ಅನ್ಯಾಯ, ಅನ್ಯಾಯ, ಅನ್ಯಾಯ, ಸ್ಯಾಮ್ಸನ್ಗೆ ಅನ್ಯಾಯ
9 ವರ್ಷ.. 8 ನಾಯಕರಿಂದ ಸಂಜು ಸ್ಯಾಮ್ಸನ್ಗೆ ಡ್ರಾಪ್ ಶಿಕ್ಷೆ
ಸಂಜು ಭಾರತದ ಮೋಸ್ಟ್ ಅನ್ಲಕ್ಕಿ ಪ್ಲೇಯರ್..!
ಕ್ರಿಕೆಟರ್ಸ್ ಲೈಫಲ್ಲಿ ಕಡೆಗಣನೆ ಸಹಜ. ಅನ್ಯಾಯವು ತಪ್ಪಿದ್ದಲ್ಲ. ಆದ್ರೆ ಅನ್ಯಾಯವೇ ಪರಿಪಾಠವಾದ್ರೆ? ಬಿಗ್ ಹಿಟ್ಟರ್ ಸಂಜು ಸ್ಯಾಮ್ಸನ್ ಲೈಫಲ್ಲಿ ಆಗ್ತಿದೋದು ಇದೆ. ಸಂಜು ಕ್ರಿಕೆಟ್ ಕರಿಯರ್ನಲ್ಲಿ ಅರ್ಧಶ ಡಜನ್ಗೂ ಅಧಿಕ ನಾಯಕರಿಂದ ಮೋಸಕ್ಕೊಳಗಾಗಿದ್ದಾರೆ. ಆ ಅನ್ಯಾಯದ ಕಹಾನಿ ಇಲ್ಲಿದೆ.
ಅನ್ಯಾಯ, ಅನ್ಯಾಯ, ಅನ್ಯಾಯ, ಅನ್ಯಾಯ..!
ಸಂಜು ಸ್ಯಾಮ್ಸನ್. ಈ ಕೇರಳ ಕ್ರಿಕೆಟರ್ ವೆಲ್ ಟ್ಯಾಲೆಂಟೆಡ್ ಕ್ರಿಕೆಟರ್ ಅನ್ನೋದು ಎಷ್ಟು ಸತ್ಯನೋ, ಅವರೋರ್ವ ಅನ್ಲಕ್ಕಿಯೆಸ್ಟ್ ಕ್ರಿಕೆಟ್ ಅನ್ನೋದು ಕೂಡ ಅಷ್ಟೇ ಸತ್ಯ. ಇಂಡಿಯನ್ ಕ್ರಿಕೆಟ್ ಹಿಸ್ಟರಿಯಲ್ಲಿ ಈ ಬಿಗ್ ಹಿಟ್ಟರ್ನಷ್ಟು ಮೋಸಕ್ಕೊಳಗಾದ, ಅನ್ಯಾಯಕ್ಕೊಳಗಾದ ಕ್ರಿಕೆಟಿಗನ ಮತ್ತೊಬ್ಬ ಇಲ್ಲ. ಪ್ರತಿಭೆ ಇದ್ದರೂ ಸೂಕ್ತ ಅವಕಾಶ ಸಿಗ್ತಿಲ್ಲ. ಆಗೊಂದು, ಈಗೊಂದು ಚಾನ್ಸ್. ಆಡಿದ್ದಕ್ಕಿಂತ ಬೆಂಚ್ ಕಾದಿದ್ದೇ ಹೆಚ್ಚು. ಪ್ರಸಕ್ತ ದುಲೀಪ್ ಟ್ರೋಫಿಯಲ್ಲಿ ಮತ್ತದೇ ದುಸ್ಥಿತಿ ಬಂದೊದಗಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡದಿದ್ದಕ್ಕೆ ಬೇಸರ; ಸ್ಟಾರ್ ಆಲ್ರೌಂಡರ್ ಕ್ರಿಕೆಟ್ಗೆ ಗುಡ್ಬೈ
ಸಂಜು ಸ್ಯಾಮ್ಸನ್ ಕಡೆಗಣಿಸಿದ ಕ್ಯಾಪ್ಟನ್ ಶ್ರೇಯಸ್
ಇಂಜುರಿಗೊಳಗಾದ ಇಶಾನ್ ಕಿಶನ್ ದುಲೀಪ್ ಟ್ರೋಫಿಯಿಂದ ಹೊರಬಿದ್ರು. ಇವರ ಬದಲಿಗೆ ಸಂಜು ಸ್ಯಾಮ್ಸನ್ ದುಲೀಪ್ ಇಂಡಿಯಾ ಡಿ ತಂಡಕ್ಕೆ ಸೆಲೆಕ್ಟ್ ಆದ್ರು. ಆದ್ರೆ ಯಾವುದೇ ಪ್ರಯೋಜನಕ್ಕೆ ಬರ್ಲಿಲ್ಲ. ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ಸ್ಯಾಮ್ಸನ್ರನ್ನ ಕಡೆಗಣಿಸಿದ್ರು. ಬೆಂಚ್ ಕಾದ ಸಂಜುಗೆ ಮತ್ತೆ ಅನ್ಯಾಯ ತಪ್ಪಲಿಲ್ಲ. ಸ್ಯಾಮ್ಸನ್ ಕಡೆಗಣನೆಯ ಅವಮಾನಕ್ಕೆ ಒಳಗಾಗ್ತಿರೋದು ಇದೇ ಮೊದಲೇನಲ್ಲ. 9 ವರ್ಷಗಳ ಕ್ರಿಕೆಟ್ ಕರಿಯರ್ನಲ್ಲಿ ಇನ್ನೂ ಏಳು ನಾಯಕರಿಂದ ಅನ್ಯಾಯಕ್ಕೊಳಗಾಗಿದ್ದಾರೆ.
ಲೆಜೆಂಡ್ರಿ ಧೋನಿ ಕ್ಯಾಪ್ಟನ್ಸಿಯಲ್ಲಿ ಡ್ರಾಪ್
ಸ್ಯಾಮನ್ಸ್ ಹೆಚ್ಚು ಅನ್ಯಾಯಕ್ಕೊಳಗಾದವರ ಕ್ಯಾಪ್ಟನ್ಸಿ ಲಿಸ್ಟ್ನಲ್ಲಿ ಧೋನಿ ಹೆಸರು ಮುಂಚೂಣಿಯಲ್ಲಿರುತ್ತೆ. ಮಾಹಿ ನಾಯಕತ್ವದಲ್ಲೇ ಸಂಜು ಅಂತಾರಾಷ್ಟ್ರೀಯ ಕ್ರಿಕೆಟ್ ಡೆಬ್ಯು ಮಾಡಿದ್ರೂ ಹೆಚ್ಚು ಚಾನ್ಸ್ ಸಿಗಲಿಲ್ಲ. ಸರಣಿಯಿಂದ ಸರಣಿಗೆ ಸಂಜು ಆಯ್ಕೆಯಾದ್ರು ಹನ್ನೊಂದರ ಬಳಗದಲ್ಲಿ ಆಡಿಸದೇ ಡ್ರಾಪ್ ಮೇಲೆ ಡ್ರಾಪ್ ಮಾಡಲಾಯ್ತು. ಸ್ಯಾಮ್ಸನ್ ಪ್ರತಿಭೆಯನ್ನ ಧೋನಿ ಗುರುತಿಸುವಲ್ಲಿ ಫೇಲಾದ್ರು.
ಕೊಹ್ಲಿ ನಾಯಕತ್ವದಲ್ಲಿ ಸಂಜುಗೆ ತಪ್ಪದ ಡ್ರಾಪ್ ಶಿಕ್ಷೆ
ಕಿಂಗ್ ಕೊಹ್ಲಿ ನಾಯಕತ್ವದಲ್ಲೂ ಸ್ಯಾಮ್ಸನ್ಗೆ ಡ್ರಾಪ್ ಶಿಕ್ಷೆ ತಪ್ಪಲಿಲ್ಲ. ವಿರಾಟ್ 8 ವರ್ಷಗಳ ಕಾಲ ನಾಯಕನಾಗಿ ತಂಡವನ್ನ ಮುನ್ನಡೆಸಿದ್ರು. ಸಂಜು ರಾ ಟ್ಯಾಲೆಂಟ್ ಅಂತ ಗೊತ್ತಿದ್ರೂ ಬೆಂಚ್ಗೆ ಸೀಮಿತಗೊಳಿಸಿದ್ರು. ಅವರ ಮೇಲೆ ನಂಬಿಕೆ ಇಟ್ಟು ಹೆಚ್ಚು ಅವಕಾಶಗಳನ್ನ ನೀಡದೇ ನಿರ್ಲಕ್ಷಿಸಿದ್ರು. ಸಂಜು ಕಡೆಗಣನೆ ವಿಚಾರವಾಗಿ ಕೊಹ್ಲಿ ಅದೆಷ್ಟೋ ಬಾರಿ ಟ್ರೋಲ್ ಆಗಿದ್ದಿದೆ.
ಇದನ್ನೂ ಓದಿ:ಇಂಗ್ಲೆಂಡ್ನ ಸ್ಟಾರ್ ಆಟಗಾರನ ಮೇಲೆ ಕಣ್ಣಿಟ್ಟ ಆರ್ಸಿಬಿ; ಇವರು ಬಂದರೆ ಒಂದೇ ಕಲ್ಲಲ್ಲಿ 2 ಹಕ್ಕಿ..!
ರೋಹಿತ್ ಕ್ಯಾಪ್ಟನ್ಸಿಯಲ್ಲಿ ಅದೇ ರಾಗ ಅದೇ ಹಾಡು
ಕೊಹ್ಲಿ ಬಳಿಕ ತಂಡದ ಚುಕ್ಕಾಣಿ ಹಿಡಿದಿರೋ ರೋಹಿತ್ ಶರ್ಮಾ ಕೂಡ ಸ್ಯಾಮ್ಸನ್ಗೆ ಡ್ರಾಪ್ ಶಿಕ್ಷೆ ಕೊಟ್ಟಿದ್ದಾರೆ. ಆಯ್ಕೆ ಸಮಿತಿ ಸ್ಥಾನ ನೀಡಿದ್ರೂ ಪ್ಲೇಯಿಂಗ್-11 ನಲ್ಲಿ ಆಡಿಸದೇ ಅನ್ಯಾಯ ಮಾಡಿದ್ದಾರೆ. ನಾಮಾಕಾವಸ್ತೆಗೆ ಸ್ಯಾಮ್ಸನ್ರನ್ನ ಆಯ್ಕೆ ಮಾಡಿ, ಅಮಾವಾಸ್ಯೆ, ಹುಣ್ಣಿಮೆಗೊಂದು ಚಾನ್ಸ್ ಕೊಡ್ತಿದ್ದಾರೆ.
ಹಾರ್ದಿಕ್, ಸೂರ್ಯ ಮತ್ತು ರಾಹುಲ್ ನಾಯಕತ್ವದಡಿ ಅನ್ಯಾಯ
ಬರೀ ಧೋನಿ, ರೋಹಿತ್ ಹಾಗೂ ವಿರಾಟ್ ಕೊಹ್ಲಿ ಅಷ್ಟೇ ಅಲ್ಲ. ಹಾರ್ದಿಕ್ ಪಾಂಡ್ಯ, ಕನ್ನಡಿಗ ಕೆಲ್ ರಾಹುಲ್, ಸೂರ್ಯಕುಮಾರ್ ಯಾದವ್ ಹಾಗೂ ರಿಷಬ್ ನಾಯಕತ್ವದಲ್ಲಿ ಸ್ಯಾಮ್ಸನ್ ಆಡಿದ್ದಾರೆ. ಈ ಎಲ್ಲಾ ನಾಯಕರುಗಳಿಂದ ಕೂಡ ಸಂಜುಗೆ ಮೋಸವಾಗಿದೆ.
ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 8 ನಾಯಕರಿಂದ ಪವರ್ ಹಿಟ್ಟರ್ಗೆ ಅನ್ಯಾಯವಾಗಿದೆ. ಇಷ್ಟಾದ್ರು ಸ್ಯಾಮ್ಸನ್ಸ್ ಮಾತ್ರ ಕುಗ್ಗಿಲ್ಲ. ಕಡೆಗಣನೆಗೆ ತಲೆಕೆಡಿಸಿಕೊಳ್ಳದೇ ಪರ್ಫಾಮೆನ್ಸ್ನಿಂದಲೇ ಸೆಲೆಕ್ಟರ್ಸ್ ಮನ ಗೆಲ್ತಿದ್ದಾರೆ. ಕ್ಯಾಪ್ಟನ್ಸ್ ಅನ್ನಿಸಿಕೊಂಡೋರು ಮಾತ್ರ ಇದನ್ನ ಅರ್ಥೈಸಿಕೊಳ್ಳದಿರೋದು ನಿಜಕ್ಕೂ ವಿಪರ್ಯಾಸವೇ ಸೈ.
ಇದನ್ನೂ ಓದಿ:ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್