/newsfirstlive-kannada/media/post_attachments/wp-content/uploads/2025/04/SANJU_KL_RAHUL.jpg)
ಡೆಲ್ಲಿ ಕ್ಯಾಪಿಟಲ್ಸ್ ಜೊತೆ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡುವಾಗ ಅರ್ಧದಲ್ಲೇ ಕ್ರೀಸ್ ಬಿಟ್ಟು ಹೊರ ನಡೆದಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಡೆಲ್ಲಿ ತಂಡ ಮೊದಲ ಬ್ಯಾಟಿಂಗ್ಗೆ ಮಾಡಿ 20 ಓವರ್ಗಳಲ್ಲಿ 5 ವಿಕೆಟ್ಗೆ 189 ರನ್ಗಳ ಟಾರ್ಗೆಟ್ ನೀಡಿದೆ. ಸದ್ಯ ಈ ಗುರಿಯನ್ನು ರಾಜಸ್ಥಾನ್ ತಂಡ ಬೆನ್ನಟ್ಟಿದೆ.
ಇದನ್ನೂ ಓದಿ:ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಕನ್ನಡಿಗ ರನೌಟ್.. ರಾಜಸ್ಥಾನ್ ತಂಡಕ್ಕೆ ಸಾಧಾರಣ ಟಾರ್ಗೆಟ್
ರಾಜಸ್ಥಾನ್ ಪರ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಪಡೆದಿದ್ದರು. ತಮ್ಮ ಬ್ಯಾಟಿಂಗ್ನಿಂದ ಡೆಲ್ಲಿ ಬೌಲರ್ಗಳನ್ನು ಬೆಚ್ಚಿ ಬೀಸಿದ್ದರು. ಕ್ರೀಸ್ನಲ್ಲಿ ಜೈಸ್ವಾಲ್ 22 ರನ್ಗಳಿಂದ ಬ್ಯಾಟಿಂಗ್ ಮಾಡುತ್ತಿದ್ದರು. ಇನ್ನೊಂದೆಡೆ ಸಂಜು ಸ್ಯಾಮ್ಸನ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದರು.
ಕೇವಲ 19 ಎಸೆತಗಳನ್ನು ಎದುರಿಸಿ ಸಂಜು ಸ್ಯಾಮ್ಸನ್, 2 ಫೋರ್ ಹಾಗೂ 3 ಅಮೋಘವಾದ ಸಿಕ್ಸರ್ಗಳಿಂದ 31 ರನ್ಗಳನ್ನು ಗಳಿಸಿದ್ದರು. ಆದರೆ ಸಂಜು ಬ್ಯಾಟಿಂಗ್ ಮಾಡುವಾಗ ಗಾಯಕ್ಕೆ ತುತ್ತಾಗಿದ್ದಾರೆ. ಪಕ್ಕೆಲುಬಿನ ಗಾಯದಿಂದ ಬ್ಯಾಟಿಂಗ್ ಮಾಡಲು ಆಗಿಲ್ಲ. ಹೀಗಾಗಿ ಬ್ಯಾಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು, ಅಂಪೈರ್ನಿಂದ ಮನವಿ ಪಡೆದು ಪಿಚ್ನಿಂದಲೇ ಹೊರ ನಡೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ