಮ್ಸನ್​ ರಿಯಾಕ್ಷನ್​ ಹೇಗಿತ್ತು..?
ಇನ್ನು, ಇತ್ತೀಚೆಗೆ ಖಾಸಗಿ ಚಾನೆಲ್​ ಒಂದರಲ್ಲಿ ಭಾಗಿವಾಹಿಸಿದ್ದ ಸಂಜು ಸ್ಯಾಮ್ಸನ್​​ ಈ ಬಗ್ಗೆ ಮಾತಾಡಿದ್ದಾರೆ. ನಾನು ಇದರ ಬಗ್ಗೆ ಯೋಚಿಸುವುದಿಲ್ಲ. ಅವಕಾಶ ಸಿಕ್ಕರೆ ಆಡುತ್ತೇನೆ, ಇಲ್ಲವಾದಲ್ಲಿ ಇಲ್ಲ. ಯಾವಾಗಲೂ ನನಗೆ ತಂಡದ ಮುಖ್ಯ ಎಂದರು.
ಟೀಮ್​ ಇಂಡಿಯಾ ಪರ ಯಾವಾಗ ಬೇಕಾದ್ರೂ ಆಡುತ್ತೇನೆ. ನನ್ನನ್ನು ಅವರು ಕರೆಯಲೇಬೇಕು ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ನನಗೆ ಯಾವುದೇ ಸಮಸ್ಯೆ ಇಲ್ಲ. ಸದಾ ಸಕಾರಾತ್ಮಕವಾಗಿ ಇರಲು ಪ್ರಯತ್ನಿಸುತ್ತೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us