/newsfirstlive-kannada/media/post_attachments/wp-content/uploads/2025/04/RAJAT_SANJU.jpg)
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವು ಮುಂದಿನ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್​ ಜೊತೆ ಆಡಲಿದೆ. ಈ ಹೈವೋಲ್ಟೇಜ್​ ಮ್ಯಾಚ್​ಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಅಲೆಯಲ್ಲಿರುವ ಆರ್​​ಸಿಬಿಗೆ ಮುಂದಿನ ಪಂದ್ಯ ಅತ್ಯಂತ ಮುಖ್ಯವಾಗಿದೆ. ಆರ್​ಸಿಬಿಗೆ ಖುಷಿ ಸಂಗತಿ ಎಂದರೆ ಎದುರಾಳಿ ತಂಡ ನಾಯಕ ಮುಂದಿನ ಪಂದ್ಯ ಆಡುತ್ತಿಲ್ಲ.
ಆರ್​ಸಿಬಿ ಮುಂದಿನ ಪಂದ್ಯವನ್ನು ರಾಜಸ್ಥಾನ್ ವಿರುದ್ಧ ಏಪ್ರಿಲ್ 24 ಅಂದರೆ ಇದೇ ಗುರುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ 7:30ಕ್ಕೆ ಅಖಾಡಕ್ಕೆ ಇಳಿಯಲಿದೆ. ಈಗಾಗಲೇ ಆರ್​​ಸಿಬಿ ತವರಿನ ಮೈದಾನದಲ್ಲಿ 3 ಪಂದ್ಯಗಳನ್ನು ಸೋತು ಭಾರೀ ಅವಮಾನಕ್ಕೆ ಒಳಗಾಗಿದೆ. ಇದರಿಂದ ರಾಜಸ್ಥಾನ್​ ವಿರುದ್ಧದ ಪಂದ್ಯವನ್ನು ರಜತ್ ಪಡೆ ಗೆಲ್ಲಲೇಬೇಕಿದೆ.
ತವರಿನಲ್ಲಿ ಹ್ಯಾಟ್ರಿಕ್ ಸೋಲಿನ ಕಹಿಯಲ್ಲಿರುವ ಆರ್​ಸಿಬಿಗೆ ಮುಂದಿನ ಪಂದ್ಯ ಗೆಲ್ಲಲು ಒಂದೊಳ್ಳೆ ಅವಕಾಶ ಇದೆ ಎನ್ನಬಹುದು. ರಾಜಸ್ಥಾನ್ ರಾಯಲ್ಸ್​ ತಂಡದ ನಾಯಕ, ವಿಕೆಟ್​ ಕೀಪರ್ ಕಮ್ ಬ್ಯಾಟರ್​ ಸಂಜು ಸ್ಯಾಮ್ಸನ್​ ಆಡುತ್ತಿಲ್ಲ. ಪಂದ್ಯದಲ್ಲಿ ಓಪನರ್​ ಆಗಿ ಕಣಕ್ಕಿ ಇಳಿಯುತ್ತಿದ್ದ ಸಂಜು ಬ್ಯಾಟಿಂಗ್​ನಲ್ಲಿ ಅಬ್ಬರಿಸುತ್ತಿದ್ದರು. ಅದು ಚಿನ್ನಸ್ವಾಮಿಯಲ್ಲಿ ಪಂದ್ಯವೆಂದರೆ ಸಂಜುಗೆ ಹೇಳಿ ಮಾಡಿಸಿದಂತ ಪಿಚ್​ ಆಗಿತ್ತು.
/newsfirstlive-kannada/media/post_attachments/wp-content/uploads/2025/04/KOHLI_HEART.jpg)
ಆದರೆ ಡೆಲ್ಲಿ ಜೊತೆ ಬ್ಯಾಟಿಂಗ್ ಮಾಡುವಾಗ ಸಂಜು ಸ್ಯಾಮ್ಸನ್​ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದ ಅವರು ಇನ್ನು ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಾಗುತ್ತದೆ ಎನ್ನಲಾಗಿದೆ. ಹೀಗಾಗಿ ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಜೊತೆ ನಡೆಯುವ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಖಾಡಕ್ಕೆ ಧುಮುಕಲ್ಲ ಎಂದು ರಾಜಸ್ಥಾನ ತಂಡ ಅಧಿಕೃತವಾಗಿ ಮಾಹಿತಿ ನೀಡಿದೆ.
ಸಂಜು ಸ್ಯಾಮ್ಸನ್​ ಪ್ರಯಾಣ ಮಾಡುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಅವರು ಬೆಂಗಳೂರಿಗೆ ಬರುವುದಿಲ್ಲ. ಚಿಕಿತ್ಸೆ ಪಡೆಯುತ್ತ ರಾಜಸ್ಥಾನದಲ್ಲೇ ಉಳಿದುಕೊಳ್ಳಲ್ಲಿದ್ದಾರೆ. ಸಂಜು ಅನುಪಸ್ಥಿತಿಯಲ್ಲಿ ರಿಯಾನ್​ ಪರಾಗ್ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಟೂರ್ನಿ ಆರಂಭದಲ್ಲಿ 3 ಪಂದ್ಯಗಳನ್ನು ರಿಯಾನ್ ಪರಾಗ್ ಕ್ಯಾಪ್ಟನ್ ಆಗಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us