ಹರಿಣಗಳ ನಾಡಲ್ಲಿ ರನ್​​ಗಳ ಹೊಳೆ.. ಸಂಜು, ತಿಲಕ್ ಸಿಡಿಸಿದ ಬೌಂಡರಿ, ಸಿಕ್ಸರ್​ಗಳು ಎಷ್ಟು?

author-image
Bheemappa
Updated On
ಹರಿಣಗಳ ನಾಡಲ್ಲಿ ರನ್​​ಗಳ ಹೊಳೆ.. ಸಂಜು, ತಿಲಕ್ ಸಿಡಿಸಿದ ಬೌಂಡರಿ, ಸಿಕ್ಸರ್​ಗಳು ಎಷ್ಟು?
Advertisment
  • ಈ ಟಿ20 ಪಂದ್ಯದಲ್ಲಿ ಒಟ್ಟು ಎಷ್ಟು ಸಿಕ್ಸರ್, ಬೌಂಡರಿ ಬಂದಿವೆ?
  • ಬೌಂಡರಿ, ಸಿಕ್ಸರ್​ ಮೂಲಕ ಸುಂದರವಾದ ಚಿತ್ತಾರ ಬಿಡಿಸಿದರು
  • ಸಂಜುಗಿಂತ ತಿಲಕ್ ಲೇಟ್ ಬಂದ್ರು ಲೇಟೆಸ್ಟ್ ಬ್ಯಾಟಿಂಗ್ ಟಚ್

ಜೋಹಾನ್ಸ್‌ಬರ್ಗ್ ಸ್ಟೇಡಿಯಂನಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಹಾಗೂ ತಿಲಕ್ ವರ್ಮಾ ಅವರ ದಂಡಯಾತ್ರೆ ನಡೆಯಿತು. 135 ರನ್​ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಭಾರತ ಸರಣಿ ಕೈವಶ ಮಾಡಿಕೊಂಡಿತು. ಹರಿಣಗಳ ಬೌಲಿಂಗ್​ಗೆ ಸಿಡಿದು ನಿಂತ ಈ ಯಂಗ್ ಬ್ಯಾಟ್ಸ್​ಮನ್​ಗಳು ಮೈದಾನದಲ್ಲಿ ಬೌಂಡರಿ, ಸಿಕ್ಸರ್​ ಮೂಲಕ ಸುಂದರವಾದ ಚಿತ್ತಾರ ಬಿಡಿಸಿದರು.

publive-image

ಇದನ್ನೂ ಓದಿ:ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ.. ಚುಮು ಚುಮು ಚಳಿ ಶುರು

ಓಪನರ್ ಸಂಜು ಸ್ಯಾಮ್ಸನ್ ಹಾಗೂ ಒಂಡನ್ ಆಗಿ ಬಂದ ತಿಲಕ್ ವರ್ಮಾ ಜೋಹಾನ್ಸ್‌ಬರ್ಗ್ ಸ್ಟೇಡಿಯಂ ಮೈದಾನವನ್ನು ಇಬ್ಬರೇ ಆಳಿದರು. ಯಾವ ಕಡೆ ಬಾಲ್ ಬರುತ್ತೋ ಆ ಕಡೆ ಬ್ಯಾಟ್ ಬೀಸಿ ಬೌಂಡರಿಗಳಿಗಿಂತ ಸಿಕ್ಸರ್​ಗಳನ್ನೇ ಹೆಚ್ಚು ಸಿಡಿಸಿದರು. ಸಂಜು ಮೊದಲು ಶತಕ ಸಿಡಿಸಿ ಖುಷಿಪಟ್ಟರು. ಆದರೆ ಸಂಜುಗಿಂತ ತಿಲಕ್ ವರ್ಮಾ ತುಸು ಲೇಟ್​ ಆಗಿ ಕ್ರೀಸ್​ಗೆ ಎಂಟ್ರಿ ಕೊಟ್ಟರೂ ಲೇಟೆಸ್ಟ್ ಬ್ಯಾಟಿಂಗ್ ಟಚ್ ಕೊಟ್ಟರು. 3 ಬಿಗ್​ ಲೈಫ್​ಗಳನ್ನ ಪಡೆದ ತಿಲಕ್ ವರ್ಮಾ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಹೀಗಾಗಿಯೇ ಭಾರತ 20 ಓವರ್​​ಗಳಲ್ಲಿ 283 ರನ್​ಗಳನ್ನ ಗಳಿಸಿತು. ​

ಸಂಜು ಸ್ಯಾಮ್ಸನ್ ಓಪನಿಂಗ್ ಆಗಿ ಬಂದು ರನ್​​ಗಳಿಕೆಯಲ್ಲಿ ತಿಲಕ್​ ವರ್ಮಾಗಿಂತ ಮುಂದೆ ಇದ್ದರು. 56 ಎಸೆತಗಳನ್ನ ಎದುರಿಸಿ ಸಂಜು 6 ಬೌಂಡರಿ, 9 ಅತ್ಯದ್ಭುತವಾದ ಸಿಕ್ಸರ್​​ಗಳಿಂದ 109 ರನ್​ ಗಳಿಸಿದರು. ತಿಲಕ್ ವರ್ಮಾ ಕೂಡ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಕೇವಲ 47 ಎಸೆತಗಳಲ್ಲಿ 9 ಬೌಂಡರಿ, 10 ಬಿಗ್​​ ಸಿಕ್ಸರ್​ ಸಮೇತ 120 ರನ್​ ಗಳಿಸಿ ಟಿ20ಯಲ್ಲಿ ವೈಯಕ್ತಿಕ ಗರಿಷ್ಠ ರನ್​ ಗಳಿಸಿದರು.

ಇದನ್ನೂ ಓದಿ: ಸಲ್ಮಾನ್ ಖಾನ್ ಒಬ್ರೇ ಅಲ್ಲ, ಜೈಲಿನಲ್ಲಿನ ಈ ಖದೀಮರನ್ನೂ ಟಾರ್ಗೆಟ್ ಮಾಡಿದ ಬಿಷ್ಣೋಯ್ ಗ್ಯಾಂಗ್

publive-image

ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 2 ಬೌಂಡರಿ, 4 ಸಿಕ್ಸರ್​ಗಳನ್ನ ಬಿಟ್ಟರೇ ಉಳಿದ ಎಲ್ಲ ಫೋರ್, ಸಿಕ್ಸರ್ ಸಂಜು, ತಿಲಕ್ ಬ್ಯಾಟ್​​​ನಿಂದ​ ಬಂದಿವೆ. ಒಟ್ಟು ಈ ಇಬ್ಬರು 19 ಸಿಕ್ಸರ್​ಗಳನ್ನು ಚಚ್ಚಿದ್ದಾರೆ. ಇವೇನೂ ಸಾಧಾರಣ ಸಿಕ್ಸರ್​​ಗಳಲ್ಲ, ಪ್ರೇಕ್ಷರ ಕುಳಿತಲ್ಲಿಗೆ ಬಾಲ್​ ಹೋಗುತ್ತಿತ್ತು. ಇದರ ಜೊತೆಗೆ 15 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಫೋರ್​​ಗಳಿಗಿಂತ ಸಿಕ್ಸರ್​ಗಳ ಸಂಖ್ಯೆ ಹೆಚ್ಚು ಇದೆ. ​ಒಟ್ಟು ಈ ಪಂದ್ಯದಲ್ಲಿ 23 ಸಿಕ್ಸರ್​ಗಳು, 17 ಬೌಂಡರಿಗಳು ಬಂದಿವೆ. ಸದ್ಯ ಇದು ದಾಖಲೆ ಪಟ್ಟಿಯಲ್ಲಿ ಸೇರಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment