newsfirstkannada.com

ಸಂಜು ಫ್ಯಾನ್ಸ್​ ಬೇಸ್​ ವಿರಾಟ್​, ರೋಹಿತ್​ಗೂ ಕಮ್ಮಿಯಿಲ್ಲ.. ಸ್ಯಾಮ್ಸನ್​ ಸರಳತೆಗೆ​ ಅಭಿಮಾನಿಗಳು ಫಿದಾ!

Share :

Published January 12, 2024 at 3:28pm

    2015ರಲ್ಲೇ ಟೀಮ್​ ಇಂಡಿಯಾ ಎಂಟ್ರಿ ಕೊಟ್ರೂ ಚಾನ್ಸ್​ ಸಿಕ್ಕಿದ್ದು ಕಮ್ಮಿ

    ಸಂಜುವಿನ ಚಾಣಾಕ್ಷ ವಿಕೆಟ್​ ಕೀಪಿಂಗ್ ಜೊತೆ ಮಿಂಚಿನ ಬ್ಯಾಟಿಂಗ್

    ಆಟೋಗ್ರಾಫ್​ ನಿರೀಕ್ಷೆಯಲ್ಲಿದ್ದ ಫ್ಯಾನ್​ಗೆ ಸಂಜು, ಸ್ಪೆಷಲ್​ ಕ್ಯಾಪ್ ಗಿಫ್ಟ್​​​

ಟೀಮ್​ ಇಂಡಿಯಾ ಸೂಪರ್​ ಸ್ಟಾರ್​ಗಳಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾರ ಆಟದ ಮೋಡಿಗೆ ಬಲಿಯಾಗದವರೇ ಇಲ್ಲ. ತಮ್ಮ ಅಮೋಘ ಆಟದಿಂದಲೇ ವಿಶ್ವಾದ್ಯಂತ ಅಪಾರ ಅಭಿಮಾನಿಗಳ ಬಳಗವನ್ನ ಸಂಪಾದಿಸಿದ್ದಾರೆ. ಆದ್ರೆ, ಈ ಇಬ್ಬರು ಲೆಜೆಂಡ್​​ಗಳು ಫ್ಯಾನ್ಸ್​ಗೆ ಸಿಗೋದು ತುಂಬಾ ಕಡಿಮೆ. ಆದ್ರೆ, ಟೀಮ್​ ಇಂಡಿಯಾದ ಈ ಸ್ಟಾರ್​ ಸದಾ ಕಾಲ ಫ್ಯಾನ್ಸ್​ಗೆ ಲಭ್ಯ. ಈತನ ಫ್ಯಾನ್ಸ್​ ಬೇಸ್​, ರೋಹಿತ್​, ಕೊಹ್ಲಿಗಿಂತ ಏನು ಕಡಿಮೆಯಿಲ್ಲ.

ಸಂಜು ಸ್ಯಾಮ್ಸನ್​ 21 ವರ್ಷ ವಯಸ್ಸಿಗೆ ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟ ಟ್ಯಾಲೆಂಟೆಡ್​ ಬ್ಯಾಟ್ಸ್​ಮನ್​. ಚಾಣಾಕ್ಷ ವಿಕೆಟ್​ ಕೀಪಿಂಗ್​ ಸ್ಕಿಲ್​ನಿಂದಲೇ ಮಿಂಚು ಹರಿಸಿದ ಆಟಗಾರ. ಆದ್ರೆ, ದುರಾದೃಷ್ಟವೋ ಏನೋ 2015ರಲ್ಲೇ ಟೀಮ್​ ಇಂಡಿಯಾ ಎಂಟ್ರಿ ಕೊಟ್ಟರೋ ಚಾನ್ಸ್​ ಸಿಕ್ಕಿದ್ದು ಅಲ್ಲೊಂದು, ಇಲ್ಲೊಂದು, ಈಗಲೂ ತಂಡದಲ್ಲೇ ಇದ್ದಾರೆ. ಆದ್ರೆ, ಸ್ಥಾನ ಮಾತ್ರ ಕನ್​ಫರ್ಮ್​ ಇಲ್ಲ. ಆದ್ರೆ, ಫ್ಯಾನ್ಸ್​ ಬೇಸ್​ ಮಾತ್ರ ಯಾವ ಸೂಪರ್​​ ಸ್ಟಾರ್​ಗೂ ಕಡಿಮೆಯಿಲ್ಲ.

ಆಡಿರೋದು ಕೆಲವೇ ಪಂದ್ಯ, ಆದ್ರೂ ಫ್ಯಾನ್ಸ್​​​ ಫೇವರಿಟ್​​​.!

ಟೀಮ್​ ಇಂಡಿಯಾದಿಂದ ಸಂಜು ಸ್ಯಾಮ್ಸನ್​ ಡ್ರಾಪ್​ ಆದ್ರೆ ಸಾಕು ಸೋಷಿಯಲ್​ ಮೀಡಿಯಾಗಳಲ್ಲಿ ಟೀಕೆಗಳ ಸುರಿಮಳೆಯೇ ಸುರಿಯುತ್ತೆ. ಟೀಮ್​ ಮ್ಯಾನೇಜ್​ಮೆಂಟ್​ ನಡೆಗೆ ಆಕ್ರೋಶದ ಜ್ವಾಲೆ ಉಕ್ಕುತ್ತೆ. ಸ್ಯಾಮ್ಸನ್​​ ಫ್ಯಾನ್​ ಆರ್ಮಿಗಿರೋ ಶಕ್ತಿಯದು. ಆಡಿದ್ದು ಕೆಲವೇ ಪಂದ್ಯವಾದ್ರೂ ಇಷ್ಟು ಫ್ಯಾನ್ಸ್ ಹೇಗೆ ಅಂತೀರಾ.? ಆಟದಿಂದಲ್ಲ.. ತನ್ನ ನಡೆ-ನುಡಿಯಿಂದಲೇ ಸಂಜು ಫ್ಯಾನ್ಸ್​ ಮನ ಗೆದ್ದಿದ್ದಾರೆ.

ವಿಶೇಷ ಚೇತನ ಫ್ಯಾನ್​​​ಗೆ ಕ್ಯಾಪ್​ ಗಿಫ್ಟ್​.!

ಸಂಜುವಿನ ಸರಳ ನಡೆಗೆ ಲೇಟೆಸ್ಟ್​ ಎಕ್ಸಾಂಪಲ್​ ಇದು. ಕೇರಳ ಪರ ರಣಜಿ ಆಡೋ ವೇಳೆ ಸಂಜುವನ್ನ ಭೇಟಿಯಾಗಲು ವಿಶೇಷ ಚೇತನ ಫ್ಯಾನ್​​​ ಒಬ್ರು ಬಂದಿದ್ರು. ಒಂದು ಆಟೋಗ್ರಾಫ್​ ನಿರೀಕ್ಷೆಯಲ್ಲಿ ಬಂದ ಆ ಫ್ಯಾನ್​ಗೆ ಸಂಜು, ಸ್ಪೆಷಲ್​ ಕ್ಯಾಪ್​​ವೊಂದನ್ನ ಗಿಫ್ಟ್​​ ನೀಡಿದ್ರು. ಸಂಜುವಿನ ಸರಳತೆಗೆ ಅಭಿಮಾನಿಯ ಹೃದಯವೇ ತುಂಬಿ ಬಂತು.

ಅಭಿಮಾನಿಗಳೇ ಸಂಜುವಿನ ಸ್ನೇಹಿತರು.!

ಸಂಜು ಸ್ಯಾಮ್ಸನ್​ ಅಭಿಮಾನಿಗಳನ್ನ ಸ್ನೇಹಿತರಂತೆ ಟ್ರೀಟ್​ ಮಾಡ್ತಾರೆ. ಅಭಿಮಾನಿಗಳು ಆಟೋಗ್ರಾಫ್​, ಪೋಟೋಗ್ರಾಫ್​ ಕೇಳಿದ್ರೆ ಹಿಂದೆ ಮುಂದೆ ನೋಡಲ್ಲ. ಕಳೆದ ಸಾಲುಗಟ್ಟಿ ನಿಂತಿದ್ದ ಅಭಿಮಾನಿಗಳನ್ನ ಭೇಟಿಯಾಗಿದ್ದೇ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ಕೇವಲ ಆಟೋಗ್ರಾಫ್​, ಫೋಟೋಗ್ರಾಫ್​ ಮಾತ್ರವಲ್ಲ.. ಪುಟ್ಟ ಮಕ್ಕಳು ಕಂಡ್ರೆ ಎತ್ತಿ ಮುದ್ದಾಡೋಕು ಹಿಂದೆ ಮುಂದೆ ನೋಡಲ್ಲ.

ಯುವ ಆಟಗಾರರ ಪಾಲಿಗೆ ಸ್ಪೂರ್ತಿಯ ಚಿಲುಮೆ.!

ಟೀಮ್​ ಇಂಡಿಯಾ ಪ್ರತಿನಿಧಿಸಿ ಕೇರಳದ ಸಂಖ್ಯೆ ತೀರಾ ಕಡಿಮೆಯಿದೆ. ಹೀಗಾಗಿ ಕ್ರಿಕೆಟ್​ ಮೇಲೆ ಒಲವು ಬೆಳೆಸಿಕೊಂಡ ಕೇರಳದ ಯುವ ಆಟಗಾರರ ಪಾಲಿಗೆ ಸಂಜು ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಸಂಜು ಕೂಡ ಸಮಯ ಸಿಕ್ಕಾಗ ಯುವ ಆಟಗಾರೊಂದಿಗೆ ಬೆರೆಯುತ್ತಾರೆ. ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​​ ತಂಡವನ್ನ ಪ್ರತಿನಿಧಿಸೋ ಸಂಜುಗೆ ದೇಶದೆಲ್ಲೆಡೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಸಂಜು ಯಾವ ರಾಜ್ಯಕ್ಕೇ ಹೋದ್ರೂ ಗ್ರ್ಯಾಂಡ್​ ವೆಲ್​ಕಮ್​ ಫಿಕ್ಸ್​. ಫ್ಯಾನ್ಸ್​ ಜಮಾಯಿಸೋದಂತೂ ಮಾಮೂಲಿ.

ದೇಶ-ವಿದೇಶ ಎಲ್ಲೇ ಹೋದ್ರೂ ಫ್ಯಾನ್ಸ್​ ದಂಡು

ಭಾರತದ ನೆಲದಲ್ಲಿ ಮಾತ್ರವಲ್ಲ, ವಿದೇಶಕ್ಕೆ ಹೋದ್ರೂ ಸಂಜು ಸ್ಯಾಮ್ಸನ್​ ಅಭಿಮಾನಿಗಳಿಗೆ ಬರವೇ ಇಲ್ಲ. ಸಂಜು ಆಟವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ದಂಡೇ ಬರುತ್ತೆ. ಆ ಅಭಿಮಾನಿಗಳಿಗೂ ಸಂಜು ನಿರಾಸೆ ಮಾಡಲ್ಲ. ಆಡಿರೋದು ಕೆಲವೇ ಪಂದ್ಯವನ್ನಾದ್ರೂ ಅಭಿಮಾನಿಗಳ ಸಂಪಾದನೆ ವಿಚಾರದಲ್ಲಿ ಸಂಜು ಸ್ಯಾಮ್ಸನ್​ ಹಿಂದೆ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಸಂಜು ಹೆಚ್ಚು ಅವಕಾಶಗಳು ಸಿಗಲಿ. ತನ್ನ ಆಟದ ಮೂಲಕ ಅಭಿಮಾನಿಗಳನ್ನ ಸಂಜು ಇನ್ನಷ್ಟು ರಂಜಿಸಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸಂಜು ಫ್ಯಾನ್ಸ್​ ಬೇಸ್​ ವಿರಾಟ್​, ರೋಹಿತ್​ಗೂ ಕಮ್ಮಿಯಿಲ್ಲ.. ಸ್ಯಾಮ್ಸನ್​ ಸರಳತೆಗೆ​ ಅಭಿಮಾನಿಗಳು ಫಿದಾ!

https://newsfirstlive.com/wp-content/uploads/2024/01/SANJU_SAMSON_ROHIT_KOHLI.jpg

Load More