ಲವ್ವರ್​ ಜೊತೆ AC ಲಾಡ್ಜ್​ನಲ್ಲಿ​ದ್ದ.. ಸುದ್ದಗುಂಟೆ ಪಾಳ್ಯದ ಕಾಮುಕನ ಕ್ಲೂ ಕೊಟ್ಟಿದ್ದು ಒಂದು ಸಿಮ್!

author-image
admin
Updated On
ಲವ್ವರ್​ ಜೊತೆ AC ಲಾಡ್ಜ್​ನಲ್ಲಿ​ದ್ದ.. ಸುದ್ದಗುಂಟೆ ಪಾಳ್ಯದ ಕಾಮುಕನ ಕ್ಲೂ ಕೊಟ್ಟಿದ್ದು ಒಂದು ಸಿಮ್!
Advertisment
  • ಲವರ್​ ಜೊತೆ ಎಸಿ ಲಾಡ್ಜ್​ನಲ್ಲಿ​ದ್ದ.. ನೀಚನ ಕ್ಲೂ ಕೊಟ್ಟಿದ್ದೇ ಸಿಮ್..​!
  • ಕಿರಾತಕನನ್ನ ಲಾಕ್ ಮಾಡಿ ಬೆಂಗಳೂರಿಗೆ ಕರೆತಂದಿರುವ ಪೊಲೀಸರು
  • ರಾತ್ರಿ ನೀಚ ಕೆಲಸ ಮಾಡಿದ್ದ ಸಂತೋಷ್ ಇದೇ ಬೈಕ್​ನಲ್ಲೇ ಎಸ್ಕೇಪ್!

ಬೆಂಗಳೂರು: ಸುದ್ದಗುಂಟೆ ಪಾಳ್ಯದಲ್ಲಿ ಯುವತಿಯ ಖಾಸಗಿ ಅಂಗ ಮುಟ್ಟಿದ್ದ ಕಾಮುಕನ ಕೈಗೆ ಕೋಳ ಬಿದ್ದಿದೆ. ಇಲ್ಲಿ, ಮಾಡಬಾರದ ಕೆಲಸ ಮಾಡಿ ಊರು ಬಿಟ್ಟಿದ್ದ ಕಿರಾತಕ 10 ದಿನಗಳ ಬಳಿಕ ತಗ್ಲಾಕೊಂಡಿದ್ದಾನೆ. ಲವ್ವರ್ ಜೊತೆ ಕೇರಳ ಬಸ್​ ಹತ್ತಿದ್ದ ಆ ನೀಚ ಎಸಿ ಲಾಡ್ಜ್​​ನಲ್ಲಿ ಲಲ್ಲೆ ಹೊಡೆಯುತ್ತಿದ್ದ. ಕೊನೆಗೂ ಕೊಳಕು ಕೆಲಸ ಮಾಡಿದ್ದ ಕಿರಾತಕನನ್ನ ಲಾಕ್ ಮಾಡಿದ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

publive-image

ಎಂತಹ ವಿಕೃತ ಕಣ್ರಿ ಇದು.. ಆ ಕತ್ತಲರಾತ್ರಿಯಲ್ಲಿ ಕಾಮಕ್ರಿಮಿ ಹೆಣ್ಣುಮಗಳಿಗೆ ಕೊಟ್ಟಿದ್ದು ಎಂತಹ ಹಿಂಸೆ ಅಂತೀರಾ. ಇದೊಂದು ಘಟನೆ ಸಿಲಿಕಾನ್ ಸಿಟಿ ಜನ್ರ ನೆಮ್ಮದಿ ಹಾಳು ಮಾಡಿತ್ತು. ಈ ಸಿಸಿಟಿವಿ ಬಿಟ್ರೆ ಪೊಲೀಸರಿಗೆ ಅವನನ್ನ ಹಿಡಿಯೋದು ಚಾಲೆಂಜಿಂಗ್​ ಆಗಿತ್ತು. ಕೊನೆಗೂ ಕೇರಳದಲ್ಲಿ ಅವಿತು ಕೂತಿದ್ದ ಇದೇ ನೀಚ ಸಂತೋಷ್ ಡೇನಿಯಲ್​ನ ಲಾಕ್ ಮಾಡಿದ್ದಾರೆ.

publive-image

‘10’ ದಿನ.. 700 ಸಿಸಿಟಿವಿ ಸಾಕ್ಷಿ.. ಕೇರಳದಲ್ಲಿದ್ದ ಕಾಮುಕ ಲಾಕ್..!
ಲವರ್​ ಜೊತೆ ಎಸಿ ಲಾಡ್ಜ್​ನಲ್ಲಿ​ದ್ದ.. ನೀಚನ ಕ್ಲೂ ಕೊಟ್ಟಿದ್ದೇ ಸಿಮ್..​!
ಈ ವಿಕೃತನನ್ನ ಹಿಡಿಯೋದಕ್ಕೆ ಪೊಲೀಸ್ರು ಏನಿಲ್ಲಾಂದ್ರು 700 ಸಿಸಿಟಿವಿಗಳನ್ನ ತಡಕಾಡಿದ್ರು. ಇಷ್ಟಾದ್ರು ಹತ್ತು ದಿನ.. 10 ದಿನ ಒಂದೇ ಒಂದು ಕ್ಲೂ ಬಿಡದೇ ಓಡಾಡಿದ್ದ. ಅಷ್ಟಕ್ಕೂ ಆವತ್ತು ರಾತ್ರಿ ನೀಚ ಕೆಲಸ ಮಾಡಿದ್ದ ಸಂತೋಷ್ ಇದೇ ಬೈಕ್​ನಲ್ಲೇ ಎಸ್ಕೇಪ್ ಆದವನು ತಲುಪಿದ್ದು ಕೇರಳಕ್ಕೆ.

publive-image

ಸಂತೋಷ ಅಲ್ಲ ಇವ್ನು ‘ಕಾಮುಕ’..!
ಅಷ್ಟಕ್ಕೂ ಈ ನೀಚನಿಗೆ ಒಬ್ಳು ಲವರ್​ ಇದ್ದಳು. ಅವ್ಳು ಹೋಮ್​ಗಾರ್ಡ್​ ಆಗಿದ್ಲು.. ಆಕೆನೇ ಸಂತೋಷ್​ ತಪ್ಪಿಸಿಕೊಳ್ಳೋದಕ್ಕೆ ಸಹಾಯ ಮಾಡ್ತಿದ್ಲು. ಜಸ್ಟ್​ 2 ದಿನದ ಬಳಿಕ ಹೊಸ ಸಿಮ್ ಖರೀದಿಸಿ ಪ್ರಿಯಕರನಿಗೆ ಕೊಟ್ಟಿದ್ಲು. ಅಷ್ಟೇ ಅಲ್ಲ, ಸಂತೋಷನ ಜೊತೆ ಬಸ್​ನಲ್ಲಿ ಕೇರಳಕ್ಕೂ ಎಸ್ಕೇಪ್ ಆಗಿದ್ಲು. ಈ ಗ್ಯಾಪಲ್ಲೇ ಹೊಸ ಸಿಮ್​ನಲ್ಲಿ ತಾಯಿಗೆ ಕರೆ ಮಾಡಿದ್ದ ಕಿರಾತಕ, ಕೇರಳದಲ್ಲಿದ್ದೇನೆ ಅಂದಿದ್ದ. ಇದನ್ನ ಆಧರಿಸಿ ನಂಬರ್ ಟ್ರೇಸ್ ಮಾಡಿದ್ದ ಪೊಲೀಸ್ರು ಲೋಕೇಷನ್ ಸರ್ಚ್ ಮಾಡಿದ್ರು. ಬಳಿಕ ಅವ್ನು ಕೋಯಿಕ್ಕೋಡ್​ ಲಾಡ್ಜ್​ನ ಎಸಿ ರೂಮ್​ನಲ್ಲಿ ಪ್ರೇಯಸಿ ಜೊತೆ ಇದ್ದ. ಸದ್ಯಕ್ಕೆ ಕಾಮುಕ ಸಂತೋಷ್​ ಹಾಗೂ ಹೋಮ್​ಗಾರ್ಡ್​ ಇಬ್ಬರನ್ನೂ ಅರೆಸ್ಟ್​ ಮಾಡಿದ್ದಾರೆ.

publive-image

ಸೆರೆಸಿಕ್ಕಿರೋ ಈ ಕೇಡಿ ಕಲಬುರ್ಗಿ ಮೂಲದವನಂತೆ.. ಬೆಂಗಳೂರಿನ ಆಟೋ ಮೊಬೈಲ್​ ಕಂಪನಿಯಲ್ಲಿ ಕಾರು ಓಡಿಸ್ಕೊಂಡಿದ್ದ. ಮೂಲಗಳ ಪ್ರಕಾರ ಯುವತಿಗೂ ಆತನಿಗೂ ಯಾವುದೇ ಸಂಬಂಧ ಇಲ್ಲ. ಈ ಸಂತೋಷ್​ನ ತಾಯಿ ಮನೆ ಕೆಲಸ ಮಾಡಿ ಸಾಕಿದ್ರು. ಇಷ್ಟಾದ್ರು ಇವ್ನಿಗೆ ಮಾತ್ರ ದುರ್ಬುದ್ಧಿ.

publive-image

ಇದನ್ನೂ ಓದಿ: ಬೆಂಗಳೂರಲ್ಲಿ ಯುವತಿ ಖಾಸಗಿ ಅಂಗ ಸ್ಪರ್ಶಿಸಿ ವಿಕೃತಿ ಮೆರೆದ ಯುವಕ ಕೊನೆಗೂ ಅರೆಸ್ಟ್​; ಆರೋಪಿ ಲಾಕ್ ಆಗಿದ್ದೇ ರೋಚಕ! 

ಕೊನೆಗೂ ಅರೆಸ್ಟ್ ಆದ್ನಲ್ಲಾ ಅನ್ನೋದೇನೋ ಸಮಾಧಾನ. ಒಬ್ಬಳು ಹೆಣ್ಣಾಗಿ ಮತ್ತೊಬ್ಬ ಹೆಣ್ಣಿಗೆ ಹಿಂಸೆ ಕೊಟ್ಟವನಿಗೆ ಸಹಾಯ ಮಾಡಿದ ತಪ್ಪಿಗೆ ಹೋಂ ಗಾರ್ಡ್​ ಕೂಡ ಲಾಕ್ ಆದ್ಲು. ಆದ್ರೆ, ಆವತ್ತು ರಾತ್ರಿ ಎಸ್.ಜಿ ಪಾಳ್ಯಕ್ಕೆ ಯಾಕ್ ಬಂದಿದ್ದ? ಈ ಪ್ರಶ್ನೆ ಪೊಲೀಸರ ತನಿಖೆ ಉತ್ತರ ಕೊಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment