ಸಂಜು ಸಿಡಿಸಿದ ಪವರ್ ಫುಲ್ ಸಿಕ್ಸರ್​.. ಮಹಿಳಾ ಅಭಿಮಾನಿಗೆ ಬಡಿದ ಚೆಂಡು, ನೋವಿನಿಂದ ಕಣ್ಣೀರು

author-image
Bheemappa
Updated On
ಸಂಜು ಸಿಡಿಸಿದ ಪವರ್ ಫುಲ್ ಸಿಕ್ಸರ್​.. ಮಹಿಳಾ ಅಭಿಮಾನಿಗೆ ಬಡಿದ ಚೆಂಡು, ನೋವಿನಿಂದ ಕಣ್ಣೀರು
Advertisment
  • ಮಹಿಳೆ ಬಳಿಗೆ ಹೋಗಿ ಕ್ಷಮೆ ಕೇಳಿದರಾ ಯಂಗ್ ಬ್ಯಾಟರ್..?
  • ನಾಲ್ಕು ಪಂದ್ಯಗಳ ಸರಣಿಯಲ್ಲಿ ಎರಡು ಶತಕ ಗಳಿಸಿದ ಸಂಜು
  • ತನ್ನ ಶಕ್ತಿ ಮೀರಿ ಸಿಕ್ಸರ್​ ಬಾರಿಸಿದ್ದ ಯುವ ಬ್ಯಾಟರ್ ಸ್ಯಾಮ್ಸನ್

ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಕೊನೆ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸಿಕ್ಸರ್​ ಮೇಲೆ ಸಿಕ್ಸರ್ ಬಾರಿಸಿದರು. ಸರಣಿಯಲ್ಲಿ ಒಂದು ಸೆಂಚುರಿ ಸಿಡಿಸಿದ್ದ ಯುವ ಬ್ಯಾಟರ್ ಮತ್ತೊಂದು ಶತಕವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಆಫ್ರಿಕಾ ಬೌಲರ್​ಗಳನ್ನ ಕಾಡಿದ ಸಂಜು ಕೊನೆವರೆಗೂ ಅಜೇಯರಾಗಿಯೇ ಉಳಿದರು. ಆದರೆ ಪಂದ್ಯದ ವೇಳೆ ಸಿಕ್ಸ್ ಬಾರಿಸಿದ್ದ ಸಂಜು ಸ್ಯಾಮ್ಸನ್ ಕೊಂಚ ಆತಂಕಕ್ಕೂ ಒಳಗಾದರು.

ಭಾರತ ತಂಡದ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್​ ಹೊಡೆದ ಸಿಕ್ಸರ್ ಬಾಲ್ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರ ಕೆನ್ನೆಗೆ ಬಿದ್ದಿದೆ. ಪಂದ್ಯದ 10ನೇ ಓವರ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಂಜು ಸ್ಯಾಮ್ಸನ್ ಹೊಡಿಬಡಿ ಬ್ಯಾಟಿಂಗ್​ಗೆ ಮುಂದಾಗಿದ್ದರು. ಯಾವ ರೀತಿ ಚೆಂಡು ಬಂದರು ಅದನ್ನು ಬೌಂಡರಿ ಗೆರೆ ದಾಟಿಸುವುದಕ್ಕೆ ಮುಂದಾಗಿದ್ದರು. 10ನೇ ಓವರ್​ ಮಾಡುತ್ತಿದ್ದ ಆಫ್ರಿಕಾದ ಟ್ರಿಸ್ಟಾನ್ ಸ್ಟಬ್ಸ್ ಬೌಲಿಂಗ್​ನಲ್ಲಿ ಸಂಜು ಬಿಗ್ ಹಿಟ್ ಮಾಡಿದರು. ಆದರೆ ಆ ಬಾಲ್ ನೇರ ಹೋಗಿ ಪಂದ್ಯ ವೀಕ್ಷಣೆ ಮಾಡಲು ಬಂದಿದ್ದ ಮಹಿಳಾ ಅಭಿಮಾನಿ ಕೆನ್ನೆಗೆ ಬಡಿದಿದೆ.

ಇದನ್ನೂ ಓದಿ:ಹರಿಣಗಳ ನಾಡಲ್ಲಿ ರನ್​​ಗಳ ಹೊಳೆ.. ಸಂಜು, ತಿಲಕ್ ಸಿಡಿಸಿದ ಬೌಂಡರಿ, ಸಿಕ್ಸರ್​ಗಳು ಎಷ್ಟು?

publive-image

ಇದರಿಂದ ತಕ್ಷಣ ತೀವ್ರ ನೋವಿಗೆ ಒಳಗಾದ ಮಹಿಳೆ ಅಳಲು ಶುರು ಮಾಡಿದರು. ಕ್ರೀಸ್​​ನಿಂದಲೇ ಇದನ್ನು ಗಮನಿಸಿದ ಸಂಜು ಸ್ಯಾಮ್ಸನ್ ಸಪ್ಪೆ ಮುಖದಿಂದಲೇ ನೋಡಿದರು. ಕೈ ಮೇಲೆತ್ತಿ ಕ್ಷಮೆ ಎನ್ನುವಂತೆ ಸನ್ನೆ ಮಾಡಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಂದ್ಯ ಮುಗಿದ ಬಳಿಕ ಸಂಜು ಅವರು ಮಹಿಳೆಯನ್ನು ಮೀಟ್ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.

ಈ ಕೊನೆ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಇಬ್ಬರು ಶತಕ ಸಿಡಿಸಿ ಭಾರತದ ಗೆಲುವಿಗೆ ಕಾರಣರಾದರು. ಇನ್ನು ಸೌತ್ ಆಫ್ರಿಕಾ ವಿರುದ್ಧದ ಈ ಸರಣಿಯಲ್ಲಿ ಟೀಮ್ ಇಂಡಿಯಾ 3-1 ಅಂತರದಿಂದ ಟ್ರೋಫಿ ಗೆದ್ದುಕೊಂಡಿದೆ. 4 ಪಂದ್ಯಗಳಲ್ಲಿ ಸಂಜು ಎರಡು ಶತಕ ಸಿಡಿಸಿದ್ದಾರೆ.


">November 15, 2024

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment